5 ವರ್ಷದಲ್ಲಿ 10 ಸಾವಿರ ಆರ್‌ಸಿಸಿ ಮನೆ ಹಂಚಿಕೆ ಗುರಿ: ಯತ್ನಾಳ
Team Udayavani, Sep 23, 2018, 2:52 PM IST
ವಿಜಯಪುರ: ವಿಜಯಪುರ ನಗರವನ್ನು ಗುಡಿಸಲು ಮುಕ್ತ ಮಾಡುವ ಸಂಕಲ್ಪಿಸಿರುವ ನಾನು ಗುಣಮಟ್ಟದ ಆರ್‌ಸಿಸಿ ಮನೆ ನಿರ್ಮಿಸುವ ಕನಸು ಕಂಡಿದ್ದೇನೆ. ಅಲ್ಲದೇ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಅರ್ಹರಿಗೆ ಬರುವ ಐದು ವರ್ಷಗಳಲ್ಲಿ 10 ಸಾವಿರ ಮನೆ ಹಂಚುವ ಗುರಿ ಹಾಕಿಕೊಂಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ನಗರದ ಅಡಕಿ ಗಲ್ಲಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವಿವಿಧ ವಸತಿ ಯೋಜನೆ ಅತ್ಯಂತ ವ್ಯವಸ್ಥಿತ ಅನುಷ್ಠಾನಕ್ಕಾಗಿ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಅಲಿಯಾಬಾದ್‌ನಲ್ಲಿ ಬಡವರಿಗೆ ಮನೆ ಹಂಚಲು ಯೋಜನೆ ರೂಪಿಸಲಾಗಿತ್ತು. ಆದರೆ ಅಷ್ಟು ದೂರ ಹೋಗಲು ಬಡವರಿಗೆ ಅನುಕೂಲವಿಲ್ಲ. ಹೀಗಾಗಿ ನಗರದಲ್ಲೇ ತಮ್ಮ ಉಪಜೀವನ ಕಂಡುಕೊಂಡಿದ್ದಾರೆ. ಇಲ್ಲಿ ಕೆಲಸ, ಅಲ್ಲಿ ನೆಲೆ ಎಂಬ ಸ್ಥಿತಿಯಾದರೆ ಬಡವರಿಗೆ ಕಲ್ಪಿಸುವ ವಸತಿ ಯೋಜನೆ ವಿಫಲವಾಗಲಿದೆ. ಹೀಗಾಗಿ ನಗರದಲ್ಲೇ 7 ಎಕರೆ ವಿಶಾಲ ಸ್ಥಳದಲ್ಲಿ ಅಂತಸ್ತಿನ ಮನೆ ನಿರ್ಮಿಸಿ ಸೂರು ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಈ ಮಾದರಿ ಮನೆಗಳಿಗೆ ಆಯಾ ಫಲಾನುಭವಿಗಳು ಸಹ ಇಂತಿಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಆದರೆ ಈ ಮೊತ್ತ ಪಾವತಿಸಲು ಅನೇಕ ಬಡ ಫಲಾನುಭವಿಗಳಿಗೆ ಕಷ್ಟ ಸಾಧ್ಯ. ಈ ಕಾರಣಕ್ಕಾಗಿ ಸಿದ್ಧಸಿರಿ ಸೌಹಾರ್ದ ವತಿಯಿಂದಲೇ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದ್ದೇನೆ ಎಂದು ಪ್ರಕಟಿಸಿದರು.
ಈ ಹಿಂದಿನ ಶಾಸಕರು ಐದು ವರ್ಷದಲ್ಲಿ ಒಮ್ಮೆಯೂ ನಗರ ಬಡ ಜನರ ಸಂಕಷ್ಟ ಆಲಿಸುವ ಮಾತಿರಲಿ, ಒಮ್ಮೆಯೂ ತಮ್ಮ ಮುಖ ತೋರಿಸಿರಲಿಲ್ಲ. ಆದೆ ನನಗೆ ಬಡವರೇ ದೇವರು, ನಿಮ್ಮ ಸೇವೆಯೇ ನನ್ನ ಉಸಿರು. ನನ್ನ ಮೇಲೆ ವಿಶ್ವಾಸ ವಿಧಾನಸೌಧಕ್ಕೆ ನನ್ನನ್ನು ಆಯ್ಕೆ ಮಾಡಿ ಕಳಿಸಿರುವ ನಿಮ್ಮ ಋಣ ಎಂದಿಗೂ ಮರೆಯಲಾರೆ. ಮತ ಕೇಳಲು ಬಂದಾಗ ನನಗೆ ಸಮಸ್ಯೆಗಳ ಬಗ್ಗೆ ಹೇಳಬೇಡಿ, ಈಗಲೇ ನನ್ನನ್ನು ಸರಿಯಾಗಿ ದುಡಿಸಿಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಈಗ ನಾನೇ ನಿಮ್ಮ ಮನೆಬಾಗಿಲಿಗೆ ಬಂದಿದ್ದೇನೆ, ನನ್ನನ್ನು ಚೆನ್ನಾಗಿ ದುಡಿಸಿಕೊಳ್ಳಿ ಎಂದರು.
ಪಾಲಿಕೆ ಆಯುಕ್ತ ಡಾ| ಔದ್ರಾಮ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿಠಲರಾವ್ ಉಪಾಧ್ಯೆ ಅವರು ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಲ್ಲಿ ವೃದ್ಧಾಪ್ಯ, ವಿಧವಾ, ವಿಕಲಚೇತನ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಲಾಯಿತು.
ತಹಶೀಲ್ದಾರ್ ರವಿಚಂದ್ರನ್, ಪಾಲಿಕೆ ಸದಸ್ಯ ಉಮೇಶ ವಂದಾಲ, ಮುಖಂಡ ಶಿವಾನಂದ ಭುಂಯಾರ, ಶಿವರುದ್ರ
ಬಾಗಲಕೋಟ, ಚಂದ್ರು ಚೌಧರಿ, ಉಮೇಶ ವೀರಕರ, ರಮೇಶ ಪಡಸಲಗಿ, ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.