ವಚನ-ದಾಸ ಸಾಹಿತ್ಯ ಅಗ್ರಮಾನ್ಯ: ಡಾ| ಹೇಮಲತಾ ವಡ್ಡೆ
Team Udayavani, Jan 19, 2018, 12:05 PM IST
ಬೀದರ: ಶರಣರು ಮತ್ತು ದಾಸರು ತಮ್ಮ ಅನುಭಾವದ ನೆಲೆಯಿಂದ ವಚನ, ಕೀರ್ತನೆಗಳನ್ನು ರಚಿಸಿದ್ದಾರೆ. ವಿಶ್ವ
ಸಮುದಾಯಕ್ಕೆ ಅವರು ನೀಡಿರುವ ಮಾನವೀಯ, ಸಾಮಾಜಿಕ ಹಾಗೂ ಜೀವನ ಮೌಲ್ಯ ಭರಿತ ಸಂದೇಶಗಳನ್ನು ಅನುಕರಿಸಿ ಆದರ್ಶ ಬದುಕು ಕಟ್ಟಿಕೋಳ್ಳಬೇಕೆಂದು ಬೆಂಗಳೂರು ವಿವಿ ಪ್ರಾಧ್ಯಾಪಕಿ ಡಾ| ಹೇಮಲತಾ ವಡ್ಡೆ ಹೇಳಿದರು.
ನಗರದ ರಾಘವೇಂದ್ರಸ್ವಾಮಿ ಮಠದ ರಮಾ ಮಂಟಪದಲ್ಲಿ ಅಖೀಲ ಭಾರತ ದಾಸ ಸಾಹಿತ್ಯ ಪರಿಷತ್ತು ಪುರಂದರ
ದಾಸರ ಆರಾಧನೆ ನಿಮಿತ್ತ ಹಮ್ಮಿಕೊಂಡಿದ್ದ “ಪುರಂದರದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯಗಳು ಅಗ್ರಮಾನ್ಯ ಸಾಹಿತ್ಯವಾಗಿ ಹೆಸರು ಪಡೆದಿವೆ. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ರೂಪಿಸುವಲ್ಲಿ, ಸಮೃದ್ಧಿಗೊಳಿಸುವಲ್ಲಿ ದಾಸರ ಕೊಡಗೆ ಅತ್ಯಂತ ಮಹತ್ವಪೂರ್ಣವಾದುದು ಎಂದರು.
ಶ್ರೀಮಠದ ಅರ್ಚಕ ಮಿಲಿಂದಾಚಾರ್ಯರು ಉಪನ್ಯಾಸ ನೀಡಿ, ಸಮಾಜದ ಜನರಲ್ಲಿ ಅಂತಃ ಕರಣ ಶುದ್ಧಿಗೆ ದಾರಿಮಾಡಿಕೊಡುವ, ಕಾಮ ಕ್ರೋಧಾದಿಗಳ ಬಗ್ಗೆ ಜಾಗೃತಿ ಮೂಡಿಸುವ, ಪರನಿಂದೆ, ಹಿಂಸೆ, ವಂಚನೆಗಳಿಂದ ಮನಸ್ಸನ್ನು ಮುಕ್ತಮಾಡುವ ಒಂದು ಚಳವಳಿಯನ್ನು ಪುರಂದರದಾಸರು ಪ್ರಾರಂಭಿಸಿದರು. ಅವರು ಪರಿಶುದ್ಧ, ಪಾವನ, ಪವಿತ್ರವಾದ ಜೀವನ ನಡೆಸಲು ಜನತೆಗೆ ಕರೆ ಕೊಟ್ಟರು. ವಿಚಾರವಿಲ್ಲದೆ ಪರರ ದೂಷಿಸುವವರಿಗೆ ಕೀರ್ತನೆಗಳಿಂದ ಬುದ್ಧಿ ಹೇಳಿದ್ದಾರೆ ಎಂದು ಹೇಳಿದರು.
ಉಪನ್ಯಾಸಕಿ ಡಾ| ಶೀಲಾ ಬಿರಾದಾರ ಮಾತನಾಡಿ, ಶರಣರು, ದಾಸರು, ಸಂತರು, ಸೂಫಿಗಳು, ನಾಥರು, ಸಮಾಜ ಸುಧಾರಕರು, ಮನಸ್ಸು-ಬುದ್ಧಿಯನ್ನೂ ಶುದ್ಧಿ ಮಾಡುವ, ಹೃದಯ ಸಂಸ್ಕರಣ ಮಾಡುವ, ಉತ್ತಮ ಸಂಸ್ಕಾರ ನೀಡುವ ಸಾಹಿತ್ಯವನ್ನು ನೀಡಿದ್ದಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಪವಾರ ಅವರು ಪುರಂದರ ವಿಠ್ಠಲ ಭಜನಾ ಮಂಡಳಿಗೆ ಚಾಲನೆ
ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಪಾಟೀಲ ಮಾತನಾಡಿ, ದಾಸರು ಸಮಾಜಕ್ಕೆ ಅತ್ಯಮೂಲ್ಯವಾದ ಕಾಣಿಕೆ ನೀಡಿದ್ದಾರೆ.
ಅವರ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಹೆಚ್ಚು ಪ್ರಮಾಣದಲ್ಲಿ ಆಗಬೇಕು ಎಂದರು. ಸಪ್ತಗಿರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗೋಪಾಲ ತಾಂದಳೆ ಹಾಗೂ ನರಸಿಂಹಸ್ವಾಮಿ ದೇವಸ್ಥಾನದ ಅಧ್ಯಕ್ಷ ಕಲ್ಲಪ್ಪ ನಕನಳ್ಳಿಕರ್
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪರಿಷತ್ತಿನ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಂದಾಚಾರ್ಯರು
ಹಾಗೂ ಮಹೇಶಕುಮಾರ ಮೈಲೂರಕರ್ ಕೀರ್ತನೆ, ಗಾಯನ ನಡೆಸಿಕೊಟ್ಟರು. ಮಹೇಬೂಬ ಉಸ್ತಾದ ನಿರೂಪಿಸಿದರು. ಆತ್ಮಾನಂದ ಬಂಬಳಗಿ ಸ್ವಾಗತಿಸಿದರು. ರಾಮಶೆಟ್ಟಿ ಐನೋಳ್ಳೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.