ಕುಡಿಯುವ ನೀರಿಗಾಗಿ ತಪ್ಪದ ಜನರ ಅಲೆದಾಟ
ತಾಂತ್ರಿಕ ಸಮಸ್ಯೆ ಹಿನ್ನೆಲೆ ಎರಡ್ಮೂರು ದಿನಗಳಿಂದ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವಿಳಂಬ
Team Udayavani, Mar 29, 2021, 6:47 PM IST
ದೇವದುರ್ಗ: ತಾಲೂಕಿನಲ್ಲಿ ಕೃಷ್ಣಾನದಿ ಉಕ್ಕಿ ಹರಿದರೂ ಪಟ್ಟಣದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕುಡಿವ ನೀರಿಗಾಗಿ ಜನ ಪರದಾಡುವಂತಾಗಿದೆ. ಕುಡಿವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನೀರು ಪೂರೈಸುವ ಗಾಗಲ್ ಬಳಿಯ ಜಾಕ್‌ವೆಲ್ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾದ್ದರಿಂದ ಜನರು ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುವಂತಾಗಿದೆ.
ಆದರೀಗ ಜಾಕ್‌ವೆಲ್‌ದೊಳಗೆ ಕಸಕಡ್ಡಿ ಇತರೆ ವಸ್ತುಗಳು ಹಾವು, ಪ್ರಾಣಿ-ಪಕ್ಷಿ ಬಿದ್ದು ಮೃತಪಟ್ಟಿದ್ದರಿಂದ ನೀರು ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಕುಡಿವ
ನೀರಿಗಾಗಿ ನಿವಾಸಿಗಳು ವಾರ್ಡ್‌ನ ಸದಸ್ಯರ ಬೆನ್ನತ್ತಿದ್ದಾರೆ. ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಎರಡ್ಮೂರು ದಿನದಿಂದ ದುರಸ್ತಿ ಕಾರ್ಯ ನಡೆದಿದ್ದು, ನಾಳೆ ಅಥವಾ ನಾಡಿದ್ದು, ಪಟ್ಟಣಕ್ಕೆ ನೀರು ಪೂರೈಸುವ ಚಿಂತನೆ ನಡೆದಿದೆ.
ಆಗಾಗ ಪೈಪ್ ಒಡೆದು ಲಕ್ಷಾಂತರ ರೂ. ಅನುದಾನ ವ್ಯಯ ಮಾಡಲಾಗಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂದು
ಆರೋಪಿಸುತ್ತಾರೆ ನಾಗರಿಕರು.
ತಾಂತ್ರಿಕ ಸಮಸ್ಯೆ ಹಿನ್ನೆಲೆ ಎರಡ್ಮೂರು ದಿನಗಳಿಂದ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ದುರಸ್ತಿ ಕೆಲಸ ನಡೆದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡಲಾಗುತ್ತದೆ.
ಹನುಮಗೌಡ ಶಂಕರಬಂಡಿ
ಪುರಸಭೆ ಅಧ್ಯಕ್ಷ
ಜಾಕ್‌ವೆಲ್‌ದೊಳಗೆ ಕಸಕಡ್ಡಿ ಇತರೆ ವಸ್ತುಗಳು ಬಿದ್ದಿರುವ ಹಿನ್ನೆಲೆ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ದುರಸ್ತಿ ಕೆಲಸ ನಡೆದಿದ್ದು, ಸೋಮವಾರ ನೀರು ಪೂರೈಸಲು ಸಕಲ ಸಿದ್ಧತೆ ನಡೆದಿದೆ.
ಶರಣಪ್ಪ, ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.