ಯುಜಿಡಿ; ದಾಖಲೆಯಲ್ಲೂ ಗೋಲ್‌ಮಾಲ್
ಪುರಸಭೆಗೆ ಯಾವುದೇ ದಾಖಲೆಗಳು ಸಲ್ಲಿಸಿಲ್ಲ ಎಂದು ಪುರಸಭೆ ಅಧಿ ಕಾರಿ ಮಾಹಿತಿ ನೀಡಿದ್ದಾರೆ.
Team Udayavani, Feb 12, 2021, 5:50 PM IST
ಹುಮನಾಬಾದ: ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಹುಮನಾಬಾದ ಪಟ್ಟಣದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಒಳಚರಂಡಿ ವ್ಯವಸ್ಥೆ ಕಾಮಗಾರಿ (ಯುಜಿಡಿ)ಗೆ ಸಂಬಂಧಿ ಸಿದ ಉಳಿದ ಹಣ ಪಾವತಿ ಮಾಡುವಂತೆ ಗುತ್ತೆದಾರ ಪುರಸಭೆಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಪುರಸಭೆ ಮುಖ್ಯಾಧಿ ಕಾರಿಗೆ ಪತ್ರ ಬರೆದಿರುವ ಗುತ್ತಿಗೆ ಪಡೆದ ಗುತ್ತೆದಾರ, ಯುಜಿಡಿ ಕಾಮಗಾರಿಗಾಗಿ ಇರಿಸಿದ ಬ್ಯಾಂಕ್ ಖಾತರಿ ಹಣ ಹಾಗೂ ಕಾಮಗಾರಿಯ ಉಳಿದ ಹಣ ನಿಯಮ ಅನುಸಾರ ಪಾವತಿ ಮಾಡುವಂತೆ ಪತ್ರ ಬರೆದಿದ್ದಾರೆ. ಹಣ ಪಾವತಿ ತಡವಾದರೆ ವರ್ಷಕ್ಕೆ ಶೇ.18 ಬಡ್ಡಿ ಪಾವತಿ ಮಾಡಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ. ಕಾಮಗಾರಿಯ ಬಾಕಿ ಹಣ 83.71 ಲಕ್ಷ ರೂ. ಹಾಗೂ ಬ್ಯಾಂಕ್ ಖಾತರಿ ಹಣ ಪಾವತಿ
ಮಾಡಬೇಕು ಎಂದು ವಿವರಿಸಿದ್ದಾರೆ.
ಲಭ್ಯವಿಲ್ಲ ದಾಖಲೆ: ಬಹು ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳು ಕೂಡ ಸ್ಥಳೀಯ ಪುರಸಭೆಯಲ್ಲಿ ಲಭ್ಯ ಇಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದೆ. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಹಾಗೂ ಪುರಸಭೆ ಅ ಧಿಕಾರಿಗಳ ಮಧ್ಯೆ ನಡೆಯುತ್ತಿರುವ ಪತ್ರ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಬಿಟ್ಟರೆ ಯುಜಿಡಿ ಕಾಮಗಾರಿಯ ಸ್ಕೋಪ್ ಆಫ್ ವರ್ಕ್, ಕಾಮಗಾರಿಯ ಕ್ರಿಯಾ ಯೋಜನೆ, ಕಾರ್ಯ ನಿರ್ವಹಣೆ ವಿವರ, ಕಾಮಗಾರಿಯ ವಸ್ತುಗಳ ವಿವರ, ಕಾಮಗಾರಿಯ ಪೂರ್ಣ ವಿವರದ ಯಾವ ದಾಖಲೆಗಳು ಕೂಡ ಪುರಸಭೆಯಲ್ಲಿ ಲಭ್ಯವಿಲ್ಲ. ಕಾಮಗಾರಿ ಮಾಡಿದ ಗುತ್ತೆದಾರರು ಸಂಬಂಧಿಸಿದ ಇಂಜಿನಿಯರ್ ಅಥವಾ ಪುರಸಭೆಗೆ ಯಾವುದೇ ದಾಖಲೆಗಳು ಸಲ್ಲಿಸಿಲ್ಲ
ಎಂದು ಪುರಸಭೆ ಅಧಿ ಕಾರಿ ಮಾಹಿತಿ ನೀಡಿದ್ದಾರೆ.
