ಗಂಟಲು-ಮೂಗಿನ ದ್ರವ ಮಾದರಿ ಸಂಗ್ರಹ
Team Udayavani, May 29, 2020, 7:10 AM IST
ನಾರಾಯಣಪುರ: ಮಹಾರಾಷ್ಟ್ರದಿಂದ ಮರಳಿ ಬಂದು ಇಲ್ಲಿನ ಬಿಸಿಎಂ ಹಾಸ್ಟೆಲ್, ಪದವಿ ಪೂರ್ವ ಕಾಲೇಜು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದ 269 ಜನ ವಲಸೆ ಕಾರ್ಮಿಕರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಗುರುವಾರ ಸಂಜೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು.
ಇಲ್ಲಿನ ಬಿಸಿಎಂ ಹಾಸ್ಟೆಲ್ 82, ಪದವಿಪೂರ್ವ ಕಾಲೇಜಿನ 127 ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ 60 ಜನ ವಾಸ್ತವ್ಯ ಹೂಡಿದ್ದು, ಕ್ವಾರಂಟೈನ್‌ನಲ್ಲಿನ ಎಲ್ಲಾ ಮಹಿಳೆಯರು, ಪುರುಷರು, ಮಕ್ಕಳ ಎಸ್. ಎರ್.ಎಫ್ ಐಡಿಯನ್ನು ತಯಾರಿಸಿ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪ್ರತಿಯೊಬ್ಬರ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಎಲ್ಲಾ ಮಾದರಿಗಳನ್ನು ಬೆಂಗಳೂರಿನ ಕೊರೊನಾ ಪರೀಕ್ಷಾ ಲ್ಯಾಬ್‌ಗ ಕಳುಹಿಸಿಕೊಡಲಾಗುವುದು. ಎರಡು, ಮೂರು ದಿನಗಳಲ್ಲಿ ವರದಿ ಬರುತ್ತದೆ ಎಂದು ನೇತೃತ್ವ ವಹಿಸಿದ್ದ ಡಾ.ಅಂಬೋರೆ, ಡಾ. ಹರ್ಷವರ್ಧನ ಪತ್ರಿಕೆಗೆ ತಿಳಿಸಿದರು.
ಪಿಡಿಒ ಶರಣಬಸವ ಬಿರಾದಾರ, ಗ್ರಾಪಂ ಅಧ್ಯಕ್ಷ ಧೀರಪ್ಪ, ಆರೋಗ್ಯ ಇಲಾಖೆಯ ಆನಂದ ಮಠ, ರಾಜಮಹ್ಮದ್, ರಾಮಚಂದ್ರ, ಗ್ರಾಪಂ ಕಾರ್ಯದರ್ಶಿ ಸಂತೋಷ, ಹುಸೇನ್ ಸಾಬ್ ಸೇರಿದಂತೆ ಗ್ರಾಪಂ, ಕಂದಾಯ, ಆರೋಗ್ಯ, ಶಿಕ್ಷಣ, ಪೊಲೀಸ್, ಹಾಸ್ಟೆಲ್ ಸಿಬ್ಬಂದಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.