ದೃಶ್ಯ ಕಲೆ ಪರಿಣಾಮಕಾರಿ ಮಾಧ್ಯಮ: ಡಾ| ಬಸವಲಿಂಗ ಶ್ರೀ
Team Udayavani, Sep 22, 2018, 4:14 PM IST
ಭಾಲ್ಕಿ: ದೃಶ್ಯ ಕಲೆ ಪರಿಣಾಮಕಾರಿ ಮಾಧ್ಯಮವಾಗಿದೆ. ನೂರು ದಿನ ಪ್ರವಚನ ಮಾಡಿದರೂ ಬದಲಾಗದ ಮನುಷ್ಯ ಒಂದು ನಾಟಕ ಪ್ರದರ್ಶನ ನೋಡಿ, ಪರಿವರ್ತನೆ ಹೊಂದಿದ ಸಾಕಷ್ಟು ಉದಾಹರಣೆಗಳಿವೆ ಎಂದು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದ ಹಡೇìಕರ್ ಮಂಜಪ್ಪ ವೇದಿಕೆಯಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಧಾರವಾಡ ಸಹಯೋಗದಲ್ಲಿ ಗುರುಪ್ರಸಾದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಗಾಂಧಿ 150 ಒಂದು ರಂಗ ಪಯಣ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇವತ್ತು ಪ್ರದರ್ಶಿಸುವ ನಾಟಕದಲ್ಲಿಯೇ ಗಾಂಧೀಜಿಯವರು ಸತ್ಯ ಹರಿಶ್ಚಂದ್ರ ಎನ್ನುವ ಒಂದು ನಾಟಕ ಪ್ರದರ್ಶನ ನೋಡಿ ಜೀವನದಲ್ಲಿ ಹೇಗೆ ಬದಲಾದರು ಎಂಬುದು ತಿಳಿಯುತ್ತದೆ. ಹೀಗಾಗಿ ಮಾನವೀಯ ಮೌಲ್ಯಗಳುಳ್ಳ, ಸತ್ಯ ಪ್ರತಿಪಾದಕರ ಜೀವನಾಂಶಗಳುಳ್ಳ ನಾಟಕ, ಚಲನ ಚಿತ್ರ ಪ್ರದರ್ಶನಗಳನ್ನು ನೋಡುವುದರಿಂದ ಸಮಾಜ ಸುಧಾರಿಸುತ್ತದೆ. ಕಾರಣ ಇಂತಹ ಉತ್ತಮ ವಿಷಯಗಳುಳ್ಳ ನಾಟಕಗಳು ಹೆಚ್ಚೆಚ್ಚು ಪ್ರದರ್ಶನಗೊಳ್ಳಲಿ ಎಂದು ಹೇಳಿದರು.
ರಂಗಾಯಣ ಧಾರವಾಡದ ವ್ಯವಸ್ಥಾಪಕಿ ರಂಜಿತಾ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಳುವಾರು ಮಹಮ್ಮದ್ ಕುಂಞ ಅವರ ಪಾಪು ಗಾಂಧಿ ಬಾಪು ಆದ ಕಥೆಯನ್ನಾಧರಿಸಿದ ರಂಗರೂಪಕವನ್ನು ಭಾಲ್ಕಿಯ ಗುರುಪ್ರಸಾದ ಶಾಲೆಯ ವಿದ್ಯಾರ್ಥಿಗಳಿಗಾಗಿ ಇಂದು 58ನೇ ಪ್ರರ್ದರ್ಶನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಬಾಪೂಜಿಯವರ ಜೀವನ ಮೌಲ್ಯ ಬಿತ್ತುವುದೇ ಈ ನಾಟಕದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಮಹಾತ್ಮಾಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಎಂದರೆ ಅವರು ಅತಿಮಾನವರೇನಲ್ಲ. ಎಲ್ಲರಂತೆಯೆ ಹುಟ್ಟಿ, ಎಲ್ಲರಂತೆಯೇ ಬೆಳೆದ ಸಾಮಾನ್ಯರೆ ಆಗಿದ್ದವರು. ಕಷ್ಟದಲ್ಲಿರುವವರ ಬಗ್ಗೆ ಸದಾ ಮರುಗುವ, ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಡುವ ಗುಣಗಳೇ ಅವರು ಅತಿಮಾನವರಾಗಲು ಕಾರಣವಾಗಿವೆ. ಕಾರಣ ಇಂತಹ ಮಹಾತ್ಮರ ಚರಿತ್ರೆಯನ್ನು ಸದಾಕಾಲ ಸ್ಮರಿಸುತ್ತಿರುವುದರಿಂದ ನಾವೂ ಅವರಂತೆ ಆಗಲು ಸಾಧ್ಯ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನಿವೃತ್ತ ಅಂಚೆ ಅಧಿಕಾರಿ ಜಿ.ಎಸ್.
ಶಿವಮಠ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಕಲಾವಿದ ಪ್ರಜ್ವಲ್, ಚಂದ್ರಕಾಂತ ಬಿರಾದಾರ, ಸಂತೋಷ ಹಡಪದ,
ಬಾಗಲಕೋಟೆಯ ಕುಮಾರ್, ಬೆಂಗಳೂರಿನ ಸುನಿಲ್, ಬಳ್ಳಾರಿಯ ಪ್ರದೀಪ, ಹರಪನಹಳ್ಳಿಯ ಶಾಮಲಾ ಉಪಸ್ಥಿತರಿದ್ದರು. ಗುರುಪ್ರಸಾದ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ ಮಂಡ್ಯ ಸ್ವಾಗತಿಸಿದರು. ಬಾಬು ಬೆಲ್ದಾಳ
ನಿರೂಪಿಸಿದರು. ಬಾಬುರಾವ್ ಹುಣಜೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.