ಅನುಭವ ಮಂಟಪ ಸೈದ್ಧಾಂತಿಕ ಸಂಸತ್ತು
Team Udayavani, Dec 11, 2017, 12:30 PM IST
ಬೀದರ: ಬಸವಾದಿ ಶರಣರು ಪ್ರಜಾಸತ್ತೆಯ ಹರಿಕಾರರಾಗಿದ್ದು, ಅವರು ಸ್ಥಾಪಿಸಿದ ಅನುಭವ ಮಂಟಪವೆಂದರೆ ಸೈದ್ಧಾಂತಿಕ ಪಾರ್ಲಿಮೆಂಟ್. ಮಹಿಳೆಯರಿಗೆ ಮೀಸಲಾತಿ ನೀಡಿದ ಪಾರ್ಲಿಮೆಂಟ್ ಎಂದರೆ ಅದು ಅನುಭವ ಮಂಟಪ ಎಂದು ಚಿತ್ರದುರ್ಗ ಮುರುಘಾಮಠದ ಡಾ| ಶಿವಮೂರ್ತಿ ಶರಣರು ನುಡಿದರು.
ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಬಸವ ದರ್ಶನ ಪ್ರವಚನ ಸಮಿತಿ ಆಯೋಜಿಸಿದ್ದ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೈದಿಕರ ಜಪ ದೇವಸ್ಥಾನವಾದರೆ, ಶ್ರೀಮಂತರ ಜಪ ಶಾಂತಿ, ಸಹನೆ ಸಮಾಧಾನ.
ದಲಿತರು, ಶೋಷಿತರ ಜಪ ಸಾಮಾಜಿಕ ನ್ಯಾಯದ ಸಮತೆಯ ಸ್ಥಾನ. ಲಿಂಗಾಯತರ ಜಪ ಸ್ವತಂತ್ರ ಧರ್ಮದ ಸ್ಥಾನಮಾನ ಎಂದು ಹೇಳಿದರು. ಭಾರತದಲ್ಲಿ ಶೋಷಿತರು, ದಲಿತರು, ನಿಮ್ನ ವರ್ಗದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಅವರೆಲ್ಲರಿಗೂ ಸಾಮಾಜಿಕ ಸ್ಥಾನಮಾನ ಬೇಕಿದೆ. ಅಂಬೇಡ್ಕರ ಸಾಮಾಜಿಕ ನ್ಯಾಯಕ್ಕೆ ಹೋರಾಡಿದರೂ ಅದು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಬಸವಣ್ಣನಂತಹ ಮೇಧಾವಿಗಳು 900 ವರ್ಷಗಳ ಹಿಂದೆಯೇ ಇಂತಹ ಕಾರ್ಯಕ್ಕೆ ಮುಂದಾಗಿದ್ದರು ಎಂದರು.
ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಮಾತನಾಡಿ, ದೇಶದಲ್ಲಿ ಧರ್ಮ ರಾಜಕಾರಣ ನಡೆಯುತ್ತಿದೆ. ಈ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದರು. ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನಮ್ಮದು ನಡೆ ನುಡಿ ಸಿದ್ಧಾಂತದ ತತ್ವ, ವಚನ ಸಾಹಿತ್ಯದೊಂದಿಗೆ,
ಅಂತರಂಗದೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಹುಲಸೂರಿನ ಶಿವಾನಂದ ಶ್ರೀಗಳು ಮಾತನಾಡಿ, ಒಳಸುಖ ನಡುಸುಖ, ಹೊರಸುಖ, ಪರಿಪೂರ್ಣ ಎನ್ನುವ ನಾಲ್ಕು ಸುಖಗಳಿದ್ದು, ನಿಜಗುಣಾನಂದ ಸ್ವಾಮಿಗಳ ಪ್ರವಚನ ಕೇಳಿ ಆನಂದಿಸಿದವರು ಪರಿಪೂರ್ಣ ಸುಖೀಗಳು. ಲಿಂಗಾಯತ ಧರ್ಮ ಸ್ವತಂತ್ರತೆಗಾಗಿ ಬಸವ ಲಿಂಗಾಯತ ಸ್ವಾಮಿಗಳ ಸಂಖ್ಯೆ ಕಡಿಮೆ ಇದ್ದರೂ ಬಸವ ತತ್ವನಿಷ್ಟ ಲಿಂಗಾಯತ ಜನರ ಸಂಖ್ಯೆ ಜಾಸ್ತಿಯಿದೆ. ಬೀದರಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡಬೇಕು ಎಂದರು.
ಅಥಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿಚಾರವೆಂದರೆ ಎಲ್ಲರಿಗೂ ಇಷ್ಟ, ಆಚರಣೆಗೆ ತರುವುದು ಕಷ್ಟ. ಬಸವಣ್ಣ ಪರಿಪೂರ್ಣ ವ್ಯಕ್ತಿತ್ವ ಹೊಂದಿದವರಾಗಿದ್ದು, ಅವರು ಮೊಟ್ಟಮೊದಲ ಸ್ವತಂತ್ರ ವಿಚಾರಧಾರೆಯವರು. ಯುವಕರಿಗೆ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದರೆ ಹುಲಿಗಳಾತ್ತಾರೆ. ಇಲ್ಲವಾದಲ್ಲಿ ನರಿಗಳಾಗುತ್ತಾರೆ ಎಂದು ಹೇಳಿದರು.
ಅಕ್ಕ ಅನ್ನಪೂರ್ಣ ತಾಯಿ ಮಾತನಾಡಿ, ಕಲ್ಯಾಣ ರಾಜ್ಯದ ಜ್ಯೋತಿ ಪ್ರಜ್ವಲಿಸುತ್ತಿದೆ. ವಚನಗಳ ಮಳೆಯಿಂದ ನಮ್ಮೆಲ್ಲರ ಮನದ ಕೊಳೆ ತೊಳೆಯಬೇಕು. ಮಗು ಹುಟ್ಟಿದಾಗಿ ನಿಂದ ಸಾಯುವತನಕ ಲಿಂಗಾಯತ ಧರ್ಮದ ಆಚಾರ ವಿಚಾರ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಗಟ್ಟಿ ನಿರ್ಧಾರ ಮಾಡಿ ಬಸವ ತತ್ವ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಡಾ| ಗಂಗಾಂಬಿಕಾ ಅಕ್ಕ ಮಾತನಾಡಿ, ಶರಣ ಸಂಸ್ಕೃತಿಯ ಉಳಿವು ಮಹಿಳೆಯರ ಕೈಯಲ್ಲಿದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಬಸವರಾಜ ಧನ್ನೂರ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಪ್ರವಚನದಲ್ಲಿ ಎಲ್ಲ ಧರ್ಮದವರು ಪಾಲ್ಗೊಂಡಿದ್ದಾರೆ. ಧರ್ಮಾಧಿಕಾರಿಗಳು ಯಾರ ಹಂಗಿನಲ್ಲಿಯೂ ಇರಬಾರದು. ನಮ್ಮ ಧರ್ಮ ಆ ಕಡೆ ಈ ಕಡೆ ಚೆಲ್ಲಾಪಿಲ್ಲಿಯಾಗಿದೆ. ಇನ್ನು ಮುಂದೆ ನಾವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಸ್ವತಂತ್ರ ಧರ್ಮಕ್ಕಾಗಿ ಪ್ರತಿಯೊಬ್ಬರೂ ಹೋರಾಡಬೇಕು. ಬಸವಣ್ಣನವರ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳೋಣ. ಬಸವ ಕಾಯಕಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಶಾಸಕ ರಹೀಮ್ ಖಾನ್, ಸೂರ್ಯಕಾಂತ ನಾಗಮಾರಪಳ್ಳಿ, ಬಿ.