ಸಂಪರ್ಕ ರಹಿತ ಹಳ್ಳಿಗಳಿಗೂ ಸಾರಿಗೆ ಬಸ್!
Team Udayavani, Feb 8, 2022, 5:44 PM IST
ಮಸ್ಕಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡಿದರೂ ಇಲ್ಲಿನ ಹಳ್ಳಿಗಳು ಮಾತ್ರ ಸಾರಿಗೆ- ಸಂಪರ್ಕದಿಂದ ವಂಚಿತವಾಗಿದ್ದವು. ಗಡಿಭಾಗ, ಕಟ್ಟಕಡೆಯ ಹಳ್ಳಿಗಳು ಎನ್ನುವ ಕಾರಣಕ್ಕೆ ತತ್ಸಾರಕ್ಕೆ ತುತ್ತಾಗಿದ್ದ ಈ ಹಳ್ಳಿಗಳಿಗೀಗ ಸಾರಿಗೆ ಇಲಾಖೆ ಬಸ್ ಗಳ ಓಡಾಟದಿಂದ ಶುಕ್ರದೆಸೆ ತಿರುಗಿದೆ.
ತಾಲೂಕಿನ ಮ್ಯಾದರಾಳ, ಗೊಲ್ಲರಹಟ್ಟಿ, ವೀರಾಪೂರ, ಮಂಗಮನಹಟ್ಟಿ, ರಂಗಪ್ಪನ ತಾಂಡಾ, ದೇಸಾಯಿ ಬೋಗಾಪುರ, ದುರ್ಗ ಕ್ಯಾಂಪ್, ನಾರಾಯಣ ನಗರ ಕ್ಯಾಂಪ್ ಇವು ರಿಮೋಟ್ ಹಳ್ಳಿಗಳು. ಇಷ್ಟು ಹಳ್ಳಿಗಳು ಸ್ವತಂತ್ರ ದಕ್ಕಿದ 75 ವರ್ಷದ ಬಳಿಕ ಸಾರಿಗೆ ಇಲಾಖೆಯ ಬಸ್‌ಗಳ ದರ್ಶನ ಪಡೆದಿವೆ.
ನೆಟ್ಟಗಿರದ ರಸ್ತೆಗಳು, ಕಿರಿದಾದ ಸೇತುವೆ, ಬಸ್ ಓಡಿಸಿದರೆ ನಿರೀಕ್ಷಿತ ಆದಾಯವಿಲ್ಲ ಎನ್ನುವ ಕಾರಣಕ್ಕೆ ಬಸ್‌ಗಳನ್ನೇ ಕಾಣದಾಗಿದ್ದ ಇಷ್ಟು ಹಳ್ಳಿಗಳಲ್ಲೀಗ ಪ್ರತ್ಯೇಕ ಬಸ್‌ಗಳ ಓಡಾಟ ಆರಂಭವಾಗಿದ್ದು, ಇದರಿಂದಾಗಿ ಈ ಹಳ್ಳಿಗರಲ್ಲಿ ಸಂತಸ ಮೂಡಿದೆ.
ಕಳೆದ ಒಂದೆರಡು ವಾರಗಳಿಂದ ಮಸ್ಕಿ ಸಾರಿಗೆ ಘಟಕದಿಂದ ಹೊಸದಾಗಿ ಬಸ್ ಓಡಾಟ ಆರಂಭಿಸಲಾಗಿದ್ದು, ಖಾಸಗಿ ವಾಹನ ಇಲ್ಲವೇ ಪಾದಯಾತ್ರೆಯನ್ನೇ ಅವಲಂಬಿಸಿದ್ದವರಿಗೆ ದಿನಕ್ಕೆ ಐದರಿಂದ ಆರು ಕಿ.ಮೀ. ನಡೆದಾಡುವ ಕಷ್ಟ ತಪ್ಪಿತು ಎನ್ನುವ ಸಂತಸದ ಭಾವ ಮೂಡಿದೆ.
