ಶಾಶ್ವತ ವರದಾನವಾಗುವುದೇ ನಗರ ಸಾರಿಗೆ ಬಸ್?
Team Udayavani, Aug 9, 2018, 11:31 AM IST
ಹುಮನಾಬಾದ: ಪಟ್ಟಣ ಸಂಚಾರಕ್ಕಾಗಿ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬ ನಾಗರಿಕರ ಹಲವು ದಶಕದ ಬೇಡಿಕೆ ಕಳೆದ ಒಂದು ವಾರದ ಹಿಂದೆಯಷ್ಟೇ ಈಡೇರಿದ್ದು, ಸೇವೆ ಹೀಗೆ ಮುಂದುವರೆಯುತ್ತದೋ ಮಧ್ಯದಲ್ಲೇ ಸ್ಥಗಿತಗೊಳ್ಳುತ್ತದೆಯೋ ಎನ್ನುವ ಪ್ರಶ್ನೆ ಸದ್ಯ ಇಲ್ಲಿನ ಪ್ರಯಾಣಿಕರನ್ನು ಕಾಡುತ್ತಿದೆ. ಗಣಿ, ಭೂ ವಿಜ್ಞಾನ ಮತ್ತು ಮುಜರಾಯಿ ಖಾತೆ ಸಚಿವ ರಾಜಶೇಖರ ಬಿ. ಪಾಟೀಲ ಅವರ ಅವರ ವಿಶೇಷ ಆಸಕ್ತಿಯಿಂದ ಬಸ್ ಸೇವೆ ಆರಂಭವಾಗಿದೆ.
ಹುಮನಾಬಾದ ನಗರ ಜನಸಂಖ್ಯೆ 2011ರಲ್ಲಿ 36,511 ಇತ್ತು. ಸದ್ಯ ನಗರದ ಜನಸಂಖ್ಯೆ 44,519ಗೆ ಹೆಚ್ಚಿದೆ. ಜನಸಂಖ್ಯೆಗೆ ಅನುಗುಣವಾಗಿ ನಗರ ಸಾಕಷ್ಟು ವಿಸ್ತಾರಗೊಂಡಿದೆ. ಜನಸಂಖ್ಯೆಗೆ ಅನುಗುಣವಾಗಿ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2008ರಲ್ಲಿ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರ ಅವಧಿಯಲ್ಲಿ ಪ್ರವಾಸಿ ಮಂದಿರದಿಂದ ಕೆಇಬಿ ಬೈಪಾಸ್, ವಾಂಜ್ರಯಿಂದ ಡಾ| ಅಂಬೇಡ್ಕರ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಬಸವೇಶ್ವರ ವೃತ್ತ ಅಲ್ಲಿಂದ ಶಿವಪುರ ಮಾರ್ಗವಾಗಿ ಸುಭಾಶ್ಚಂದ್ರ ಬೋಸ್ ವೃತ್ತದವರೆಗೆ. ಶಿವಾಜಿ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನವರೆಗಿನ ಎಲ್ಲ ಪ್ರಮುಖ ರಸ್ತೆಗಳು ವಿಸ್ತರಣೆಗೊಂಡಿವೆ. ಜತೆಗೆ 2014ರಲ್ಲಿ ಹುಮನಾಬಾದ-ಬೀದರ-ಕಲಬುರಗಿ ಸಂಪರ್ಕ ಕಲ್ಪಿಸುವ ರೈಲು ಸೇವೆ ಸಹ ಆರಂಭಗೊಂಡಿದೆ.
ಅದಕ್ಕೆ ತಕ್ಕಂತೆ ನಗರದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿವಿಧ ವಿದ್ಯಾ ಸಂಸ್ಥೆಗಳಿಗೆ ತೆರಳಲು 2ರಿಂದ 5 ಕಿಮೀ ಕ್ರಮಸಬೇಕಾದ ಅನಿವಾರ್ಯತೆ ಇದೆ. ಪಟ್ಟಣದಲ್ಲಿ ರೈಲು ಸೇವೆ ಆರಂಭವಾದಾಗಿನಿಂದ ನಗರ ಸಾರಿಗೆ ಬಸ್ ಆರಂಭಿಸುವಂತೆ ಜನರು ಒತ್ತಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ರಾಜಶೇಖರ ಬಿ.
ಪಾಟೀಲ 2016ರಲ್ಲಿ ರೈಲು ನಿಲ್ದಾಣ ವರೆಗೆ ಬಸ್ ಸೌಲಭ್ಯ ಕಲ್ಪಿಸಿದ್ದರು.
ಅದಾದ ನಂತರ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಮಾಡಿದ ಮನವಿಗೆ ಸ್ಪಂದಿಸಿದ ಸಚಿವ ರಾಜಶೇಖರ ಬಿ. ಪಾಟೀಲ ಅವರು ವಾರದ ಹಿಂದೆಯಷ್ಟೇ ಎರಡು ಹೊಸ ಬಸ್ ಸೇವೆ
ಆರಂಭಿಸಿದ್ದಾರೆ. ಹೊಸ್ ಬಸ್ ಸಂಚಾರದಿಂದ ಸದ್ಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗೆ ಲಾಭ, ನಷ್ಟದ ಲೆಕ್ಕಚಾರಿ ಹಾಕಿ ಎಲ್ಲಿ ಸೇವೆ ಸ್ಥಗಿತಗೊಳಿಸುವುದೋ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿ¨
ನಗರ ಸಾರಿಗೆ ಬಸ್ ಸೇವೆ ಆರಂಭಿಸಿರುವುದು ಒಳ್ಳೆ ಬೆಳವಣಿಗೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ವಿಶೇಷ ಅನುಕೂಲ ಆಗಿದೆ. ಸದ್ಯದ ಎರಡು ಬಸ್‌ಗಳ ಜತೆಗೆ ಇನ್ನೆರಡು ಬಸ್ ಸೇವೆ ಆರಂಭಿಸಬೇಕು. ಪ್ರಭುರಾವ್ ದಸಪಳ್ಳಿ, ಪ್ರಯಾಣಿಕ ನಗರ ಸಾರಿಗೆ ಬಸ್ ಆರಂಭಿಸಿದ್ದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದ್ಯ ಆದಾಯ ಸಹ ಉತ್ತಮವಾಗಿದೆ. ಬೇಡಿಕೆ ಆಧರಿಸಿ ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳ ಜತೆ ಚರ್ಚಿಸಿ ಹೆಚ್ಚಿನ ಸೌಲಭ್ಯಕ್ಕೆ ಯತ್ನಿಸಲಾಗುವುದು.
ಸುರೇಶ ಖಮೀತ್ಕರ್, ಘಟಕ ವ್ಯವಸ್ಥಾಪಕರು
ಶಶಿಕಾಂತ ಕೆ. ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Robbery: ಬೀದರ್ ದರೋಡೆ ಬಿಹಾರಿ ಗ್ಯಾಂಗ್ ಕೃತ್ಯ: ಪೊಲೀಸರು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್