ನ್ಯಾಯದ ಪಡಿತರಕ್ಕೆ ಅನ್ಯಾಯದ ಶುಲ್ಕ !
Team Udayavani, Apr 17, 2020, 1:27 PM IST
ವಾಡಿ: ಏಪ್ರಿಲ್ ತಿಂಗಳು ಮುಗಿಯುತ್ತಿದ್ದರೂ ಪಟ್ಟಣದ ಕಲಕಮ್ ಏರಿಯಾದ ಬಡ ಕುಟುಂಬಗಳು ಪಡಿತರದಿಂದ ವಂಚಿತರಾಗಿದ್ದಾರೆ.
ವಾಡಿ: ಹೆಮ್ಮಾರಿ ಕೊರೊನಾ ಸಂಕಟಕ್ಕೆ ಸಿಲುಕಿ ಗೃಹ ಬಂಧನಕ್ಕೆ ಒಳಗಾಗಿರುವ ಕೂಲಿ ಕಾರ್ಮಿಕರು, ಸರ್ಕಾರದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ವೇಳೆ ವಸೂಲಿ ಮಾಡುತ್ತಿರುವ ಶುಲ್ಕದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಸುಮಾರು 12 ನ್ಯಾಯಬೆಲೆ ಅಂಗಡಿಗಳಿವೆ. ಒಂದು ಅಂಗಡಿಯಲ್ಲಿ 500ಕ್ಕೂ ಹೆಚ್ಚು ಬಿಪಿಎಲ್-ಎಪಿಎಲ್ ಪಡಿತರ ಚೀಟಿದಾರರಿದ್ದಾರೆ. ಏ.16 ಕಳೆದರೂ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆಗಿಲ್ಲ. ಈ ಮಧ್ಯೆ ಪ್ರತಿಯೊಬ್ಬ ಫಲಾನುಭವಿಯಿಂದ ಬೆರಳಿನ ಗುರುತು ದಾಖಲಿಸಿಕೊಳ್ಳಲು 20 ರೂ. ಹಾಗೂ ಪಡಿತರ ವಿತರಿಸುವಾಗ ಕಡ್ಡಾಯವಾಗಿ 20 ರೂ. ವಸೂಲಿ (ಕೆಲ ಅಂಗಡಿಗಳಲ್ಲಿ ರೂ.20 ಮಾತ್ರ) ಮಾಡಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದವರಿಗೆ ಶುಲ್ಕ ಪಡೆಯದೇ ಪಡಿತರ ನೀಡಲಾಗುತ್ತಿದೆ ಎಂದು ಫಲಾನುಭವಿಗಳು ದೂರಿದ್ದಾರೆ.
ಕೂಲಿನಾಲಿ ಮಾಡಿ ಬದುಕುತ್ತಿದ್ದೆವು. ಶ್ರೀಮಂತರ ಮನೆಗಳಲ್ಲಿ, ಹೋಟೆಲ್, ಖಾನಾವಳಿಗಳಲ್ಲಿ ಕಸ-ಮುಸುರೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಈಗ ಕೆಲಸವೂ ಇಲ್ಲ, ಇತ್ತ ರೇಷನ್ ಅಂಗಡಿಯವರು ಪಡಿತರ ನೀಡಲು ವಿಳಂಬ ಮಾಡುತ್ತಿದ್ದಾರೆ. ಜತೆಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಬಿಪಿಎಲ್ ಫಲಾನುಭವಿ ವೃದ್ಧೆ ಕಮಲಾಬಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.