15 ಸಾವಿರ ಕೋವಿಡ್ ಪರೀಕ್ಷೆ: 1037 ಜನರಿಗೆ ಸೋಂಕು ದೃಢ
Team Udayavani, Sep 16, 2020, 6:42 PM IST
ಬಸವನಬಾಗೇವಾಡಿ: ತಾಲೂಕಿನಲ್ಲಿ 15 ಸಾವಿರ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ 1037 ಜನರಿಗೆ ಸೋಂಕು ದೃಢವಾಗಿದ್ದು ಸೋಂಕಿನಿಂದ ಇದುವರೆಗೆ 17 ಜನ ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಆಸ್ಪತ್ರೆ ವೈದ್ಯಾ ಕಾರಿ ಡಾ| ಶಶಿಧರ ಓತಗೇರಿ ಹೇಳಿದರು.
ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗ ಶೇ. 95 ಗುಣಮುಖರಾಗಿದ್ದು ಈಗ ಒಟ್ಟು ತಾಲೂಕಿನಲ್ಲಿ 224 ಜನರು ಸೋಂಕಿತರಿದ್ದಾರೆ ಎಂದು ಹೇಳಿದರು.
ಕುದರಿಸಾಲವಾಡಗಿ ಸದಸ್ಯ ಜಾಕೀರ್ ಹುಸೇನ್ ಶಿವಣಗಿ ಮಾತನಾಡಿ, ಹೂವಿನಹಿಪ್ಪರಗಿ, ಯಾಳವಾರ, ಬೂದಿಹಾಳ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರು ಸಂಚರಿಸಲು ಆಗುತ್ತಿಲ್ಲ ಎಂದು ಹೇಳಿದರು. ಮನಗೂಳಿ-ಬಿಜ್ಜಳ, ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಲಾದ ಕಾಲುವೆಗಳ ಮೇಲೆ ಸಮರ್ಪಕ ರಸ್ತೆ ಮಾಡದೆ ಇರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಆಗ ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಸಿ. ವಂದಾಲ ಮಾತನಾಡಿ, ಕೆಬಿಜೆಎನ್ ಎಲ್ ಇಲಾಖೆಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ನಮ್ಮ ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿ ಹಾದು ಹೋದ ಕಾಲುವೆಗಳ ಮೇಲೆ ಡಾಂಬರೀಕರಣ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.
ಈ ವರ್ಷ ತಾಪಂ ಸದಸ್ಯರಿಗೆ 1.50 ಕೋಟಿ ರೂ. ಅನುದಾನ ಬರಬೇಕಾಗಿತ್ತು. ಆದರೆ ಕೇವಲ 50 ಲಕ್ಷ ರೂ. ಮಾತ್ರ ಬಂದಿದೆ ಎಂದು ಯೋಜನಾ ಅಧಿಕಾರಿ ಆರ್.ಪಿ. ಪಾಟೀಲ ಸಭೆಗೆ ವಿವರಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ದೇವೇಂದ್ರ ನಾಯಕ, ಉಪಾಧ್ಯಕ್ಷೆ ಸುಜಾತಾ ಪಾಟೀಲ, ಸದಸ್ಯರಾದ ಲಲಿತಾಬಾಯಿ ಪವಾರ, ರತ್ನಾಬಾಯಿ ದೊಡ್ಡಮನಿ, ಶಾಂತಮ್ಮ ಪಾಟೀಲ, ಮಂಜುಳಾ ಲಮಾಣಿ, ನೀಲಮ್ಮ ಮೂಲಿಮನಿ ಭಾಗವಹಿಸಿದ್ದರು. ಸಭೆಯಲ್ಲಿ ಕೇಲವು ವಿವಿಧ ಅಧಿ ಕಾರಿಗಳು ಮಾತ್ರ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.