ಆಧ್ಯಾತ್ಮಿಕ ಬೆಳಕು ತೋರಿದ್ದ ಸಿದ್ದಾರೂಢರು
Team Udayavani, Dec 26, 2021, 12:20 PM IST
ಭಾಲ್ಕಿ: ದೇಶದಲ್ಲಿ ಅನೇಕ ಶರಣರು, ಸಂತರು ಬಂದು ಹೋಗಿದ್ದಾರೆ. ಅಂಥವರಲ್ಲಿ ಸಿದ್ಧಾರೂಢರು ಒಬ್ಬರಾಗಿದ್ದು, ಆಧ್ಯಾತ್ಮಿಕ ಭದ್ರ ಬುನಾದಿ ಹಾಕಿದ್ದಾರೆ ಎಂದು ನೆರೆಯ ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.
ಬ್ಯಾಲಹಳ್ಳಿ (ಕೆ) ಗ್ರಾಮದಲ್ಲಿ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ಶ್ರೀ ಗುರುಲಿಂಗ ಮಹಾಸ್ವಾಮಿಗಳ ಎರಡನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಿದ್ಧಾರೂಢರು ಎಲ್ಲ ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡಿದರು.
ಅವರೊಬ್ಬ ನಾಡಿನ ದೊಡ್ಡ ಸಂತ ಎಂದರು. ಜನ್ಮಕೊಟ್ಟ ತಂದೆ-ತಾಯಿ ಸೇವೆ ಮಾಡಿ ಅವರಿಗೆ ನೋಯಿಸದಂತೆ ನಡೆದುಕೊಳ್ಳಿ. ಜೀವನದಲ್ಲಿ ಸರಿಯಾದ ಮಾರ್ಗ ತೋರಿಸುವ, ನಮ್ಮ ಕೈ ಹಿಡಿದು ನಡೆಸುವ ಮತ್ತು ಪರಮಾತ್ಮನ ಅರಿವನ್ನು ತಿಳಿಸಲು ನಮ್ಮಲ್ಲಿರುವ ಆತ್ಮ ಜಾಗೃತಿಗೊಳಿಸುವ ಗುರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಾದಿಯಲ್ಲಿ ನಡೆಸಿ ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ ಗುರು ಎಂದು ತಿಳಿಸಿದರು.
ಶ್ರೀ ನಾಗಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಸಂತರ ದರ್ಶನ ಪಡೆದು ಜೀವನ ಪಾವನ ಪಡೆಯಬೇಕು ಎಂದರು. ಈ ವೇಳೆ ಶ್ರೀ ನಿರ್ಮಾಲಾನಂದ ಸ್ವಾಮಿ, ಗುಂಡಪ್ಪ ಶರಣರು, ದಶರಥ ಶರಣರು, ಶರಣಪ್ಪ ಶರಣರು, ಓಂಶೆಟ್ಟಿ ಮರಖಲ, ಬಾಬುರಾವ್ ನಾಗಭಟ್ಟೆ, ಸುಭಾಷ ಭಾಯಪ್ಪನೂರ್ ಇದ್ದರು. ರಮೇಶ ಶ್ರೀಮಂಡಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.