ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Team Udayavani, Jun 21, 2020, 7:12 AM IST
ಔರಾದ: ತಾಲೂಕಿನ ನಂದಿಬಿಜಲಗಾಂವ, ದಾಬಕಾ, ದೋಪರವಾಡಿ, ಸೇವಾ ನಾಯಕ ತಾಂಡಾ, ಮುರ್ಕಿ, ಖತಗಾಂವ, ಮುರಗ (ಕೆ), ಹೋಳಸಮುದ್ರ, ಡೋಂಗರಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕೆಕೆಆರ್‌ಡಿಬಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಪಿಎಂ ಗ್ರಾಮ ಸಡಕ್ ಯೋಜನೆ, ಪಿಆರ್‌ಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅನುದಾನದ ವಿವಿಧ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು. 60 ಲಕ್ಷ ರೂ. ಅನುದಾನದಲ್ಲಿ ನಂದಿಬಿಜಳಗಾಂವ-ಚಿಕ್ಲಿ (ಯು) ರಸ್ತೆ ನಿರ್ಮಾಣ, 50 ಲಕ್ಷ ರೂ. ಅನುದಾನದ ಅಕನಾಪುರ-ಅಪ್ರೋಚ್ ರಸ್ತೆ, 41.50 ಲಕ್ಷ ರೂ. ಅನುದಾನದ ದಾಬಕಾ-ಮುತಖೇಡ್ ರಸ್ತೆ, 90 ಲಕ್ಷ ರೂ. ಅನುದಾನದಲ್ಲಿ ದೋಪರವಾಡಿ- ಮಂಗುತಾಂಡಾ ರಸ್ತೆ, 104 ಲಕ್ಷ ರೂ. ವೆಚ್ಚದಲ್ಲಿ ದೋಪರವಾಡಿ-ಚೀಮೆಗಾಂವ ರಸ್ತೆ, 45 ಲಕ್ಷ ರೂ. ವೆಚ್ಚದಲ್ಲಿ ಮದನೂರ-ಖತಗಾಂವ ರಸ್ತೆ, 120 ಲಕ್ಷ ರೂ. ವೆಚ್ಚದಲ್ಲಿ ಹೊಳಸಮುದ್ರ-ತೋರಣ ರಸ್ತೆ, 200 ಲಕ್ಷ ರೂ. ವೆಚ್ಚದಲ್ಲಿ ಕುಶನೂರ-ಬಾವಲಗಾಂವ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. 31 ಲಕ್ಷ ರೂ. ವೆಚ್ಚದಲ್ಲಿ ದಾಬಕಾದಲ್ಲಿ, 20 ಲಕ್ಷ ರೂ. ವೆಚ್ಚದಲ್ಲಿ ಸೇವಾ ತಾಂಡಾ ಚಿಮಗಾಂವದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಎಲ್ಲ ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ನಡೆಸಬೇಕು. ಕಳಪೆ ನಡೆಸುವುದು ಕಂಡು ಬಂದಲ್ಲಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಪಂ ಸದಸ್ಯ ಮಾರುತಿ ಚವ್ಹಾಣ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ರಮೇಶ ಉಪಾಸೆ, ಕೆರಬಾ ಪವಾರ, ಶಿವಾಜಿ ರಾಠೊಡ, ಅರಹಂತ ಸಾವಳೆ, ಕಿರಣ ಪಾಟೀಲ, ಜಗದೀಶ ಖೂಬಾ, ಶೀನು ಖೂಬಾ, ಎಇಇಗಳಾದ ಅಶೋಕ ಸಜ್ಜನಶೆಟ್ಟಿ, ಎಂ.ಡಿ. ಫಜಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.