ಬೆಳೆ ಸಮೀಕೆಯಲ್ಲಿ ಲೋಪ ಬೇಡ
Team Udayavani, Aug 28, 2020, 7:20 PM IST
ಬೀದರ: ಜಿಲ್ಲೆಯಲ್ಲಿ ಮಳೆಯಿಂದಾಗಿ 19,305 ಹೇಕ್ಟರ್‌ನಲ್ಲಿ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಕೃಷಿ-ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಇನ್ನೂ ನಡೆಯಬೇಕಿದೆ. ಸಮೀಕ್ಷೆಯನ್ನು ಪರಿಣಾಮಕಾರಿ ಆಗಿ ನಡೆಸಿ ರೈತರ ಮನೆ ಬಾಗಿಲಿಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಲೋಪವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ಎಚ್ಚರಿಸಿದರು.
ತಾಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾಳಾದ ಬೆಳೆ ವೀಕ್ಷಣೆ ನಂತರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜೂನ್‌ನಿಂದ ಈವರೆಗೆ 445 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ. 19ರಷ್ಟು ಹೆಚ್ಚಾಗಿದೆ. ಮಳೆಯಿಂದ 13 ಸಾವಿರ ಹೆಕ್ಟೇರ್ ಹೆಸರು, 1600 ಹೆಕ್ಟೇರ್ ಉದ್ದು, 1294 ಹೆಕ್ಟೇರ್ ತೊಗರಿ, 3634 ಹೆಕ್ಟೇರ್‌ಸೋಯಾಬಿನ್ ಮತ್ತು 95 ಹೆಕ್ಟೇರ್ ಎಳ್ಳು ಬೆಳೆ ಹಾಳಾಗಿವೆ. ಹುಮನಾಬಾದ್ ತಾಲೂಕಿನಲ್ಲಿ 5548 ಹೆಕ್ಟೇರ್, ಭಾಲ್ಕಿಯಲ್ಲಿ 4100 ಹೆಕ್ಟೇರ್, ಬಸವಕಲ್ಯಾಣದಲ್ಲಿ 1605 ಹೆಕ್ಟೇರ್, ಬೀದರನಲ್ಲಿ 854 ಹೆಕ್ಟೇರ್ ಹಾಗೂ ಔರಾದನಲ್ಲಿ 814 ಹೆಕ್ಟೇರ್ ಬೆಳೆ ಹಾನೀಗೀಡಾಗಿದೆ ಎಂದು ಡಿಸಿ ಆರ್. ರಾಮಚಂದ್ರನ್ ಮಾಹಿತಿ ನೀಡಿದರು.
ಸರ್ಕಾರಿ ಸ್ಮಶಾನ ಭೂಮಿಯಿರಲಿ: ಜಿಲ್ಲೆಯಲ್ಲಿ ಯಾರೇ ಹೇಳಿದರೂ ಜಾತಿಯ ಆಧಾರದಲ್ಲಿ ಸ್ಮಶಾನ ಮಂಜೂರು ಮಾಡುವುದು ಬೇಡ. ಸರ್ಕಾರಿ ಸ್ಮಶಾನ ಎಂದೇ ಮಂಜೂರು ಮಾಡಬೇಕು. ಎಲ್ಲ ಸಮುದಾಯವರಿಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕು. ಮಾಸಾಶನ, ಸ್ಮಶಾನ ನನ್ನ ಆದ್ಯತಾ ವಲಯಗಳು ಎಂದರು. ಈಗಿರುವ ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಸ್ಥಳದಲ್ಲೇ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು. ಇಲ್ಲವಾದರೆ ಧರಣಿ ನಡೆಸಲಾಗುತ್ತದೆ. ಈ ಹಿಂದೆಯೇ ಇದಕ್ಕಾಗಿ 50 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದ್ದು,. ಆದಷ್ಟು ಬೇಗ ಸಂಕೀರ್ಣ ನಿರ್ಮಿಸಬೇಕು ಎಂದು ಶಾಸಕ ರಹೀಮ್ ಖಾನ್ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅಶೋಕ ಅವರು, ಈ ವಿಷಯ ನನ್ನ ಗಮನದಲ್ಲಿದೆ ಎಂದರು. ಸಭೆಯಲ್ಲಿ ಸಂಸದ ಭಗವಂತ ಖೂಬಾ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ರಾಜಶೇಖರ ಪಾಟೀಲ, ಬಿ. ನಾರಾಯಣರಾವ್, ರಘುನಾಥ ಮಲ್ಕಾಪುರೆ, ಕಂದಾಯ ಇಲಾಖೆ ಆಯುಕ್ತ ಡಾ| ಎನ್.ವಿ. ಪ್ರಸಾದ್, ಎಸ್ಪಿ ನಾಗೇಶ ಡಿ.ಎಲ್., ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಸಹಾಯಕ ಆಯುಕ್ತರು, ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.