![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Nov 15, 2020, 3:58 PM IST
ಬೀದರ: ಪಾರಂಪರಿಕ ಜಿಲ್ಲೆ ಬೀದರನಲ್ಲಿ ಹೆಮ್ಮಾರಿ ಕೋವಿಡ್ ಸೋಂಕಿನಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ ಈಗ ಚೇತರಿಕೆಯತ್ತ ಮುಖ ಮಾಡಿದೆ. ಲಾಕ್‌ಡೌನ್ ಬಹುತೇಕ ಸಡಿಲಿಕೆ ಹಿನ್ನೆಲೆ ಪ್ರೇಕ್ಷಣಿಯ ತಾಣಗಳಲ್ಲಿ ಪ್ರವಾಸಿಗರ ಕಲರವ ಶುರುವಾಗಿದೆ.
ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಭಾರತೀಯಪುರಾತತ್ವ (ಎಎಸ್‌ಐ) ಮತ್ತು ಪ್ರವಾಸೋದ್ಯಮ ಇಲಾಖೆಐದಾರು ತಿಂಗಳು ಸ್ಮಾರಕ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗೆ ನಿರ್ಬಂಧ ಹೇರಿದ್ದ ಕಾರಣ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಆದರೆ, ಸರ್ಕಾರ ಬಹುತೇಕ ನಿರ್ಬಂಧಗಳನ್ನು ಸಡಿಲಿರುವುದರಿಂದ ಕಳೆದ ಮೂರ್‍ನಾಲ್ಕು ತಿಂಗಳಿಂದ ಐತಿಹಾಸಿಕ ತಾಣಗಳ ಭೇಟಿಗೆ ಮುಕ್ತಗೊಳಿಸಿದೆ.
ಆರಂಭದಲ್ಲಿ ಕೋವಿಡ್ ಆತಂಕದಿಂದ ಪ್ರವಾಸಿಗರ ಸಂಖ್ಯೆ ಬೆರಳಣಿಕೆಯಷ್ಟೇ ಮಾತ್ರ ಇರುತ್ತಿತ್ತು. ಈಗ ಕಳೆದೆರಡು ತಿಂಗಳಿಂದ ಪ್ರವಾಸಿಗರ ದಂಡು ಹರಿದು ಬರಲಾರಂಭಿಸಿದೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವ್ಯಾಪ್ತಿಯಲ್ಲಿ ಬೀದರ ನಗರದ ಐತಿಹಾಸಿಕ ಕೋಟೆ, ಗವಾನ್ ಮದರಸಾ, ಬರೀದ್ ಶಾಹಿ ಗುಂಬಜ್ ಹಾಗೂ ಅಷ್ಟೂರಿನ ಬಹುಮನಿ ಗುಂಬಜ್‌ಗಳು ಸೇರಿದ್ದರೆ, ಇದರೊಟ್ಟಿಗೆ ಗುರುದ್ವಾರ, ನರಸಿಂಹ ಝರಣಾ, ಪಾಪನಾಶ, ಬಸವಕಲ್ಯಾಣದ ಶರಣರ ಸ್ಮಾರಕಗಳು, ನಾರಾಯಣಪುರ ಮಂದಿರ, ಉಮಾಪುರ ಮತ್ತು ಜಲಸಂಗಿ ಪುರಾತನ ದೇವಸ್ಥಾನ ಸೇರಿದಂತೆ ಅನೇಕ ಸ್ಮಾರಕಗಳು ಜಿಲ್ಲೆಯಲ್ಲಿವೆ.
ಎಎಸ್‌ಐ ಸಹಾಯಕ ಸರ್ವೇಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ಪ್ರಕಾರ ತಮ್ಮ ಅಧೀನದ ಸ್ಮಾರಕಗಳಿಗೆ ಪ್ರತಿ ನಿತ್ಯ 300-400 ಜನ, ಶನಿವಾರ- ರವಿವಾರದಂದು 800-1000 ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕೋವಿಡ್ ಆತಂಕ, ಒತ್ತಡದ ಬದುಕಿನಿಂದ ಬೇಸತ್ತವರು ತಮ್ಮ ಕುಟುಂಬ ಸಮೇತ ಕಣ್ಮನ ಸೆಳೆಯುವ ತಾಣಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರದ ಪ್ರವಾಸಿಗರು ಸಹ ಇರುತ್ತಿರುವುದು ವಿಶೇಷ. ಇದರಿಂದ ಪ್ರವಾಸೋದ್ಯಮವನ್ನೇ ಅವಲಂಬಿಸಿರುವವರಿಗೆ ಆಶಾಕಿರಣ ಮೂಡಿದೆ.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.