ಜಲ ಮರುಪೂರಣ ಕಾರ್ಯ ನಡೆಯಲಿ: ನ್ಯಾ| ಹಂಚಾಟೆ
Team Udayavani, Feb 12, 2019, 9:23 AM IST
ಬೀದರ: ಪರಿಸರ ನಮ್ಮ ಆಸೆಗಳನ್ನು ಪೂರೈಸಲು ಇದೆಯೇ ಹೊರತು ದುರಾಸೆಯನ್ನಲ್ಲ. ಕೊಳವೆಬಾವಿಗಳು ಬತ್ತುತ್ತಲೇ ಸಾಗಿವೆ. ಜಲಮರುಪೂರಣ ಕಾರ್ಯ ನಡೆಯುತ್ತಿಲ್ಲ. ನೀರು ನಮ್ಮ ಜೀವವಾಗಿದ್ದು, ಅದನ್ನು ಉಳಿಸೋಣ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಪರಿಸರ ಸಂರಕ್ಷಣೆ, ಬಡತನ ಅಳಿಸಿ ಹಸಿವು ಮುಕ್ತ ಭಾರತ ನಿರ್ಮಿಸುವ ಹಾಗೂ ಜಲಾಂದೋಲನ ಕುರಿತು ಕಾನೂನು ಅರಿವು-ನೆರವು, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನಿಂದಲೇ ಸುಖ ಮತ್ತು ಸಮೃದ್ಧಿ. ನೀರಿಲ್ಲದಿದ್ದರೆ ದುರ್ಭಿಕ್ಷೆ. ಮನುಷ್ಯನ ದುರಾಸೆಯಿಂದ ಪರಿಸರ ನಾಶ್ಯವಾಗುತ್ತಿದೆ. ಜನರು ಗುಳೇ ಹೋಗುತ್ತಿದ್ದಾರೆ. ನೀರಿನ ಬಗ್ಗೆ ನಮಗೆ ಅಜ್ಞಾನವಿದೆ. ನೀರನ್ನು ಉಳಿಸುವ ಮೂಲಕ ಅದನ್ನು ಗೌರವಿಸೋಣ ಎಂದು ಕೋರಿದರು.
ನೆಲಕ್ಕೆ ನೀರು ಉಣ್ಣಿಸುವ ಕೆಲಸ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಜಲಮೂಲಗಳನ್ನು ನಾವು ಸಂರಕ್ಷಣೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಗಿಡಗಳಿಗೆ ಮನುಷ್ಯರ ಅವಶ್ಯಕತೆ ಇಲ್ಲ. ಆದರೆ, ನಮಗೆ ಆ ಗಿಡಗಳ ಅವಶ್ಯಕತೆ ತುಂಬಾ ಇದೆ. ಇಂತಹ ಸತ್ಯವನ್ನು ನಾವೆಲ್ಲರೂ ಅರಿಯೋಣ ಎಂದರು. ಯಾರೂ ಮಾಡಲಾಗದಂತಹ ಅನಾಹುತವನ್ನು ಮನುಷ್ಯರು ಮಾಡುತ್ತಿದ್ದಾರೆ. ವಿದ್ಯೆ ಬೇರೆ ಜ್ಞಾನ ಬೇರೆ. ವಿದ್ಯಾವಂತರಾದಂತೆ ಪರಿಸರ ನಾಶವಾಗುತ್ತಿದೆ. ಒಂದು ಕಾಲಕ್ಕೆ ನೀರಿಲ್ಲದೇ ಬಳಲುತ್ತಿದ್ದ ಇಸ್ರೇಲ್ ದೇಶ ಇಂದು 80 ದೇಶಕ್ಕೆ ಮೀನು ಪೂರೈಸುವ ದೇಶವಾಗಿ ಗುರುತಿಸಿಕೊಂಡಿದೆ. ಇದು ನಮಗೆ ಮಾದರಿಯಾಗಬೇಕಿದೆ ಎಂದರು.
ಸಾವಿರಾರು ಸಂಖ್ಯೆಯಲ್ಲಿದ್ದ ಬಾವಿಗಳೆಲ್ಲ ಈಗ ಬಹುತೇಕ ಬತ್ತಿವೆ. ನೀರು ಪಾತಾಳಕ್ಕೆ ಸೇರುತ್ತಲೇ ಇದೆ. ಇರುವುದೊಂದೇ ಭೂಮಿ ಎಂಬುದನ್ನು ನಾವು ಅರ್ಥೈಸಿಕೊಳ್ಳೋಣ. ಸಂವಿಧಾನ ಎಂದರೆ ಅದು ನಮಗೆ ಭಗವದ್ಗೀತೆ ಇದ್ದಂತೆ, ನಮಗೆ ಮಾರ್ಗದರ್ಶಿಯಾಗಿದೆ. ಕಾನೂನು ಹೋರಾಟದ ಮೂಲಕವೂ ನಾವು ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ತಿಳಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧಿಧೀಶೆ ಮನಗೂಳಿ ಪ್ರೇಮಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಹಾಗೂ ಇತರರು ಇದ್ದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ ಹಾಗೂ ಬೀದರ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.