ನಾರಾಯಣ, ಬಸವರಾಜ ಬುಳ್ಳಾ ಹಾಗೂ ಸಂಗೀತ ಸೇವೆ ನೀಡಿದ ವೈಜಿನಾಥ ಸಜ್ಜನಶೆಟ್ಟಿ, ಚನ್ನಬಸಪ್ಪ ನೌಬಾದೆ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ಬರೆದ “ಕಿನ್ನರಿ ಬೊಮ್ಮಯ್ಯನ ವಚನಗಳ ವ್ಯಾಖ್ಯಾನ’ ಪುಸ್ತಕವನ್ನು ಮತ್ತು ಕಲಾವಿದ ಚ.ಭೀ. ಸೋಮಶೆಟ್ಟಿ ರಚಿಸಿರುವ ಬಸವಣ್ಣನವರ ಭಾವಚಿತ್ರವನ್ನು ಚಿತ್ರದುರ್ಗ ಶ್ರೀಗಳು ಬಿಡುಗಡೆ ಮಾಡಿದರು. ಪ್ರಭುರಾವ್ ವಸಮತೆ ಸ್ವಾಗತಿಸಿದರು, ಸುರೇಶ ಚನಶೆಟ್ಟಿ ನಿರೂಪಿಸಿದರು, ಶರಣಪ್ಪ ಮಿಠಾರೆ ವಂದಿಸಿದರು.
ಸಂವಿಧಾನ ಧರ್ಮ ಗ್ರಂಥವಾಗಲಿ ಕರ್ನಾಟಕದಲ್ಲಿ ಧರ್ಮ ಸಂಸತ್ ನಡೆದು, ಅಸ್ಪ್ರಶ್ಯತೆ ನಿವಾರಣೆ ಆಗಬೇಕೆಂಬ ಕುರಿತು ಚರ್ಚೆಯಾಯಿತು. ಆದರೆ, ಈ ನೆಲದಲ್ಲಿ ಬಸವಾದಿ ಪ್ರಥಮರು ಅಸ್ಪ್ರಶ್ಯತೆ ನಿವಾರಣೆ ಮಾಡಿ ಸಮಾನತೆ ಧಾರಿತ ಧರ್ಮ ಕಟ್ಟಿದ ಕುರಿತು ಮಾತೆತ್ತಿಲ್ಲ. ವೈದಿಕ ಪರಂಪರೆಯವರು ದೇಶದೊಳಗೆ ಸಂವಿಧಾನ ಬದಲಾವಣೆ ಮಾಡಲು ಬಯಸುತ್ತಿದ್ದಾರೆ.
ಪುರೋಹಿತರು ಆರ್ಯ, ವಿಪ್ರ, ಹಿಂದೂ ಎನ್ನುವ ತಳಹದಿ ಮೇಲೆ ಆಳುತ್ತಿದ್ದಾರೆ. ಹಿಂದೂ ಎನ್ನುವ ಶಬ್ದದ ಧರ್ಮವಾದರೆ ನಾವು ಒಪ್ಪುವುದಿಲ್ಲ. ರಾಜಕಾರಣಿಗಳು ಪಕ್ಷಾತೀತವಾಗಿ ಬಸವಣ್ಣನ ಕಾರ್ಯಕ್ಕೆ ಕೈ ಜೋಡಿಸಬೇಕು. ಸಂವಿಧಾನ ಧರ್ಮ ಗ್ರಂಥವಾಗಬೇಕು. ಈ ದೇಶವನ್ನು ಉಳಿಸಿದವರು ಬುದ್ಧ-ಬಸವ-ಅಂಬೇಡ್ಕರ ಎನ್ನುವ ಸತ್ಯ ಅರಿಯಬೇಕು.
ಶ್ರೀ ನಿಜಗುಣಾನಂದ ಸ್ವಾಮಿಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.