ಬೀದರ್ ನಲ್ಲಿ ಕೋವಿಡ್ 19 ಸೋಂಕಿಗೆ ಮತ್ತಿಬ್ಬರು ಬಲಿ ; 10 ಹೊಸ ಪ್ರಕರಣ ಪತ್ತೆ
Team Udayavani, Jun 19, 2020, 8:05 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ್: ರಾಜ್ಯದ ಗಡಿ ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧಿತ ಸಾವಿನ ಸರಣಿ ಮುಂದುವರೆದಿದೆ.
ಇಂದು ಈ ಮಹಾಮಾರಿ ಸೋಂಕಿಗೆ ಜಿಲ್ಲೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ ಬೀದರ್ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ತಲುಪಿದೆ.
ಇನ್ನೊಂದೆಡೆ, ಜಿಲ್ಲೆಯಲ್ಲಿ ಶುಕ್ರವಾರದಂದು 10 ಹೊಸ ಕೋವಿಡ್ 19 ಸೋಂಕು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಮಂಗಳವಾರದಿಂದ ಸತತ ಮೂರು ದಿನ ಮರಣ ಮೃದಂಗ ಬಾರಿಸಿರುವ ಕೋವಿಡ್ ಇಂದು ಒಂದೇ ದಿನ ಇಬ್ಬರನ್ನು ಬಲಿ ಪಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಬೀದರ ನಗರದ ಮಾಂಗರವಾಡಿ ಗಲ್ಲಿಯ 45 ವರ್ಷದ ವ್ಯಕ್ತಿ (ಪಿ-7959) ಗುರುವಾರ ಸಾವನ್ನಪ್ಪಿದ್ದು, ಇವರು ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಜೂ. 13ರಂದು ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು, ಬಸವಕಲ್ಯಾಣ ಧಾರಾಗಿರಿಯ 70 ವರ್ಷದ ವ್ಯಕ್ತಿ (ಪಿ-7962) ಉಸಿರಾಟದ ತೊಂದರೆಯಿಂದ ಜೂ. 11ರಂದು ಸಾವನ್ನಪ್ಪಿದ್ದು, ಇವರಿಬ್ಬರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಇಂದು ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಮೃತಪಟ್ಟವರ ಸಂಖ್ಯೆಯ ಜಿಲ್ಲಾವಾರು ಪಟ್ಟಿಯಲ್ಲಿ ಸದ್ಯಕ್ಕೆ ಬೀದರ್ ಮತ್ತು ಕಲ್ಬುರ್ಗಿ ಎರಡನೇ ಸ್ಥಾನದಲ್ಲಿದೆ.
ಬೀದರ್ ನ ಓಲ್ಡ್ ಸಿಟಿಯ 82 ವರ್ಷದ (ಪಿ-590) ವ್ಯಕ್ತಿ ಕೋವಿಡ್ ಗೆ ಮೊದಲ ಬಲಿ ಆಗಿದ್ದರು. ನಂತರ ಚಿಟಗುಪ್ಪಾದ 50 ವರ್ಷದ (ಪಿ-1041), ಬೀದರ ವಿದ್ಯಾನಗರದ 49 ವರ್ಷದ (ಪಿ-1712), ಫಾತ್ಮಾಪೂರದ 47 ವರ್ಷದ ಮಹಿಳೆ (ಪಿ-2783), ಚಿಟಗುಪ್ಪದ 75 ವರ್ಷದ ವ್ಯಕ್ತಿ (ಪಿ-2965), ಬೀದರ್ ಗವಾನ್ ಚೌಕ್‌ನ 59 ವರ್ಷದ ಮಹಿಳೆ (ಪಿ-1950) ಹಾಗೂ ಬೀದರ ಶಹಾಗಂಜ್‌ನ 49 ವರ್ಷದ ವ್ಯಕ್ತಿ (ಪಿ-7524), ಮಲ್ಕಾಪೂರ ಗ್ರಾಮದ 26 ವರ್ಷದ ಯುವಕ (ಪಿ-7695) ಮತ್ತು ಚಿಟಗುಪ್ಪದ 55 ವರ್ಷದ (ಪಿ-7776) ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರು.
ಇಂದು ಪತ್ತೆಯಾದ ಹೊಸ ಸೋಂಕಿನ 10 ಪ್ರಕರಣಗಳಲ್ಲಿ ಬಸವಕಲ್ಯಾಣ ಪಟ್ಟಣದ ಧಾರಾಗಿರಿಯ 1, ತಾಲೂಕಿನ ಬಟಗೇರಾ, ಹನುಮನಗರ, ಬೆಟಬಾಲಕುಂದಾ ಗ್ರಾಮದ ತಲಾ ಒಂದು ಸೇರಿ ಒಟ್ಟು 4, ಬೀದರ ನಗರದ ಚೌಬಾರಾದ 2, ಮಾಂಗರವಾಡಿ 1 ಹಾಗೂ ತಾಲೂಕಿನ ಚಿಲ್ಲರ್ಗಿ ಗ್ರಾಮದ 1 ಸೇರಿ ಒಟ್ಟು 4, ಭಾಲ್ಕಿ ಪಟ್ಟಣ ಮತ್ತು ಚಿಟಗುಪ್ಪ ಪಟ್ಟಣದ ತಲಾ 1 ಪ್ರಕರಣಗಳು ಸೇರಿವೆ.
ಜಿಲ್ಲೆಯಲ್ಲಿ ಈಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 411 ಆದಂತಾಗಿದೆ. ಇವರಲ್ಲಿ 11 ಜನ ಈಗಾಗಲೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಇಬ್ಬರು ಸೇರಿ ಒಟ್ಟು 254 ಜನ ಈಗಾಗಲೇ ಗುಣಮುಖರಾಗಿದ್ದಾರೆ ಮತ್ತು ಜಿಲ್ಲೆಯಲ್ಲಿ ಇನ್ನೂ 146 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ತನ್ನ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.