ಹಣದ ಹಿಂದೆ ಬಿದ್ದು ಸಮಯ ವ್ಯರ್ಥ
Team Udayavani, Jul 6, 2018, 12:09 PM IST
ಬೀದರ: ಮನುಷ್ಯ ಹಣದ ಹಿಂದೆ ಬಿದ್ದು ತಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳತ್ತಿದ್ದಾನೆ. ಅದು ಅರಿವಾಗುವಷ್ಟರಲ್ಲಿ ಬದುಕೇ ಮುಗಿಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ ಹೇಳಿದರು.
ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದಲ್ಲಿ ಬ್ರಹ್ಮಕುಮಾರಿಸ್ ಯುವ ವಿಭಾಗದಿಂದ ಆಯೋಜಿಸಿದ್ದ “ನನ್ನ ಭಾರತ ಸುವರ್ಣ ಭಾರತದ ಪರಿಕಲ್ಪನೆ’ ಸಂಕಲ್ಪ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಜನರು ದುಡ್ಡಿನ ಬೆನ್ನತ್ತಿ ಜೀವನದ ಅತ್ಯಮೂಲ್ಯ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಜನಪ್ರಿಯ ರಾದವರೆಲ್ಲ ಶ್ರೇಷ್ಠರಾಗಿರುವುದಿಲ್ಲ. ಹಾಗೆಯೇ ಶ್ರೇಷ್ಠರಾಗಿರುವವರೆಲ್ಲ ಜನಪ್ರಿಯರಾಗಿರುವುದಿಲ್ಲ. ನಮ್ಮ
ಜೀವನದ ಅಂತಿಮ ಯಾತ್ರೆಗೆ ತೆರಳುವಾಗ ನಾವು ಕೂಡಿಟ್ಟ ಸಂಪತ್ತು ಹೊತ್ತೂಯ್ಯಲು ಜೇಬು ಸಹ ಇರುವುದಿಲ್ಲ. ನಮ್ಮನ್ನು ನರಕಕ್ಕೆ ಕರೆದೊಯ್ಯುವ ಯಮನು ಸಹ ಲಂಚ ಪಡೆಯಲಾರ. ಹೀಗಿರುವಾಗ ನಮಗೆ ನೂರು ಅಂತಸ್ತಿನ ಬಂಗಲೆ, ಹತ್ತಾರು ಕಾರುಗಳು, ಇಪ್ಪತ್ತು ಆಳುಗಳು ಏಕೆ ಬೇಕು ಎಂದು ಪ್ರಶ್ನಿಸಿದರು.
ನಮ್ಮ ಜೀವನದ ಇಪ್ಪತ್ತನೇ ವಯಸ್ಸಿನಲ್ಲಿ ನಾವು ನೈಜ ಜೀವನದ ಅರ್ಥ ಮಾಡಿಕೊಳ್ಳಬೇಕಿದೆ. ದುಷ್ಟ ಚಟುವಟಿಕೆಗಳಿಂದ ದೂರವಿದ್ದು, ಜನ ಮೆಚ್ಚುವ ರೀತಿಯಲ್ಲಿ ಆದರ್ಶನಾಗಿ ಬದುಕಬೇಕು ಎಂದರು.
