8.4 ಲಕ್ಷ ಮೌಲ್ಯದ ಅಕ್ಕಿ ಜಪ್ತಿ
Team Udayavani, Oct 13, 2021, 5:31 PM IST
ನಿಡಗುಂದಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ತಾಲೂಕಾಡಳಿತ ಹಾಗೂ ಪೊಲೀಸರು ಜಂಟಿಯಾಗಿ ವಶಪಡಿಸಿಕೊಂಡ ಘಟನೆ ತಾಲೂಕಿನ ಯಲಗೂರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಲಾರಿಯಾಗಿದ್ದು, ಲಿಂಗಸೂರದ ಅಂಜನಾದ್ರಿ ಟ್ರೇಡರ್ನಿಂದ ಪಡಿತರ ಅಕ್ಕಿಯುಳ್ಳ ಚೀಲ ತೆಗೆದುಕೊಂಡು ಗುಜರಾತ್ ರಾಜ್ಯದ ಜೆತಲಪುರಕ್ಕೆ ಲಾರಿ ಹೊರಟಿತ್ತು. ಲಾರಿ ಚಾಲಕ ನಾಮಕಲ್ ಜಿಲ್ಲೆಯ ಪರಮತಿ-ವೆಲ್ಲೂರ ತಾಲೂಕಿನ ಕೊಡಚ್ಚೇರ ಗ್ರಾಮದ ಸರವಣ ಎಸ್ ಸಂಗೋಡನನನ್ನು ಬಂಧಿಸಲಾಗಿದ್ದು ಲಾರಿಯನ್ನು ನಿಡಗುಂದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾರಿಯಲ್ಲಿ 575 ಚೀಲಗಳಲ್ಲಿ ಇದ್ದ 28,750 ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ 8,45,250 ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಅಕ್ಕಿ ಸರಕಾರ ನಾನಾ ಯೋಜನೆಗೆ ಹಂಚಿಕೆಯಾದ ಪಡಿತರ ಅಕ್ಕಿಯಾಗಿದೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಸತೀಶ ಕೂಡಲಗಿ ಮಾರ್ಗದರ್ಶನದಲ್ಲಿ ಆಹಾರ ನಿರೀಕ್ಷಕ ಸಂಜಯ ಪಾಟೀಲ, ಲೋಕೇಶ ಕುಪ್ಪಸ್ತ, ಅಪ್ಪಾಸಾಹೇಬ ಘಂಟಿ, ಪೊಲೀಸ್ ಪೇದೆಗಳು ಪಾಲ್ಗೊಂಡಿದ್ದರು. ಆಹಾರ ನಿರೀಕ್ಷಕ ಸಂಜಯ ಪಾಟೀಲ ಈ ಕುರಿತು ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.