ರಸ್ತೆ ಕಾಮಗಾರಿ ಪೂರ್ಣವಾಗುವುದೆಂದು?
Team Udayavani, Aug 24, 2018, 12:54 PM IST
ಬಸವಕಲ್ಯಾಣ: ಸಿಸಿರಸ್ತೆ ಮಾಡುವ ಉದ್ದೇಶದಿಂದ ಹಳೆ ಸಿಸಿ ರಸ್ತೆ ಅಗೆದು, ಎರಡು ತಿಂಗಳುಗಳಿಂದ ಹಾಗೇ ಬಿಟ್ಟಿರುವುದರಿಂದ ನಗರದ 2ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಮಲ್ಲಿಕಾರ್ಜುನ ಕಾಲೋನಿ ನಿವಾಸಿಗಳು ನಿತ್ಯ ಯಾತನೆ ಅನುಭವಿಸುವಂತಾಗಿದೆ.
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ವಾಸಿಸುವ ಈ ಕಾಲೋನಿಯಲ್ಲಿ ಹೊಸದಾಗಿ ಸಿಸಿರಸ್ತೆ ನಿರ್ಮಿಸುವ ಕಾಮಗಾರಿ ಮಾಡುತ್ತಿದ್ದು, ಹಳೆ ರಸ್ತೆ ಅಗೆಯಲಾಗಿದೆ. ಎರಡು ತಿಂಗಳಿನಿಂದ ಕಾಮಗಾರಿ ಪೂರ್ಣವಾಗದೇ ನಿಂತಿದೆ.
ಆದರೆ ಈವರೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಕಾಲೋನಿಯ ನಿವಾಸಿಗಳು ಮತ್ತು ಮಕ್ಕಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಸಿಸಿರಸ್ತೆ ಅಗೆದು ಹಾಗೇ ಬಿಟ್ಟಿದ್ದರಿಂದ ರಸ್ತೆ ತುಂಬಾ ಬಂಡೆ ಕಲ್ಲುಗಳಂತೆ ಸಿಮೆಂಟ್ ಮತ್ತು ಜಲ್ಲಿ ಕಲ್ಲುಗಳು ಎದ್ದು ನಿಂತಿವೆ. ಇದರಿಂದ ನಿವಾಸಿಗಳು ರಸ್ತೆಯಲ್ಲಿ ಸಂಚರಿಸಲು ಬಾರದಂತಾಗಿದೆ.
ರಾತ್ರಿ ಸಮಯದಲ್ಲಿ ವೃದ್ಧರು ಹಾಗೂ ಮಕ್ಕಳು ಒಬ್ಬರೇ ಹೊರಗೆ ಹೋಗದೆ, ಇನ್ನೊಬ್ಬರ ಸಹಾಯ ಪಡೆದು ಹೋಗಬೇಕಾಗಿದೆ. ಈ ರಸ್ತೆ ಸಮಸ್ಯೆಯಿಂದ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕೂಡ ನಡೆದಿವೆ. ಅಲ್ಲದೇ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗದೆ ಮನೆ ಒಳಗೆ ನುಗ್ಗುತ್ತಿವೆ. ಇದರಿಂದ ಸೊಳ್ಳೆಕಾಟ ಜಾಸ್ತಿಯಾಗಿ ನಿವಾಸಿಗಳು ರಾತ್ರಿ ನಿದ್ದೆ ಮಾಡದಂತ ಸ್ಥಿತಿ ಇದೆ.
ಮಳೆಗಾದಲ್ಲಿ ಸಾಂಕ್ರಾಮಿಕ ರೋಗಗಳು ಹರಡು ಆತಂಕದಲ್ಲಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮನಸ್ಸು ಮಾಡುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನ
ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಕಾಲೋನಿಯಲ್ಲಿ ಇದ್ದ ಸಿಸಿರಸ್ತೆಯನ್ನು ಮೂರು ತಿಂಗಳ ಹಿಂದೆ ಅಗೆದು ಹಾಗೇ ಬಿಡಲಾಗಿದೆ. ಆದರೆ ಈವರೆಗೂ ರಸ್ತೆ ಕಾಮಗಾರಿ ಆರಂಭ ಮಾಡಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಸಂಚಾರಕ್ಕೆ ಯಾತನೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಮಸ್ಯೆಯಿಂದ ಮುಕ್ತಗೊಳಿಸಬೇಕು.
ಸಾಗರ ಕಿರುನಗೆ, ಬಡಾವಣೆ ನಿವಾಸಿ
ವೀರಾರೆಡ್ಡಿ ಆರ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.