ಬಗೆಹರಿಯುವುದೇ ಬಿಎಸ್‌ಎಸ್‌ಕೆ ಸಮಸ್ಯೆ?
Team Udayavani, Jul 13, 2018, 12:23 PM IST
ಬೀದರ: ಜಿಲ್ಲೆಯ ರೈತರ ಜೀವನಾಡಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ತಾತ್ಕಾಲಿಕ ಪರಿಹಾರಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಜು. 4ರಂದು ಬೆಂಗಳೂರಿನಲ್ಲಿ ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಪ್ರಸ್ತಕ ಹಂಗಾಮಿನಲ್ಲಿ ಕಾರ್ಖಾನೆ ಪ್ರಾರಂಭಿಸಲು ಸುಮಾರು 40 ಕೋಟಿ ರೂ. ಅವಶ್ಯಕತೆ ಇರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಕಾರ್ಖಾನೆ ಆರಂಭ ಆದರು ಕೂಡ ಲಾಭ ನಿರೀಕ್ಷಿಸುವ ಹಾಗಿಲ್ಲ ಎಂಬ ಅಂಶದ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದ್ದಾರೆ ಎನ್ನಲಾಗಿದೆ.
ಸದ್ಯ ಕಾರ್ಖಾನೆ ಮೇಲೆ ಸುಮಾರು 250 ಕೋಟಿ ರೂ. ಸಾಲ ಇದೆ ಎನ್ನಲಾಗುತ್ತಿದ್ದು, ಪ್ರತಿ ವರ್ಷ ಸುಮಾರು 30 ಕೋಟಿ ರೂ. ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲಾಗುತ್ತಿದೆ. ಸಾಲದ ಭಾರ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 500 ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಸದ್ಯ ಕಾರ್ಖಾನೆಯಲ್ಲಿ ಹಳೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿಲ್ಲ. ಬದಲಿಗೆ ಹೊರ ಗುತ್ತಿಗೆ ಆಧಾರದಲ್ಲಿ 25 ಜನರು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸರ್ಕಾರ 40 ಕೋಟಿ ರೂ. ಸಾಲಕ್ಕೆ ಖಾತ್ರಿ ನೀಡಿದರು ಕೂಡ ಕಾರ್ಖಾನೆ ನಡೆಯುವುದು ಕಷ್ಟ ಎಂಬುದು ಸಿಬ್ಬಂದಿ ಮಾತು. ಕಾರ್ಖಾನೆಯಲ್ಲಿ ಇಲ್ಲಿಯವರೆಗೆ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಸುಮಾರು 20 ಕೋಟಿಗೂ ಅಧಿಕ ಹಣ ಪಾವತಿಸಬೇಕಾಗಿದೆ. ಸಂಬಳ, ವಿಮಾ, ಭವಿಷ್ಯ ನಿಧಿ ಸೇರಿದಂತೆ ಇತರೆ ಸೌಲಭ್ಯಗಳ ಹಣ ಕಾರ್ಖಾನೆ ನೀಡಬೇಕಾಗಿದೆ. ಅಲ್ಲದೇ ವಿವಿಧ ಬ್ಯಾಂಕ್‌ಗಳ ಸಾಲದ ಬಡ್ಡಿ ಕೂಡ ಬಾಕಿ ಇದ್ದು, ಸರ್ಕಾರದ ಹಣ ಖಾತೆಗೆ ಬಂದರೆ ಮೊದಲು ಬ್ಯಾಂಕಿನವರು ಬಡ್ಡಿ ಕಡಿತಗೊಳಿಸಿಕೊಂಡರೆ ಕಾರ್ಖಾನೆ ಪ್ರಾರಂಭಕ್ಕೆ ಬೇಕಾದ ಅನುದಾನ ದೊರೆಯುವುದು ಕಷ್ಟ ಎನ್ನಲಾಗುತ್ತಿದೆ.
