2ನೇ ಹಂತ: ನಾಳೆ ಮತದಾನ
ಸಿಂದಗಿ 381 ಸ್ಥಾನಗಳಿಗೆ 1069- ದೇವರಹಿಪ್ಪರಗಿ 242 ಸ್ಥಾನಕ್ಕೆ 677 ಅಭ್ಯರ್ಥಿಗಳ ಸ್ಪರ್ಧೆ
Team Udayavani, Dec 26, 2020, 6:20 PM IST
ಸಿಂದಗಿ: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆ ಡಿ. 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯುತ್ತಿದ್ದು, ಸಿಂದಗಿ ತಾಲೂಕಿನ 23 ಗ್ರಾಪಂಗಳಲ್ಲಿ 381 ಸ್ಥಾನಗಳಿಗೆ ಮತ್ತು ದೇವರಹಿಪ್ಪರಗಿ ತಾಲೂಕಿನ 14 ಗ್ರಾಪಂಗಳಲ್ಲಿ 247 ಸ್ಥಾನಗಳಿಗೆ 677 ಅಭ್ಯರ್ಥಿಗಳು ಮತಯಾಚನೆಯ ಅಂತಿಮ ಸುತ್ತಿನ ಕಸರತ್ತಿನಲ್ಲಿ ತೊಡಗಿದ್ದಾರೆ.
ಸಿಂದಗಿ ತಾಲೂಕಿನ 23 ಗ್ರಾಪಂಗಳ 431 ಸ್ಥಾನಗಳಲ್ಲಿ 51 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 380 ಸ್ಥಾನಗಳ ಚುನಾವಣೆ ಕಣದಲ್ಲಿ ಪರಿಶಿಷ್ಟ ಜಾತಿಯ 214, ಪರಿಶಿಷ್ಟ ಪಂಗಡದ 32, ಹಿಂದುಳಿದ ಅ ವರ್ಗದ 226, ಹಿಂದುಳಿದ ಬ ವರ್ಗದ 50, ಸಾಮಾನ್ಯ ವರ್ಗದ 547 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಒಟ್ಟು 526 ಮಹಿಳೆಯರು ಸೇರಿದಂತೆ 1069 ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರಗಾರಿಕೆ ನಡೆಸುತ್ತಿದ್ದಾರೆ. ದೇವರಹಿಪ್ಪರಗಿ ತಾಲೂಕಿನ 14 ಗ್ರಾಪಂಗಳ 255 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದರೆ.
ಮಣೂರ ಗ್ರಾಪಂನಲ್ಲಿ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ 1 ಸ್ಥಾನ ಖಾಲಿ ಉಳಿದಿದೆ. ಉಳಿದ 242 ಸ್ಥಾನಗಳ ಚುನಾವಣೆ ಕಣದಲ್ಲಿ ಪರಿಶಿಷ್ಟ ಜಾತಿಯ 212, ಪರಿಶಿಷ್ಟ ಪಂಗಡದ 28, ಹಿಂದುಳಿದ ಅ ವರ್ಗದ 106, ಹಿಂದುಳಿದ ಬ ವರ್ಗದ 20, ಸಾಮಾನ್ಯ ವರ್ಗದ 311 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಒಟ್ಟು 345 ಮಹಿಳೆಯರು ಸೇರಿದಂತೆ 677 ಅಭ್ಯರ್ಥಿಗಳು ಗೆಲುವಿಗಾಗಿ ಮತದಾರರ ಮನ ಮುಟ್ಟಲು ಪ್ರಯತ್ನಿಸುತ್ತಿದ್ದಾರೆ.
ಜಾತಿ ಲೆಕ್ಕಾಚಾರ ಜೋರು: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಅಭ್ಯರ್ಥಿಗಳು ಜಾತಿ ಲೆಕ್ಕಾಚಾರ, ಸಂಬಂಧಿಕರು, ಸ್ನೇಹಿತರನ್ನು ಭೇಟಿ ಮಾಡಿ ನಾನು ಸೋತರೆ ನಿಮಗೂ ಅವಮಾನ ಎನ್ನುತ್ತ ಗೆಲುವಿನ ದಡ ಸೇರಲು ದಾಳ ಉರುಳಿಸುತ್ತಿದ್ದಾರೆ. ತಮ್ಮ ಜಾತಿಯ ಮತಗಳನ್ನು ಸೆಳೆಯುವ ಜತೆಗೆ ಎದುರಿನ ಅಭ್ಯರ್ಥಿಯ ಜಾತಿಯ ಮತಗಳನ್ನು ಒಡೆಯುವ, ಗ್ರಾಮಸ್ಥರ ಜತೆಗಿನ ವೈಮನಸ್ಸು, ಹಿಂದಿನ ಘಟನಾವಳಿಗಳಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡ ಉದಾಹರಣೆಗಳನ್ನು ನೀಡುತ್ತ, ತಮ್ಮತ್ತ ಮತ ಸೆಳೆಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ತಮ್ಮದೇ ಕುಟುಂಬ, ಜಾತಿಗಳ ಅಭ್ಯರ್ಥಿಗಳ ಸಮೀಕರಣ ಮಾಡಿಕೊಂಡು ಪರಸ್ಪರ ಸಹಕಾರ ನೀಡುವ ಭರವಸೆಯೊಂದಿಗೆ ಸಾಗುತ್ತಿದ್ದಾರೆ.
