ರಾಜಕೀಯ ಮುಖಂಡರಲ್ಲಿ ತಳಮಳ
•ಕಾಂಗ್ರೆಸ್ ನಿದ್ದೆಗೆಡಿಸಿದ ಚುನಾವಣೋತ್ತರ ಸಮೀಕ್ಷೆ •ಬಿಜೆಪಿ ಮುಖಂಡರಲ್ಲಿ ಮೂಡಿದೆ ಹೊಸ ಆಸೆ
Team Udayavani, May 23, 2019, 8:34 AM IST
ಬೀದರ: ನಗರದ ಬಿವಿಬಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆಯ ಮತ ಎಣಿಕೆ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ|ಎಚ್.ಆರ್. ಮಹಾದೇವ ಪರಿಶೀಲಿಸಿದರು.
ಬೀದರ: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಬೀದರ್ ಲೋಕಸಭೆ ಕ್ಷೇತ್ರದ ಫಲಿತಾಂಶ ಇಂದು ಅಧಿಕೃತ ಪ್ರಕಟಗೊಳ್ಳಲ್ಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ತಳಮಳ ಶುರುವಾಗಿದೆ.
ಚುನಾವಣೆ ದಿನಾಂಕ ಅಧಿಕೃತ ಘೋಷಣೆಗೊಂಡ ನಂತರ ಶುರುವಾದ ರಾಜಕೀಯ ಚಟುವಟಿಗಳು, ಚುನಾವಣೆ ಮುಗಿಯುವವರೆಗೂ ಭರದಿಂದ ನಡೆದಿದ್ದವು. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ತೀವ್ರ ಪೈಪೊಪೋ ನಡೆಸಿ ಪ್ರಚಾರ ಕಾರ್ಯಗಳು ನಡೆಸಿದ್ದವು. ಭಾಲ್ಕಿ ಶಾಸಕರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಹಾಗೂ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮಧ್ಯೆ ತುರುಸಿನ ಪೈಪೋಟಿ ನಡೆದಿದೆ. ಈಗ ಒಂದು ತಿಂಗಳ ನಂತರ ಫಲಿತಾಂಶ ಹೊರಬರಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ಡವ ಡವ ಹೆಚ್ಚಿಸಿದೆ.
ಫಲಿತಾಂಶಕ್ಕೂ ಮುನ್ನ ಬಹಿರಂಗವಾದ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದರೆ ಬಿಜೆಪಿ ಮುಖಂಡರಲ್ಲಿ ಹೊಸ ಆಸೆ ಮೂಡುವಂತೆ ಮಾಡಿದೆ. ಫಲಿತಾಂಶದ ಬಗ್ಗೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಮುಖಂಡರು ಮಾತ್ರವಲ್ಲ, ಕ್ಷೇತ್ರದ ಜನತೆ ಕೂಡ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮೂವರು ಕ್ಯಾಬಿನೇಟ್ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಬಲ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಈ ಚುನಾವಣೆಯಲ್ಲಿ ಅನಾಯಸವಾಗಿ ಗೆಲುತ್ತಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಮೋದಿ ಅಲೆ ಜತೆಗೆ ಮತದಾರರ ಮನ ಗೆದ್ದಿದ್ದೇವೆ, ಕೆಲಸ ಮಾಡಿದ್ದೇವೆ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂಬುದು ಬಿಜೆಪಿಯವರ ಆತ್ಮವಿಶ್ವಾಸವಾಗಿದ್ದು, ಇದೀಗ ಫಲಿತಾಂಶದ ಕಡೆಗೆ ಎಲ್ಲರೂ ಗಮನ ನೆಟ್ಟಿದ್ದಾರೆ.
ಮತದಾನದ ನಂತರ ಅನೇಕರು ನಿಖರವಾಗಿ ಫಲಿತಾಂಶ ಹೇಳುವಂತಿಲ್ಲ. ಫಿಫ್ಟಿ-ಫಿಪ್ಟಿ ಲೆಕ್ಕಾಚಾರ ಎಂದೇ ಅನೇಕರು ಭಾವಿಸಿದ್ದರು. ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಬಿಜೆಪಿ ಮುಖಂಡರಲ್ಲಿ ನಿರೀಕ್ಷೆಗಳು ಗರಿಗೆದರಿದ್ದರೆ, ಕಾಂಗ್ರೆಸ್ ಮುಖಂಡರು ಸರ್ವೇಗಳು ಉಲಾr ಹೊಡೆಯುತ್ತವೆ ಎಂದು ನಿರೀಕ್ಷೆಯಲ್ಲಿದ್ದಾರೆ.
