ಮಕ್ಕಳಲ್ಲಿ ಸಕಾರಾತ್ಮಕ ಗುಣ ಬೆಳೆಸಿ
ವಚನಗಳಲ್ಲಿದೆ ಅಂತರಂಗ-ಬಹಿರಂಗ ಶುದ್ಧ ಮಾಡುವ ಅದ್ಭುತ ಶಕ್ತಿ
Team Udayavani, Dec 14, 2019, 3:47 PM IST
ಬೀದರ: ಬಸವಣ್ಣ ವಿಶ್ವದ ಪ್ರಥಮ ಅನುಭವ ಮಂಟಪವೆಂಬ ಪಾರ್ಲಿಮೆಂಟ್ ಸ್ಥಾಪಿಸಿದ್ದರು. ಆ ಮೂಲಕ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಸುಧಾರಣೆಗಾಗಿ ವೈಚಾರಿಕ ಕ್ರಾಂತಿ ಮಾಡಿದ್ದಾರೆ. ಆ ನೆಲೆಗಟ್ಟಿನಲ್ಲಿ ಸಕಲ ಜೀವಿಗಳ ಕಲ್ಯಾಣ ಬಯಸುವಂತಹ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಕಾಯಕ, ದಾಸೋಹ ಮತ್ತು ಏಕೋಪಾಸನೆ ತತ್ವವನ್ನು ವಿಶ್ವಕ್ಕೆ ನೀಡಿದ್ದಾರೆ ಎಂದು ಡಿವೈಎಸ್‌ಪಿ ಬಸವೇಶ್ವರ ಹೀರಾ ಹೇಳಿದರು.
ನಗರದ ಡಾ| ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಜರುಗಿದ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜವು ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದೆ. ಆದರೆ, ಮಕ್ಕಳಲ್ಲಿ ಉತ್ತಮ ಸಂಸ್ಕಾರದ ಕೊರತೆ ಇದೆ. ಮಕ್ಕಳಲ್ಲಿ ಸಭ್ಯತೆ ಒಳ್ಳೆಯ ಗುಣಗಳು ಪರೋಪಕಾರ ನಿಸ್ವಾರ್ಥ ಸೇವೆ ಮಾಡುವ ಸಕರಾತ್ಮಕ ಗುಣಗಳು ಬೆಳೆಸುವಂತೆ ಅವರನ್ನು ಶರಣರ ಸಂತರ ಸತ್ಸಂಗದಲ್ಲಿ ಇದ್ದು ಶರಣರ ವಚನಗಳ ಮಹಾತ್ಮರ ಸಂದೇಶಗಳನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಭಾಲ್ಕಿಯ ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ, ವ್ಯಕ್ತಿಯ ಅಂತರಂಗ, ಬಹಿರಂಗ ಶುದ್ಧೀಕರಣ ಮಾಡುವ ಅದ್ಭುತ ಶಕ್ತಿ ವಚನಗಳಲ್ಲಿದೆ. ಭಗವಂತ ಪ್ರಕೃತಿಯಲ್ಲಿ ಎಲ್ಲವನ್ನು ಕೊಟ್ಟಿದ್ದಾನೆ. ಅಲ್ಲಿಯ ವಸ್ತುಗಳಿಗೆ ರೂಪ ಕೊಡುವ ಶಕ್ತಿ ಮಾನವನಲ್ಲಿದೆ. ನಮ್ಮ ಪಠ್ಯ ಕ್ರಮದಲ್ಲಿ ನೈತಿಕ ಶಿಕ್ಷಣದ ಕೊರತೆಯಿದೆ. “ನೀತಿ ಇಲ್ಲದ ಶಿಕ್ಷಣ, ಪ್ರೀತಿ ಇಲ್ಲದ ಶಾಸ್ತ್ರವು ಬೇಕಾಗಿಲ್ಲ’. ಇಂದು ನಾವು ನಮ್ಮತನವನ್ನು ಮರೆತು ಚಾರಿತ್ರ್ಯ
ಹೀನರಾಗಿದ್ದೇವೆ. ಮಕ್ಕಳಲ್ಲಿ ಚಾರಿತ್ರ್ಯವಂತಿಕೆ, ಉದಾರತೆ ಮಾನವಿಯ ಮೌಲ್ಯವನ್ನು ಬೆಳೆಸುವಂತೆ ಶರಣರ ಅನುಭಾವಗಳು ಮಕ್ಕಳ ಮನದಲ್ಲಿ ಬಿತ್ತುವಂತಹ ಪರಿಸರ ನಿರ್ಮಾಣ ಮಾಡಬೇಕಿದೆ ಎಂದು ಕರೆ ನೀಡಿದರು.
