ವಚನ ವಿಶ್ವವಿದ್ಯಾಲಯ ಆರಂಭ ಅಗತ್ಯ: ಪ್ರೊ| ಕೋರಗಲ್
Team Udayavani, Feb 2, 2019, 7:44 AM IST
ಬಸವಕಲ್ಯಾಣ: ಕಲ್ಯಾಣ ಕರ್ನಾಟಕದಲ್ಲಿ ವಚನ ಸಾಹಿತ್ಯ ಬೆಳೆದಂತೆ, ಆಧುನಿಕ ಸಾಹಿತ್ಯ ಕೂಡ ಬೆಳೆಯುತ್ತಿರುವುದು ಸಾಹಿತಿಗಳಿಗೆ ಮತ್ತು ಸಾಹಿತ್ಯ ಆಸಕ್ತರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹಾವೇರಿಯ ಸಾಹಿತಿ ಪ್ರೊ| ವಿರೂಪಾಕ್ಷಪ್ಪಾ ಕೋರಗಲ್ ಹೇಳಿದರು.
ಸಸ್ತಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ 33ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಸಂಸ್ಕೃತಿ ಮೂಲಕ ವಿಶ್ವಗುರು ಬಸವಣ್ಣನವರು, ದಾಸೋಹ ಸಂಸ್ಕೃತಿ ಕಲಿಸಿದ್ದರು. ಹಾಗಾಗಿ ಆಧುನಿಕ ವಚನಕಾರರು, ಪ್ರಸಕ್ತ ಸಮಸ್ಯೆಗಳನ್ನು ಇಟ್ಟುಕೊಂಡು ವಚನ ರಚಿಸಲಿ ಎಂದ ಅವರು, ಜೀವನಕ್ಕೆ ಧಾರ್ಮಿಕ ಆಚರಣೆಗಳು ಮತ್ತು ವಚನಗಳು ದಾರಿದೀಪವಾಗಿವೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರಾದ ಉದಗಿರಿಯ ಸಾಹಿತಿ ಮಾಣಿಕರಾವ್ ಬಿರಾದಾರ್ ಮಾತನಾಡಿ, ವಚನ ಸಾಹಿತ್ಯದ ಅನುಭವ ಹಾಗೂ ಅನುಭಾವದಿಂದಲೇ ಆಧುನಿಕ ವಚನ ಸಾಹಿತ್ಯ ಹುಟ್ಟಿಕೊಂಡಿದೆ. ವಚನ ಸಾಹಿತ್ಯ ಇಂದು ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದಲೇ ಹೊರ ಬಂದಿದೆ ಎಂದರು.
ಆದ್ದರಿಂದ ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡ ಕೊಟ್ಟ ಅದ್ಭುತ ದೇಣಿಯಾಗಿದ್ದು, ಇಂದು ದೇಶಕ್ಕೆ ಮಾನವತೆಗೆ ಪೀಡಿಸುತ್ತಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ ನಿರ್ಮೂಲನೆಗೆ ವಚನಗಳು ಸಂಜೀವಿಯಾಗಲಿರುವ ವಚನಗಳ ಪ್ರಚಾರದ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು. ಶರಣರ ಕ್ರಾಂತಿಯ ನಾಡಾದ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯವಿದೆ. ಇದರ ಶಾಖೆಗಳನ್ನು ಉಳವಿ, ಕೂಡಲ ಸಂಗಮ, ವಿಜಯಪುರ, ಸೊಲ್ಲಾಪುರ, ತೆಲಂಗಾಣ, ಹೈದರಾಬಾದ್‌ನಲ್ಲಿ ಆರಂಭಿಸುವುದು ಅವಶ್ಯಕವಾಗಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಸ್ತಾಪುರ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಮಠದ ಬಾಲತಪಸ್ವಿನಿ ಶಿವಶರಣೆ ಮಹಾದೇವಿ ತಾಯಿ, ಸಾನ್ನಿಧ್ಯ ವಹಿಸಿದ್ದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಬೇಲೂರಿನ ಉರುಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮಿಜಿ ಮಾತನಾಡಿದರು.
ಹಿರಿಯ ಸಾಹಿತಿ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ| ವಜ್ರಾ ಪಾಟೀಲ್, ಎಂ.ಎಂ.ತಂಬಾಕೆ, ಗ್ರಾಪಂ ಅಧ್ಯಕ್ಷೆ ಬ್ರಹ್ಮಾರೆಡ್ಡಿ, ಬಾಬುರೆಡ್ಡಿ ಚಾಮಲೆ, ಸಿದ್ರಾಮಪ್ಪಾ ಗುದಗೆ, ಸಮ್ಮೇಳನದ ಸಮಿತಿ ಸಂಯೋಜಕ ಡಾ| ಗವಿಸಿದ್ದಪ್ಪಾ ಪಾಟೀಲ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.