3 ತಿಂಗಳಲ್ಲಿ 108 ಆಂಬ್ಯುಲೆನ್ಸ್ ಹೊಸ ಗುತ್ತಿಗೆ: ಸಚಿವ ಪಾಟೀಲ
Team Udayavani, Dec 2, 2018, 12:30 PM IST
ವಿಜಯಪುರ: ಆರೋಗ್ಯ ಕವಚದ 108 ಆಂಬ್ಯುಲೆನ್ಸ್ ವಾಹನಗಳ ಸೇವೆ, ನಿರ್ವಹಣೆಗೆ ಗುತ್ತಿಗೆ ಸಂಸ್ಥೆ ಶೋಷಣೆ ನಡೆಸುವ ದೂರುಗಳಿವೆ. ಹೀಗಾಗಿ ಬರುವ 3 ತಿಂಗಳ ಬಳಿಕ ಮರು ಟೆಂಡರ್ ಕರೆಯುವುದಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದ್ದು 108 ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುತ್ತಿಗೆ ನಿರ್ವಹಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಶನಿವಾರ ನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಕವಚ 108 ನೌಕರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ 108 ನಿರ್ವಹಣೆ ಹಾಗೂ ಸೇವೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯಿಂದ ನೌಕರರ ಶೋಷಣೆ ಮಾಡುತ್ತಿದೆ ಎಂಬ ವ್ಯಾಪಕ ದೂರುಗಳಿವೆ. ಹೀಗಾಗಿ ಮರು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಿದ್ದು, ಹಾಲಿ ಗುತ್ತಿಗೆ ಸಂಸ್ಥೆಗೆ 6 ತಿಂಗಳು ಗುತ್ತಿಗೆ ಅವಧಿ ನೀಡುವ ಸಲಹೆ ಬಂದಿತ್ತು. ಆದರೆ ನೌಕರರ ಹಿತರಕ್ಷಣೆಗಾಗಿ 3 ತಿಂಗಳಿಗೆ ಅವಧಿ ವಿಸ್ತರಣೆ ಮಾಡಿ ಎಂದು ಪಟ್ಟು ಹಿಡಿದೆ ಎಂದು ವಿವರಿಸಿದರು.
ಗ್ಲೋಬಲ್ ಟೆಂಡರ್ ವ್ಯವಸ್ಥೆಯಲ್ಲಿ ಅಂಬ್ಯುಲೆನ್ಸ್ ಸೇವೆ ಹಾಗೂ ನಿರ್ವಹಣೆ ಕೈಗೊಳ್ಳಲು ಪ್ರಸ್ತುತ ಕರ್ನಾಟಕದಲ್ಲಿ ಗುತ್ತಿಗೆ ಪಡೆದಿರುವ ಕಂಪನಿ ಸೇರಿದಂತೆ ಮೂರೇ ಮೂರು ಕಂಪನಿಗಳು ಸಾಮರ್ಥ್ಯ ಹೊಂದಿವೆ. ಆದರೆ ಪ್ರಸ್ತುತ ಕಂಪನಿಯಿಂದ ನೌಕರರ ಶೋಷಣೆಯಾಗುತ್ತದೆ ಎಂಬ ಕಾರಣಕ್ಕೆ 4ನೇ ಕಂಪನಿ ಹುಡುಕಾಟ ನಡೆಸಿದ್ದೂ ನಾನೇ. ಹೀಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಅಂಬ್ಯುಲೆನ್ಸ್ ಸೇವೆ ಒದಗಿಸುವುದು ನನ್ನ ಕನಸಾಗಿದೆ ಎಂದರು.
ಮೂರು ತಿಂಗಳುಗಳ ನಂತರ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು. ಆಗ ನೌಕರರ ಸಂಘಟನೆ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಸಲಹೆ ಪಡೆದುಕೊಳ್ಳಲಾಗುವುದು. ಇದರಿಂದಾಗಿ ನೌಕರರ ಹಿತರಕ್ಷಣೆ ಸಾಧ್ಯವಾಗಿ ದೊಡ್ಡದಾದ ಆತಂಕ ದೂರವಾಗುತ್ತದೆ ಎಂದರು.
ಪ್ರಾಣ ಉಳಿಸಬೇಕಾದ ವೈದ್ಯಕೀಯ ವೃತ್ತಿ ಕೆಲವು ವ್ಯಕ್ತಿಗಳಿಂದ ಘನತೆ ಕುಂದಿಸಿಕೊಳ್ಳುತ್ತಿದೆ. ಈಗ ಅನೇಕ ಡಾಕ್ಟರ್‌ಗಳೇ ನರ್ಸಿಂಗ್ ಹೋಂ ನಡೆಸಿ ಅಲ್ಲಿಯೇ ಲ್ಯಾಬೋರೇಟರಿ, ಔಷಧಾಲಯ ಹೊಂದಿದ್ದಾರೆ. ರೋಗಿಗಳನ್ನು ಕರೆತರುವುದು ಮಾತ್ರ ಬಾಕಿ ಇತ್ತು. ಆದರೆ ಅದನ್ನು ಸಹ ಕೆಲವು ವಾಹನ ಚಾಲಕರನ್ನು ಅಡ್ಡ ದಾರಿಗೆ ತಂದು ರೋಗಿಗಳನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ ಎಂದರು.
ಮೇಲ್ಮನೆ ಮಾಜಿ ಸದಸ್ಯ ಡಾ| ಎಂ.ಪಿ.ನಾಡಗೌಡ ಮಾತನಾಡಿ, ಅಂಬ್ಯುಲೆನ್ಸ್ ವ್ಯವಸ್ಥೆ ಬಲವರ್ಧನೆಗೊಳ್ಳಬೇಕಿದೆ. ಇಂದಿಗೂ ಅಂಬ್ಯುಲೆನ್ಸಗಳು ಗೂಡ್ಸ್ ವಾಹನಗಳಾಗಿವೆ. ಎಲ್ಲಿಯಾದರೂ ನಾಲ್ಕೈದು ಗೂಡ್ಸ್ ವಾಹನಗಳು ನಿಂತಿವೆ ಎಂದರೆ ಅದು ಸರ್ಕಾರಿ ಆಸ್ಪತ್ರೆ ಎಂಬಂತಾಗಿರುವುದು ನೋವಿನ ಸಂಗತಿ. ಬಂಡವಾಳಶಾಹಿಗಳು ಗುತ್ತಿಗೆ ಪಡೆದಿರುವ 108 ನಿರ್ವಹಣೆಯಿಂದ ನೌಕರರಿಗೆ ತೊಂದರೆಯಾಗುತ್ತಿದೆ ಎಂದರು.
ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, 108 ನೌಕರರ ಶೋಷಣೆ ತಪ್ಪಿಸಲು ಸರ್ಕಾರವೇ ನೇರವಾಗಿ ಈ ವ್ಯವಸ್ಥೆಯ ಕರ್ಣಧಾರತ್ವ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಹೂಗಾರ, ಎಂ.ಎನ್. ಪಾಟೀಲ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.