ಮಸ್ಕಿ ಸಾರಿಗೆ ಘಟಕ ಹಲವು ವರ್ಷಗಳಿಂದ ನಷ್ಟದಲ್ಲಿಯೇ ಇದೆ. ನಿರೀಕ್ಷಿತ ಆದಾಯವಿಲ್ಲದೇ ಸೊರಗಿದ್ದರೂ ಕಷ್ಟ-ನಷ್ಟದ ನಡುವೆ ಸಾರಿಗೆ ಘಟಕ ಸಾಗಿದೆ. ಇನ್ನು ಕೋವಿಡ್-19 ಕಾರಣದಿಂದಾಗಿ ಮತ್ತಷ್ಟು ನಷ್ಟದ ಭಾರ ಹೆಚ್ಚಿದ್ದರೂ ಸರಿದೂಗಿಸುವ ಪ್ರಯತ್ನವಾಗಿ ಈಗ ಮಸ್ಕಿ ಸಾರಿಗೆ ಘಟಕವೂ ಹೊಸ ರೂಟ್‌ಗಳನ್ನು ಆರಂಭಿಸುವ ಮೂಲಕ ಸವಾಲಿನ ಕೆಲಸಕ್ಕೆ ಕೈ ಹಾಕಿ ಜನರಿಂದ ಸೈ ಎನಿಸಿಕೊಂಡಿದೆ.
ಮ್ಯಾದರಾಳ, ದುರ್ಗ ಕ್ಯಾಂಪ್, ಗೊಲ್ಲರಹಟ್ಟಿ, ವೀರಾಪೂರ, ಮಂಗನಹಟ್ಟಿ, ರಂಗಪ್ಪನಹಟ್ಟಿ, ದೇಸಾಯಿ ಬೋಗಾಪೂರ ಮಾರ್ಗಗಳಲ್ಲಿ ನಿರೀಕ್ಷಿತ ಆದಾಯ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ ಇಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.
ಮಸ್ಕಿ- ಗುಂಡಾ, ಸಿಂಧನೂರು- ಗುಂಡಾದವರೆಗೆ ಮಾತ್ರ ಇದುವರೆಗೂ ಬಸ್ ಓಡಾಡುತ್ತಿದ್ದವು. ಗುಂಡಾ ಗ್ರಾಮದಿಂದ ಆಚೆಗೆ ಗುಡ್ಡು-ಗಾಡು ಪ್ರದೇಶದಲ್ಲಿದ್ದ ಮಂಗನಹಟ್ಟಿ, ಗೊಲ್ಲರಹಟ್ಟಿಗೆ ಬಸ್ ಗಳೇ ಇದ್ದಿಲ್ಲ. ಖಾಸಗಿ ವಾಹನಗಳ ಓಡಾಟವೂ ವಿರಳ. ಹೀಗಾಗಿ ಇಲ್ಲಿನ ಜನ ಪ್ರತಿಯೊಂದುಕ್ಕೂ ನಡೆದಾಡಿಕೊಂಡೇ ಬರಬೇಕಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಆಸ್ಪತ್ರೆ ಸೇರಿದಂತೆ ಇನ್ನಿತರ ಕಡೆ ತೆರಳಲು ಸರ್ಕಸ್ ನಡೆಸುವಂತಾಗಿತ್ತು. ಆದರೆ, ಈಗ ಬಸ್‌ಗಳ ಓಡಾಡದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಸ್ಕಿ ಘಟದಿಂದ ಹೊಸದಾಗಿ ಮಸ್ಕಿ-ಸಿಂಧನೂರು ತಡೆರಹಿತ ವಾಹನಗಳನ್ನು ಬಿಡಲಾಗಿದೆ. ಎರಡು ಪ್ರತ್ಯೇಕ ಬಸ್ ತಡೆರಹಿತವಾಗಿ ಓಡಾಡಲು ಆರಂಭ ಮಾಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ.
ಗಡಿ ಭಾಗದಲ್ಲಿನ ಹಲವು ಹಳ್ಳಿಗಳಿಗೆ ಬಸ್ ಸೌಲಭ್ಯ ಇದ್ದಿಲ್ಲ. ಅಂತಹ ಹಳ್ಳಿಗಳನ್ನು ಗುರುತು ಮಾಡಿ, ಅಲ್ಲಿನ ಜನರ ಬೇಡಿಕೆಯನ್ವಯ ಈಗ ಬಸ್ ಓಡಿಸಲಾಗುತ್ತಿದೆ. -ಶಿವಶಂಕರ ಪಾಟೀಲ್, ಘಟಕ ವ್ಯವಸ್ಥಾಪಕ, ಸಾರಿಗೆ ಇಲಾಖೆ ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.