ಕಾಲುಬಾಯಿ ರೋಗಕ್ಕೆ ಲಸಿಕೆ
Team Udayavani, Jun 4, 2018, 10:32 AM IST
ಭಾಲ್ಕಿ: ಕಾಲುಬಾಯಿ ರೋಗ ತಡೆಗಟ್ಟಲು ಪಶುವೈದ್ಯಕೀಯ ಇಲಾಖೆ ವತಿಯಿಂದ 14ನೇ ಸುತ್ತಿನ ಲಸಿಕೆ ಕಾರ್ಯಕ್ರಮದಡಿ ಹಲಬರ್ಗಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ಲಸಿಕೆ ಹಾಕಲಾಯಿತು.
ಪಶುವೈದ್ಯಾಧಿಕಾರಿ ಮರುಳುಸಿದ್ದ ಮಾತನಾಡಿ, ರೈತರು ಕಡ್ಡಾಯವಾಗಿ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು.
ಇದರಿಂದ ರೋಗ ನಿವಾರಣೆಯ ಜತೆಗೆ ಹಾಲು ಉತ್ಪಾದನೆಯಲ್ಲಿ ಪ್ರಗತಿ ಆಗುತ್ತದೆ ಎಂದು ತಿಳಿಸಿದರು.
ವೈದ್ಯಾಧಿಕಾರಿ ಮಹಿಪಾಲ್‌ಸಿಂಗ್ ಮಾತನಾಡಿ, ರೋಗಗ್ರಸ್ತ ರಾಸುಗಳಲ್ಲಿ ಮೊದಲಿಗೆ ಜ್ವರ ಕಾಣಿಸುತ್ತದೆ. ಮೇವು
ಹೆಚ್ಚಾಗಿ ತಿನ್ನುವುದಿಲ್ಲ. ಬಾಯಲ್ಲಿ ಚಿಕ್ಕಚಿಕ್ಕ ನೀರ್ಗುಳ್ಳೆಗಳಾಗಿ ಕ್ರಮೇಣ ಗುಳ್ಳೆಗಳು ಒಡೆದು ಜೊಲ್ಲು ಸುರಿಯುತ್ತವೆ.
ಒಮ್ಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಜಾಸ್ತಿಯಾಗಿ ಮೇಲಿನ ಪದರವೇ ಕಿತ್ತು ಬರುತ್ತದೆ. ಬಾಯಿ ಹುಣ್ಣಿನಿಂದಾಗಿ
ಮೇವು ತಿನ್ನಲಾಗುವುದಿಲ್ಲ. ಕಾಲಿನ ಗೊರಸಿನ ಮಧ್ಯ ಹುಣ್ಣುಗಳಾಗಿ ನೋಣ ಕುಳಿತು ಹುಳುಗಳಾಗುತ್ತವೆ. ಕೆಲವು
ರಾಸುಗಳಲ್ಲಿ ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸುತ್ತವೆ. ತುಂಬು ಗರ್ಭದ ರಾಸುಗಳಲ್ಲಿ ಗರ್ಭಪಾತವಾಗುವ
ಸಂಭವ ಹೆಚ್ಚು. ಸುಮಾರು 8ರಿಂದ 12 ದಿನಗಳ ವರೆಗೆ ರಾಸುಗಳು ಅಪಾರ ವೇದನೆಯಿಂದ ನರಳುತ್ತವೆ ಎಂದು
ರೋಗದ ಲಕ್ಷಣಗಳ ಕುರಿತು ಮಾಹಿತಿ ನೀಡಿದರು. ವೈದ್ಯಾಧಿಕಾರಿ ಶ್ರೀಧರ ವೃಂದಾ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Robbery: ಬೀದರ್ ದರೋಡೆ ಬಿಹಾರಿ ಗ್ಯಾಂಗ್ ಕೃತ್ಯ: ಪೊಲೀಸರು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.