ಫಲಿತಾಂಶ ವಿಳಂಬ: ಈ ಬಾರಿ ಲೋಕಸಭೆ ಚುನಾವಣೆಯ ಫಲಿತಾಂಶ ತಡವಾಗಿ ಪ್ರಕಟಗೊಳ್ಳಲಿದೆ. ನ್ಯಾಯಾಲಯದ ಆದೇಶದಂತೆ ಒಂದು ಲೋಕಸಭೆ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ತಲಾ ಐದು ವಿವಿ ಪ್ಯಾಟ್ ಯಂತ್ರಗಳಲ್ಲಿನ ಮತಗಳ ಎಣಿಕೆ ನಡೆಯಲಿದ್ದು, ಬೀದರ್ ಲೋಕಸಭೆಯ 8 ವಿಧಾನಸಭೆಗಳ ಒಟ್ಟು 40 ವಿವಿಪ್ಯಾಟ್ ಯಂತ್ರಗಳ ಮತ ಎಣಿಕೆ ನಡೆಯಲಿದೆ. ಸಾಮಾನ್ಯವಾಗಿ 12 ಗಂಟೆಗಳ ವರೆಗೆ ಫಲಿತಾಂಶ ಈ ಹಿಂದೆ ಪ್ರಕಟವಾಗುತ್ತಿತ್ತು. ಆದರೆ, ಇದೀಗ ಮಧ್ಯಾಹ್ನ 3ಗಂಟೆ ಬಳಿಕ ಫಲಿತಾಂಶ ನಿಚ್ಚಳವಾಗುವ ನಿರೀಕ್ಷೆಯಿದೆ. ಇವಿಎಂ ಯಂತ್ರಗಳ ಮತ ಎಣಿಕೆ ಹಾಗೂ ವಿವಿಪ್ಯಾಟ್ ಮುದ್ರಿತ ಮತಗಳ ಹೊಂದಾಣಿಕೆ ಈ ಬಾರಿ ನಡೆಯಲಿದೆ.
ಮೊಬೈಲ್ ನಿಷೇಧ: ಮತ ಎಣಿಕೆ ಕೇಂದ್ರಗಳಲ್ಲಿ ಈ ಬಾರಿ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹಾಕಲಾಗಿದೆ. ಚುನಾವಣಾ ಅಧಿಕಾರಿಗಳು ಕೂಡ ಮೊಬೈಲ್ ಬಳಕೆಗೆ ನಿಷೇಧ ಹಾಕಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಮಾಧ್ಯಮ ಕೇಂದ್ರದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಬರುವ ಸಿಬ್ಬಂದಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರು ಕೂಡ ಮೊಬೈಲ್ ತರದಂತೆ ಈಗಾಗಲೇ ಚುನಾವಣೆ ಆಯೋಗ ಸೂಚಿಸಿದೆ. ಮನೆಯಿಂದ ಮೊಬೈಲ್ ತಂದವರು ಯಾವುದೇ ವಾಹನಗಳಲ್ಲಿ ಇರಿಸದಂತೆ ಕೂಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಾರಣ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಮೊಬೈಲ್ ನ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಮನೆಯಿಂದಲೇ ಮೊಬೈಲ್ ತರದಂತೆ ಸೂಚಿಸಿದ್ದಾರೆ.
ಆನ್‌ಲೈನ್‌ಲ್ಲಿ ಫಲಿತಾಂಶ: ಈ ಬಾರಿ ಚುನಾವಣೆಯ ಫಲಿತಾಂಶ ಆನ್‌ಲೈನ್ ಮೂಲಕ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೂರು ಬಿಎಸ್‌ಎನ್‌ಎಲ್ ಸಂಪರ್ಕ, ಒಂದು ಏರಟೆಲ್ ಇಂಟರ್‌ನೆಟ್ ಸಂರ್ಪಕ ಪಡೆದುಕೊಂಡಿದ್ದಾರೆ. ಅಲ್ಲದೆ, ಯಾವುದೇ ಸಂದರ್ಭದಲ್ಲಿ ಇಂಟರ್‌ನೆಟ್ ಸಮಸ್ಯೆಕಂಡು ಬಂದಲ್ಲಿ ಡೊಂಗಲ್ ಬಳಕ್ಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಒಂದು ಹಂತದ ಮತ ಎಣಿಕೆಯ ಮಾಹಿತಿ ಆನ್‌ಲೈನ್‌ಲ್ಲಿ ಲಭ್ಯ ಆಗಲಿದೆ. ಅಲ್ಲದೆ, ಸುವಿಧಾ ಮೊಬೈಲ್ ಆ್ಯಪ್ ಮೂಲಕ ಕೂಡ ಮತ ಎಣಿಕೆಯ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್. ಮಹಾದೇವ ಮಾಹಿತಿ ನೀಡಿದ್ದಾರೆ.
•ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.