ಮೈ ನವಿರೇಳಿಸಿದ ರಾಜ್ಯಮಟ್ಟದ ಟಗರಿನ ಕಾಳಗ
Team Udayavani, Aug 19, 2022, 6:10 PM IST
ಬಸವನಬಾಗೇವಾಡಿ: ಬಸವೇಶ್ವರ (ಮೂಲ ನಂದೀಶ್ವರ) ಜಾತ್ರಾ ಮಹೋತ್ಸವ 4ನೇ ದಿನವಾರದ ಗುರುವಾರ ಪಟ್ಟಣದ ಬಸವೇಶ್ವರ ದೇವಾಲಯದ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟಗರಿನ ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡಿತು. ‘
ಕಾಳಗ ವೀಕ್ಷಿಸಲು ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಾರು ಜನರು ಆಗಮಿಸಿ ಕೇಕೆ, ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಟಗರಿನ ಕಾಳಗ ಹುರಿದುಂಬಿಸಿದರು. ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆದರು. 4 ಹಲ್ಲಿನ ಟಗರಿನ ಕಾಳಗದಲ್ಲಿ ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಕನಕ ಶ್ರೀ ಗೆಳೆಯರ ಬಳಗ ಪ್ರಥಮ, ಮನಗೂಳಿಯ ಎಂ.ಜಿ. ಗ್ರೂಪ್ ದ್ವಿತೀಯ, ಬನ್ಮದಬುನ್ನಿಯ ಕರೆಮ್ಮದೇವಿ ಪ್ರಸನ್ನ ಟಗರು ತೃತೀಯ ಬಹುಮಾನ ಪಡೆದವು. 8 ಹಲ್ಲಿನ ಟಗರಿನ ಕಾಳಗದಲ್ಲಿ ಬಸವನಬಾಗೇವಾಡಿ ಲವ್ಲಿಬಾಯ್ ಬಿ ಪ್ರಥಮ, ಕೇಸಾಪೂರಗಿಡ್ಡಿ. ಬಿ (ದ್ವಿತೀಯ), ಬಸವನಬಾಗೇವಾಡಿ ಲವ್ಲಿಬಾಯ್ ಎ. ತೃತೀಯ ಬಹುಮಾನ ಪಡೆದವು.
ಟಗರಿನ ಕಾಳಗಕ್ಕೆ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಶಿವಾನಂದ ಈರಕಾರ ಮುತ್ಯಾ ಚಾಲನೆ ನೀಡಿದರು. ಈ ವೇಳೆ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ವಿಕಾಸ ಜೋಗಿ, ಎಂ.ಜಿ. ಆದಿಗೊಂಡ, ಶಂಕರಗೌಡ ಬಿರಾದಾರ, ರವಿ ಚಿಕ್ಕೊಂಡ, ಬಸವರಾಜ ಕೋಟಿ, ಸುಭಾಷ ಚಿಕ್ಕೊಂಡ , ಪರಶುರಾಮ ಜಮಖಂಡಿ, ಬಸವರಾಜ ಅಳ್ಳಗಿ ಇತರರಿದ್ದರು. ರಸಮಂಜರಿ ಇಂದು: ಆ.19ರಂದು ಸಂಜೆ 7ಕ್ಕೆ ಕಂಬದ ರಂಗಯ್ಯ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.