ಬೇಸಿಗೆ ಮುನ್ನವೇ ನೀರಿನ ಸಮಸ್ಯೆ
Team Udayavani, Feb 25, 2019, 9:18 AM IST
ಭಾಲ್ಕಿ: ದಿನದಿಂದ ದಿನಕ್ಕೆ ಬಿಸಿಲು ತನ್ನ ಗರಿ ಬಿಚ್ಚಿಕೊಳ್ಳುತ್ತ ಹೆಚ್ಚಿನ ಪ್ರಖರತೆ ಸೂಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಭಾಗಶ: ಕೈ ಕೊಟ್ಟ ಕಾರಣ ಬೇಸಿಗೆ ಮುನ್ನವೇ ತಾಲೂಕಿನ ವಿವಿಧೆಡೆ ನೀರಿನ ಸಮಸ್ಯೆ ನಿಧಾನವಾಗಿ ಕಾಣಿಸಿ ಕೊಳ್ಳತೊಡಗಿದೆ. ತಾಲೂಕಿನ ಖಟಕ ಚಿಂಚೋಳಿ, ಕಲವಾಡಿ, ಏಣಕೂರ, ಕುರುಬಖೇಳಗಿ, ಕಪಲಾಪುರ, ಬಾಜೋಳಗಾ, ಬರದಾಪುರ, ಡಾವರಗಾಂವ, ಸಿದ್ದೇಶ್ವರ, ಚಳಕಾಪುರವಾಡಿ, ನೀಲಮನಳ್ಳಿ ತಾಂಡಾ, ಬೀರಿ(ಬಿ), ಹಾಳಗೋರ್ಟಾ, ಮಾವಿನಹಳ್ಳಿ, ವರವಟ್ಟಿ(ಬಿ), ಉಚ್ಚಾ, ಬ್ಯಾಲಹಳ್ಳಿ(ಡಬ್ಲ್ಯೂ) ಮೊರಂಬಿ, ರಾಚಪಾ ಗೌಡಗಾಂವ, ಹೊನ್ನಳ್ಳಿ ಸೇರಿದಂತೆ ಪಟ್ಟಣದ ವ್ಯಾಪ್ತಿಯ ಭಾಲ್ಕಿ ತಾಂಡಾ, ಮುನಿಮ ಕಾಲೋನಿ, ಬಸವನಗರ ಮುಂತಾದ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಬೆಳಗ್ಗೆಯಿಂದ ಸಂಜೆ ವರೆಗೆ ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು ಕೊಡ ಹಿಡಿದುಕೊಂಡು ಹನಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಮೂರು ತಿಂಗಳಿನಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ನೀರಿಗಾಗಿ ಕೊಡ, ಬಕೆಟ್‌ಗಳೊಂದಿಗೆ ಹೊಲ ಹೊಲ ಅಲೆದಾಡಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ಶಾಸಕರ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ ನೀರಿನ ಲಭ್ಯತೆ ಕಡಿಮೆ
ಇರುವುದರಿಂದ ಕೇವಲ 2 ಗಂಟೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.
ಮಧ್ಯದಲ್ಲಿ ವಿದ್ಯುತ್ ಕೈಕೊಟ್ಟರಂತೂ ಕತೆ ಮುಗಿಯಿತು. ಹಾಗಾಗಿ ಹೆಚ್ಚಿನ ನೀರಿಗಾಗಿ ಸಮೀಪದ ಹೊಲಗಳಿಗೆ ತೆರಳುವುದಂತೂ ನಿಂತಿಲ್ಲ ಎನ್ನುತ್ತಾರೆ ಮುನಿಮ್ ಕಾಲೋನಿ ನಿವಾಸಿಗಳು. ನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈಚೆಗೆ ಟ್ಯಾಂಕರ್ ಚಕ್ರಕ್ಕೆ ಚಿಕ್ಕಮಗು ಬಲಿಯಾಗಿದ್ದರಿಂದ ನೀರು ಒದಗಿಸುವುದು ಸ್ಥಗಿತಗೊಳಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಮಹಿಳೆಯರಂತೂ ಇಡೀ ದಿನ ಅನ್ಯರ ಹೊಲಗಳಿಗೆ ಸುತ್ತಾಡುತ್ತಿದ್ದಾರೆ ಎಂದು ತೆಗಂಪುರ ಗ್ರಾಮಸ್ಥರು ಅಳಲು ತೋಡಿಕೊಂಡರು
ತಾಲೂಕಿನ ಲಂಜವಾಡ, ಏಣಕೂರ, ತೇಗಂಪುರ ಒಳಗೊಂಡಂತೆ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕಿಂತ ಖಾಸಗಿ ವ್ಯಕ್ತಿಗಳ ಜಮೀನಿನಿಂದ ಪಡೆದು ಜನರಿಗೆ ಒದಗಿಸಲು ಚಿಂತನೆ ನಡೆಸುತ್ತಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಮುಂಬುರವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿರುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಅಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಜಾನುವಾರಗಳಿಗೆ ಮೇವಿನ ಕೊರತೆ ಇಲ್ಲ.
ಅಣ್ಣಾರಾವ ಪಾಟೀಲ, ತಹಶೀಲ್ದಾರ್,
ಮನುಷ್ಯರಿಗೆ ಕುಡಿಯಲು ಎಲ್ಲಿಂದಾದರೂ ನೀರು ಪೂರೈಸಬಹುದು. ಆದರೆ ನಮ್ಮಲ್ಲಿರುವ ಜಾನುವಾರಗಳಿಗೆ ನೀರು ಎಲ್ಲಿಂದ ತರಬೇಕು. ಈ ಹಿಂದೆ ಗೋಕಟ್ಟೆ ಮತ್ತು ಹೌದುಗಳನ್ನು ಕಟ್ಟಿ ಕೊಳವೆಬಾವಿಯಿಂದ ನೀರು ತುಂಬಿಸುತ್ತಿದ್ದೇವು. ಈಗ ಅದು ಇಲ್ಲ. ಹೀಗಾಗಿ ಜಾನುವಾರಗಳಿಗೆ ನೀರು ಪೂರೈಸುವುದು ಕಷ್ಟಸಾಧ್ಯವಾಗಿದೆ.
ಸೂರ್ಯಕಾಂತ ಹುಲಸೂರೆ, ಮಾವಿನಹಳ್ಳಿ ಗ್ರಾಮದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.