ಒಂದು ವೇಳೆ ಸರ್ಕಾರ ಬ್ಯಾಂಕ್‌ಗಳಿಗೆ ಸದ್ಯ ಬಡ್ಡಿ ಪಡೆಯುವುದು ಬೇಡ ಎಂದು ಆದೇಶ ಹೊರಡಿಸಿದರು ಕೂಡ ಕಾರ್ಖಾನೆ ಈ ವರ್ಷ ಮಾತ್ರ ನಡೆಸಲು ಸಾಧ್ಯವಾಗುತ್ತದೆ. ಏಕೆಂದರೆ ಕಾರ್ಖಾನೆ ಸಿಬ್ಬಂದಿ ಸಂಬಳ, ಯಂತ್ರೋಪಕರಣಗಳ ದುರಸ್ತಿ ವಿವಿಧ ಸಾಮಗ್ರಿಗಳ ಖರೀದಿ, ಕಬ್ಬು ಕತ್ತರಿಸುವ ಹಾಗೂ ಸಾಗಿಸುವ ಗುತ್ತಿಗೆದಾರರ ಹಣ ಪಾವತಿಗೆ ಮಾತ್ರ ಈ ಹಣ ಬಳಕೆಯಾಗುತ್ತದೆ. ಮತ್ತೆ ಮುಂದಿನ ವರ್ಷ ಕಾರ್ಖಾನೆ ಆರಂಭಕ್ಕೆ ಸರ್ಕಾರದ ಎದುರು ಕೈ ಚಾಚುವುದು ತಪ್ಪುವುದಿಲ್ಲ ಎನ್ನುತ್ತಾರೆ ರೈತ ಪ್ರಮುಖರು.
ಪ್ರಸಕ್ತ ಸಾಲಿನಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಹಕಾರ ಖಾತೆ ಸಚಿವರ ಜತೆ ಚರ್ಚೆಗಳು ನಡೆದಿವೆ. ಸದ್ಯ ಕಾರ್ಖಾನೆ ಮೇಲಿರುವ ಸಾಲಕ್ಕೆ ಪ್ರತಿವರ್ಷ ಸುಮಾರು 30 ಕೋಟಿ ರೂ. ಬಡ್ಡಿ ಆಗುತ್ತಿರುವ ಕುರಿತು ಮಾಹಿತಿ ನೀಡಲಾಗಿದೆ. ಕಾರ್ಖಾನೆ ಪ್ರಾರಂಭಕ್ಕೆ ಬೇಕಾದ ಅನುದಾನ ಕುರಿತು ಕೂಡ ಸಭೆಯಲ್ಲಿ ಮಾಹಿತಿ ನೀಡಲಾಗಿದೆ.
ವಿಶ್ವನಾಥ ಮಲಕೂಡ, ಸಹಕಾರಿ ಸಂಘಗಳ ಉಪನಿಬಂಧಕರು ಹಾಗೂ ಬಿಎಸ್‌ಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ
ಪ್ರಸಕ್ತ ಸಾಲಿನಲ್ಲಿ ಬಿಎಸ್‌ಎಸ್‌ಕೆ ಪ್ರಾರಂಭಿಸುವ ನಿಟ್ಟಿನಲ್ಲಿ ಪಾಮಾಣಿಕ ಪ್ರಯತ್ನಗಳು ನಡೆಯಬೇಕಾಗಿದೆ. ಕಾನೂನು ಬಾಹೀರವಾಗಿ ವಜಾಗೊಳಿಸಿದ್ದ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿ ಸರ್ಕಾರದಿಂದ ಬರುವ ಹಣದಲ್ಲಿ ಸಂಬಳ ನೀಡಬೇಕು. ಕಾರ್ಮಿಕರು ಕಾರ್ಖಾನೆಯಲ್ಲಿ ದುಡಿಯಲು ಸಿದ್ಧರಿದ್ದು, ಕಾರ್ಖಾನೆ ಆಡಳಿತ ಮಂಡಳಿ ಕೂಡ ಕಾರ್ಮಿಕರ ಹಕ್ಕುಗಳನ್ನು ನೀಡಲು ಮುಂದಾಗಬೇಕು.

ಗುರುಲಿಂಗಯ್ಯ ಹಾಲಾ, ಬಿಎಸ್‌ಎಸ್‌ಕೆ ಕಾರ್ಮಿಕ ಸಂಘದ ಅಧ್ಯಕ್ಷ
ಬಿಎಸ್‌ಎಸ್‌ಕೆ ಪ್ರಾರಂಭಕ್ಕೆ ಸರ್ಕಾರ ವಿಶೇಷ ಅನುದಾನ ನೀಡುವುದಾಗಿ ಹೇಳಿತ್ತು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡು ವಿಶೇಷ ಅನುದಾನ ನೀಡಿ ಕಬ್ಬು ಬೆಳೆಯುವ ರೈತರ ನೆರವಿಗೆ ಮುಂದಾಗಬೇಕು. ಅಲ್ಲದೇ ಇತರೆ ಕಾರ್ಖಾನೆಗಳು ಉಳಿಸಿಕೊಂಡ ಕಬ್ಬಿನ ಬಾಕಿ ಹಣ ಕೂಡ ಕೂಡಲೇ ಪಾವತಿಸಬೇಕು.
ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ

ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.