ಶ್ರೀ ಮಹಾಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಸಂಸಾರವೆಂಬ ಜಂಜಾಟ, ದುರಾಸೆಯ ಮಡುವಿನಲ್ಲಿ ಬಿದ್ದು ಬಳಲುತ್ತಿದ್ದಾನೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮಹಾನುಭಾವರ ಸತ್ಸಂಗದಲ್ಲಿದ್ದುಕೊಂಡು ಸದಾ ಸತ್ಕಾರ್ಯ ಸೇವೆಯಲ್ಲಿದ್ದು ಬದುಕಿನಲ್ಲಿ ಸಂತೃಪ್ತಿ ಪಡೆದುಕೊಳ್ಳಬೇಕು. ಆಗಲೇ ಹೃದಯ ವಿಕಸನವಾಗಿ ಜೀವನದ ಅಂತಿಮ ಸತ್ಯದ ಅರಿವು ಆಗುತ್ತದೆ ಎಂದು ನುಡಿದರು.
ಪ್ರೊ| ಸೋಮನಾಥ ಪಾಟೀಲ ಮಾತನಾಡಿ, ಬಸವ ಗುರು ಮಾನವರನ್ನು ಮಹಾಮಾನವರನ್ನಾಗಿ ಮಾಡಿದ ವಿಶ್ವದ ಶ್ರೇಷ್ಠ ಚಿಂತಕರು. ಸಕಲ ಜೀವಿಗಳಲ್ಲಿ ದೇವರನ್ನು ಕಂಡ ವಿಶ್ವದ ಗುರುಗಳಾಗಿದ್ದಾರೆ ಎಂದರು. ಪ್ರೊ| ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಡಾಕ್ಟರೇಟ್ ಪುರಸ್ಕೃತ ಉಪನ್ಯಾಸಕಿ ಡಾ| ಸುರೇಖಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಪ್ರೊ| ಮಂಗಳಾ ಪಾಟೀಲ ಸ್ವಾಗತಿಸಿದರು.
ಪ್ರೊ| ಉಮಾಕಾಂತ ಮೀಸೆ ನಿರೂಪಿಸಿ ನಾಗೇಶ ಬಿರಾದಾರ ವಂದಿಸಿದರು. ಶ್ರೀ ಕಾಂತ ಸ್ವಾಮಿ, ಚನ್ನಬಸಪ್ಪಾ ನೌಬಾದೆ, ವಚನಶ್ರೀ ನೌಬಾದೆ, ಕಿರಣಕುಮಾರ ಹಿರೇಮಠ ಅವರು ವಚನ ಗಾಯನ ನಡೆಸಿಕೊಟ್ಟರು. ಪ್ರಮುಖರಾದ ಮಲ್ಲಿಕಾರ್ಜುನ ಹುಡುಗೆ, ಎಂ.ಜಿ. ಗಂಗನಪಳ್ಳಿ, ಆರ್.ಎಸ್. ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಗುರುನಾಥ ಬಿರಾದಾರ, ನೀಲಕಂಠ ಬಿರಾದಾರ, ಸಿದ್ರಾಮಯ್ಯ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.