ನಗರ ಸಭೆ ಪೌರಾಯುಕ್ತ ಎಸ್.ಮನೋಹರ ಮಾತನಾಡಿ, ಸಾಮಾಜಿಕ ಜಾಲತಾಣ ಹಾಗೂ ವಿದೇಶಿ ವಸ್ತುಗಳ ವ್ಯಾಮೋಹಕ್ಕೆ ಬಲಿಯಾಗಿ ಸುಂದರ ಜೀವನ ಹಾಳು ಮಾಡಿಕೊಳ್ಳುತ್ತಿರುವ ಯುವ ಜನರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಮಾರ್ಗದತ್ತ ಸಾಗಬೇಕು. ಸ್ವತ್ಛ ಭಾರತದ ಸಂಕಲ್ಪ ಸಿದ್ದಿಗಾಗಿ ಮುಂದಿನ ಆರು ತಿಂಗಳಲ್ಲಿ
ಬೀದರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ನಮ್ಮೊಂದಿಗೆ ಸರ್ವರೂ ಕೈ ಜೋಡಿಸಬೇಕು ಎಂದು
ಕರೆ ನೀಡಿದರು. ಮಹಾರಾಷ್ಟ್ರದ ಪುಣೆಯ ಬ್ರಹ್ಮಕುಮಾರಿ ಕೇಂದ್ರದ ಸಂಚಾಲಕಿ ಬಿ.ಕೆ. ಶ್ರೀಲತಾ ಸಹೋದರಿ ಮಾತನಾಡಿ, 2017ರ ಆಗಸ್ಟ್ 13ರಂದು ಆರಂಭವಾದ ಈ ಯಾತ್ರೆಯು ಉತ್ತರ ಭಾರತದ ಗುಜರಾತ, ಮಧ್ಯ
ಪ್ರದೇಶ, ಮಹಾರಾಷ್ಟ್ರ, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣಾ ರಾಜ್ಯಗಳಲ್ಲಿ
ಸುಮಾರು ಮೂರು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯುವಜನರಿಗಾಗಿ ನಡೆಸಿದ್ದು, ಸುಮಾರು ನಾಲ್ಕು ಲಕ್ಷ ಯುವಜನರು ಇದರ ಲಾಭ ಪಡೆದಿದ್ದಾರೆ. ಸುಮಾರು ಮೂವತ್ತು ಸಾವಿರ ಕಿ.ಮೀ. ವರೆಗೆ ಈ ರ್ಯಾಲಿ ಸಂಚರಿಸಿದೆ. 2020ರೊಳಗೆ ಇಡೀ ದೇಶದ ಮೂಲೆ, ಮೂಲೆಗಳಿಗೆ ಸಂಚರಿಸಿ ಸ್ವತ್ಛ ಹಾಗೂ ಸಮೃದ್ಧ ಭಾರತ ನಿರ್ಮಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಸಿದ್ರಾಮಪ್ಪ ಮಾಳಾ, ನಿವೃತ್ತ ಸೇನಾ ಮುಖ್ಯಸ್ಥ ಶ್ರೀನಿವಾಸ್, ಹುಮನಾಬಾದ ಬ್ರಹ್ಮಕುಮಾರಿ ಕೇಂದ್ರದ ಸಂಚಾಲಕಿ ಬಿ.ಕೆ. ಮಂದಾ ಸಹೋದರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಅಧಿಕಾರಿಗಳಾದ ಖುದ್ದುಸ್ ಹಾಗೂ ಶಿವಕುಮಾರ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಸಂಚಾಲಕಿ ಬಿ.ಕೆ. ಉಷಾ ಸಹೋದರಿ, ವರಲಕ್ಷ್ಮೀ, ಬಿ.ಕೆ. ಪ್ರಭಾಕರ ಕೋರವಾರ, ಜ್ಯೋತಿ ಸಹೋದರಿ, ಮಂಗಲಾ, ವಿಜಯ ಲಕ್ಷ್ಮೀ, ರೇಣುಕಾ, ಶೀತಲ, ರಮಲಕ್ಷ್ಮೀ, ಅನುಪಮಾ ಸಹೋದರಿಯರು. ರಾಜೇಂದ್ರ ಭಾಯಿ, ರಾಮು ಭಾಯಿ, ದಿವ್ಯಜೋತಿ ಭಾಯಿ, ಪರಮವೀರ ಭಾಯಿ, ನಾಯ್ಡು ಭಾಯಿ, ವಾಸು, ಉಮಾಕಾಂತ, ಗೌತಮ, ದಾಮೋದರ, ಬಿ.ಕೆ. ರಾಜೇಂದ್ರ, ವಿಶಾಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.