ಉನ್ನತ ತನಿಖೆ ನಡೆಸಿ: ಕಳೆದ ಅನೇಕ ವರ್ಷಗಳಿಂದ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಲೇ ಇದೆ. ಇಂದಿಗೂ ಕೂಡ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಕೊಳಚೆ ನೀರು ಹರಿದು ಎಸ್‌ಟಿಪಿಗೆ ಸೇರುವ ಪ್ರಾಯೋಗಿಕ ಪರೀಕ್ಷೆ ನಡೆದಿಲ್ಲ.
ಪುರಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ದೊರೆಯುತ್ತಿಲ್ಲ. ಕಾಮಗಾರಿ ಮಾಡಿದ ಗುತ್ತೆದಾರ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಪುರಸಭೆಗೆ
ದಾಖಲೆಗಳು ಸಲ್ಲಿಸುವ ಬದಲಿಗೆ ನೇರವಾಗಿ ಕೆಯುಐಡಿಎಫ್‌ಸಿ ಇಲಾಖೆಗೆ ದಾಖಲೆಗಳು ಸಲ್ಲಿಸಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು
ಉನ್ನತ ತನಿಖೆ ನಡೆಸುವ ಅವಶ್ಯಕತೆ ಹೆಚ್ಚಿದೆ.
15-10-2019ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತೆದಾರ ಕೆಯುಐಡಿಎಫ್‌ಸಿ ಇಲಾಖೆಗೆ ಪೂರ್ಣ ದಾಖಲೆ ಸಲ್ಲಿಸಿದ್ದು, ಆ ದಾಖಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಕುರಿತು ವಿವಿಧ ಚಿತ್ರಗಳು ಕೂಡ ಲಗತ್ತಿಸಲಾಗಿದೆ. ಗುತ್ತೆದಾರ ಹಾಗೂ ಪುರಸಭೆ ಮುಖ್ಯಾಧಿ ಕಾರಿಗಳು ಚಿತ್ರಗಳಲ್ಲಿ ಕಂಡು ಬರುತ್ತಿದ್ದು, ಆ ಚಿತ್ರಗಳು ಕಾಮಗಾರಿ ಪೂರ್ಣಗೊಂಡ ಸಂದರ್ಭದಲ್ಲಿ ತೆಗೆದ ಚಿತ್ರಗಳು ಅಲ್ಲ.
ಶಂಭುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ
ಯುಜಿಡಿ ಕಾಮಗಾರಿ ಕುರಿತು ಗುತ್ತೆದಾರರು ಪುರಸಭೆಗೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಕೂಡಲೇ ಕಾಮಗಾರಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳು ಸಲ್ಲಿಸುವಂತೆ ಸೂಚಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಖುದ್ದು ಬಂದು ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ. ಈವರೆಗೆ ಕಾಮಗಾರಿ ಹಸ್ತಾಂತರಿಸಿಕೊಂಡಿಲ್ಲ. ಕಾಮಗಾರಿ ಸಂದರ್ಭದಲ್ಲಿ ಭೇಟಿ ನೀಡಿದ ಸಮಯದಲ್ಲಿ ಗುತ್ತೆದಾರರು ವಿವಿಧ ಚಿತ್ರಗಳು ತೆಗೆದುಕೊಂಡಿದ್ದು, ಆ ಚಿತ್ರಗಳು ಬಳಸಿಕೊಂಡು ಕಾಮಗಾರಿ ಪೂರ್ಣಗೊಂಡಿದೆ ಎಂದು ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಕಾಮಗಾರಿ ಕುರಿತು ಪೂರ್ಣ ವಿವರ ನೀಡಿ ಹಾಗೂ ಶಾಸಕರ ಸಮುಖ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದ ನಂತರ ಹಸ್ತಾಂತರ ಮಾಡಿಕೊಳ್ಳುವುದಾಗಿ ತಿಳಿಸಲಾಗಿದೆ.
ಮಲ್ಲಿಕಾರ್ಜುನ ಸೀಗಿ, ಪುರಸಭೆ ಮಾಜಿ ಉಪಾಧ್ಯಕ್ಷ
*ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.