ಪೂಜೆ, ಪುನಸ್ಕಾರ, ಹರಕೆ: ಬಹುತೇಕ ಅಭ್ಯರ್ಥಿಗಳು ಗೆದ್ದರೆ ಗ್ರಾಮದ ದೇವರಿಗೆ ಕಾಣಿಕೆ (ಒಂದಷ್ಟು ಹಣ) ನೀಡುವ ಭರವಸೆ ನೀಡಿದ್ದಾರೆ. ಮನೆ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. ಕಂಡು ಕಂಡ ದೇವರಿಗೆ ಹರಕೆ ಪೂಜೆ ಸಲ್ಲಿಸುವ ಕೈಂಕರ್ಯ ಮಾಡಿದ್ದಾರೆ.ಗ್ರಾಮಗಳಲ್ಲಿ ಕಾಣದ ನಾಯಕರ ಸುತ್ತಾಟ: ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಹೇಳಿಕೆಗಳಿಗೆ ಸೀಮಿತರಾಗಿದ್ದಾರೆ. ಗ್ರಾಮಗಳಿಗೆ ತೆರಳಿ ಬೆಂಬಲಗರನ್ನು ಹುರಿದುಂಬಿಸುವ ಕೆಲಸ ಕಾಣದಾಗಿದೆ.
ಗ್ರಾಪಂ ಚುನಾವಣೆ ಪ್ರಚಾರಕ್ಕೆ ಹೊದರೆ ಮುಂದಿನ ತಾಲೂಕು, ಜಿ ಪಂ ಸೇರಿದಂತೆ ವಿಧಾನಸಭೆ ಚುನಾವಣೆಗೆ ಎಲ್ಲಿ ಅಡ್ಡಿಯಾಗುತ್ತದೆ ಎಂಬ ಭಯ ಅವರಲ್ಲಿದೆ. ಹೀಗಾಗಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರು ತಮ್ಮ ತಮ್ಮ ಪಕ್ಷ ಸರಕಾರದಲ್ಲಿದ್ದ ಸಂದರ್ಭದಲ್ಲಿ ಕೈಗೊಂಡ ಕಾರ್ಯಗಳು, ಸಾಧನೆಗಳನ್ನು ಮತ್ತು ವಿರೋಧ ಪಕ್ಷಗಳನ್ನು ಟೀಕಿಸುತ್ತ ಮತದಾರರಿಗೆ ಮನವರಿಕೆ ಮಾಡಿ ಮತ ಯಾಚನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕೃಷಿ ಕಾಯಿದೆ: ಏನೆನ್ನುತ್ತಾರೆ ತೇಜಸ್ವಿ ಸೂರ್ಯ
ಕೋವಿಡ್ ಹೊಸ ರೂಪಾಂತರ!
ಪರಿಸ್ಥಿತಿಯ ನಡುವೆ ಗ್ರಾಪಂ ಚುನಾವಣೆ ನಡೆಯುತ್ತಿರುವ ಕಾರಣ ಕೊವಿಡ್ ಸೋಂಕಿತರಿಗಾಗಿಯೇ ಪ್ರತ್ಯೇಕ ಮತದಾನ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನದ ಸಮಯ ನಿಗದಿ ಮಾಡಲಾಗಿದ್ದು, ಇದರಲ್ಲಿ ಸಂಜೆ 4ರಿಂದ 5 ಗಂಟೆಯ ಅವಧಿ ಯನ್ನು ಕೋವಿಡ್ ಪಾಸಿಟಿವ್ ಪ್ರಕರಣ ಇರುವ ಮತದಾರರಿಗಾಗಿ ನಿಗದಿ ಮಾಡಲಾಗಿದೆ.
ಸಂಜೀವಕುಮಾರ ದಾಸರ, ತಹಶೀಲ್ದಾರ್, ಸಿಂದಗಿ
ರಮೇಶ ಪೂಜಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.