ಸಂಕ್ರಾಂತಿ ಯಿಂದ 14 ದಿನಗಳ ಕಾಲ ವೀರಭದ್ರೇಶ್ವರ ಜಾತ್ರೆ
Team Udayavani, Jan 5, 2018, 12:48 PM IST
ಹುಮನಾಬಾದ: ಸಂಕ್ರಾಂತಿಯಿಂದ 14 ದಿನಗಳ ಕಾಲ ನಡೆಯುವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ಪುರಸಭೆಯಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಾತ್ರೆಗಾಗಿ ಸುಮಾರು 25 ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು ಪಟ್ಟಣದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು. ಜಾತ್ರೆಯ ಪಲ್ಲಕಿ ಮೆರವಣಿಗೆ ವೇಳೆ ಮಹಿಳೆಯರು ರಂಗೋಲಿ ಹಾಕುವ ಸಂಪ್ರದಾಯವಿದ್ದು, ಈ ವರ್ಷ ಉತ್ತಮ ರಂಗೋಲಿಗೆ ಪುರಸಭೆಯಿಂದ ಬಹುಮಾನ ನೀಡುವ ಕುರಿತು ಚರ್ಚಿಸಲಾಯಿತು.
ಪ್ರಥಮ ಸ್ಥಾನಕ್ಕೆ 11 ಸಾವಿರ, ದ್ವಿತೀಯ ಸ್ಥಾನಕ್ಕೆ 8 ಸಾವಿರ, ಮೂರನೇ ಸ್ಥಾನಕ್ಕೆ 5 ಸಾವಿರ ಬಹುಮಾನ ನೀಡುವ ಕುರಿತು ಅನುಮೋದನೆ ಪಡೆಯಲಾಯಿತು. ಪಟ್ಟಣದ ವಿವಿಧೆಡೆ ಸಾರ್ವಜನಿಕ ಶೌಚಾಲಯ ಹಾಗೂ ಮೂಬೈಲ್ ಶೌಚಾಲಯಗಳನ್ನು ಅಳವಡಿಸಲು ಕೂಡ ಅನುಮೋದನೆ ಪಡೆಯಲಾಯಿತು. ಸಿಪಿಐ ಜೆ.ನ್ಯಾಮೆಗೌಡರ್ ಮಾತನಾಡಿ,
ಪಟ್ಟಣ ಹೊರವಲಯದ ರಾಷ್ಟ್ರಯ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಅನೇಕ ಅಡಚಣೆಗಳು ಉಂಟಾಗುತ್ತಿವೆ. ಚಿದ್ರಿ ಬೈಪಾಸ್‌ನಿಂದ ರಾಮ ಮತ್ತು ರಾಜ ಕಾಲೇಜು ವರೆಗೆ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ನಡುವಳಿ ಬರೆದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ್ಳಿಗೆ ಸಲ್ಲಿಸಬೇಕು ಎಂದರು.
ಪಟ್ಟಣದ ತೇರು ಮೈದಾನದ ತೇರು ಸಾಗುವ ರಸ್ತೆ ದುರಸ್ಥಿ ಹಾಗೂ ಟೆಂಡರ್ ಕರೆದು ಪಟ್ಟಣದಲ್ಲಿ ವಿದ್ಯುತ್ ದೀಪ
ಅಳವಡಿಸಲು ಅನುಮೋದನೆ ನೀಡಲಾಯಿತು. ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಉಪಾಧ್ಯಕ್ಷೆ ಪಾವರ್ತಿ ಶೇರಿಕಾರ್, ಪುರಸಭೆ ಸದಸ್ಯರಾದ ಮಹೇಶ ಅಗಡಿ, ಅಫರ್ ಮಿಯ್ನಾ, ಕಲಿಮೂಲಾ, ನಾಸೀರ್, ವಿನಾಯಕ ಯಾದವ, ತಿರುಮಲ ರೆಡ್ಡಿ, ಪ್ರಭುರೆಡ್ಡಿ, ಆಜಾಮ್, ಇಸ್ಮಾಯಿಲ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಮೀನಾಕುಮಾರಿ ಬೊರಳಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.