ನಿರ್ಮೋಹಿ ಸಂತನಿಲ್ಲದೇ ವರ್ಷವಾಯ್ತು; ವೈವಿಧ್ಯಮಯ ಕಾರ್ಯಕ್ರಮ
Team Udayavani, Jan 2, 2024, 2:29 PM IST
ಉದಯವಾಣಿ ಸಮಾಚಾರ
ವಿಜಯಪುರ: ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಬಯಲಲ್ಲಿ ಬಯಲಾಗಿ ಇದೀಗ ವರ್ಷ ಕಳೆದಿದೆ. ಗಿನ್ನಿಸ್ ದಾಖಲೆ ಎಂಬಂತೆ 25ಲಕ್ಷಕ್ಕೂ ಮಿಕ್ಕ ಭಕ್ತರು ಒಟ್ಟಾಗಿ ಸೇರಿ ವಿದಾಯ ಹೇಳಿ ಶತಮಾನದ ಸಂತನಿಲ್ಲದೇ ಮತ್ತೂಂದು ಸಂಕ್ರಾಂತಿ ಬಂದಿದೆ. ತಮ್ಮಗಳ ಭವಭ್ರಾಂತಿ ಬಿಡಿಸಿದ್ದಕ್ಕೆ ಭಕ್ತರು ಮಾತ್ರ ಶತಮಾನದ ಸಂತನನ್ನು ಹೃದಯಾಂತರಾಳದಲ್ಲಿ ಸದಾ ಜೀವಂತವಾಗಿರಿಸಿಕೊಂಡು ಸ್ಮರಿಸುತ್ತಲೇ ಇದ್ದಾರೆ.
ಕರ್ನಾಟಕ ಮಾತ್ರವಲ್ಲ ಭಾರತದ ಗಡಿಯಾಚೆ ಹಲವು ದೇಶಗಳಲ್ಲಿ ಸುತ್ತಿ ಪ್ರವಚನ ನೀಡಿದ್ದ ಸಿದ್ಧೇಶ್ವರ ಶ್ರೀಗಳು, ವಿಶ್ವದಾದ್ಯಂತ ಭಕ್ತರ ದಂಡು ಹೊಂದಿದ್ದಾರೆ. ಜಗತ್ತಿಗೆ ತಮ್ಮ ಜೀವಿತವನ್ನೇ ಸಿದ್ಧೇಶ್ವರರು ಸಂದೇಶವಾಗಿ ಬಿಟ್ಟು ಹೋಗಿದ್ದಾರೆ. ಬಯಲಲ್ಲಿ ಬಯಲಾಗುವ ತಮ್ಮ ಅಂತಿಮ ಇಂಗಿತವನ್ನು ಲಿಖೀತ ಉಯಿಲಿನಲ್ಲಿ ದಾಖಲಿಸುವ ಮೂಲಕ ನಿರ್ಮೋಹಿ ಸಂತನೆಂದರೆ ಹೇಗಿರಬೇಕು ಎಂಬುದಕ್ಕೆ ಸಾರ್ವಕಾಲಿಕ ಸಾಕ್ಷಿಯಾಗಿದ್ದಾರೆ. ತಾವು ಬರೆದಿದ್ದ ಅಂತಿಮ ವಿದಾಯದ ಉಯಿಲಿನಲ್ಲಿ ಸಣ್ಣ ಕುರುಹು, ಸ್ಥಾವರವೂ ಇಲ್ಲದಂತೆ ಬಯಲಲ್ಲಿ ಬಯಲಾಗುವ ಇಂಗಿತ ವ್ಯಕ್ತಪಡಿಸಿದ್ದರು.ಸಂದೇಶವೂ ಹಲವು ಸರ್ವಸಂಗಿಗಳು ಮಾತ್ರವಲ್ಲ ಸಂತರಿಗೂ ಶಾಸ್ವತ ಆದರ್ಶ ಎಂಬಂತಿತ್ತು.
ಶಾಂತಿ ಪ್ರತಿಪಾದಕ ಶ್ರೀಗಳ ಆಶಯದಂತೆ ಅವರ ಜ್ಞಾನಯೋಗಾಶ್ರಮದಲ್ಲಿ ಈಗಲೂ ನೀರವತೆಯ ಶಾಂತಿ ನೆಲೆಸಿದೆ. ಮನುಕುಲ ಉದ್ಧಾರಕ್ಕೆ ಸಿದ್ಧೇಶ್ವರ ಶ್ರೀಗಳು ಬಿಟ್ಟು ಹೋಗಿರುವ ಮೌಲಿಕ ಸಂದೇಶಗಳನ್ನು ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿಯನ್ನು ಭಕ್ತರು ಹೊತ್ತಿದ್ದಾರೆ. ಇದಕ್ಕಾಗಿ ನಯೋಗಾಶ್ರಮದಲ್ಲಿ ಆನುಚಾನವಾಗಿ ವೈವಿಧ್ಯಮಯ
ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.
ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕನ್ಹೆàರಿ ಕಾಡಸಿದ್ದೇಶ್ವರ ಶ್ರೀಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಇತರರು ನವೆಂಬರ್ ತಿಂಗಳಲ್ಲಿ ಕೈಗೊಂಡ ನಿರ್ಧಾರದಂತೆ ಇದೀಗ “ಗುರು ನಮನ’ ಯಶಸ್ವಿಗೊಳಿಸಿದ್ದಾರೆ.
ಜನವರಿ 1 ಹಾಗೂ 2 ರಂದು ಎರಡು ದಿನಗಳ ಕಾಲ ಗುರು ನಮನ ಕಾರ್ಯಕ್ರಮ ಮೂಲಕ ಶ್ರೀಗಳ ಬಗ್ಗೆ ಸ್ಮರಣೆ ಕಾರ್ಯಕ್ರಮ ಆಯೋಜಿಸಿದರೂ, ಶ್ರೀಗಳ ಆಶಯಕ್ಕೆ ಧಕ್ಕೆ ಬಾರದಂತಿರಬೇಕು ಎಂಬುದನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.
ಗುರುನಮನ ಕಾರ್ಯಕ್ರಮಕ್ಕೂ ಮುನ್ನ 15 ದಿನಗಳ ಕಾಲ ಶ್ರೀಗಳ ಸಂದೇಶ ಪರಸರಿಸಲು ಹಲವು ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ.
ಅಲ್ಲದೇ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಆಶಯಗಳ ಗ್ರಾಮೀಣ ಬದುಕು, ರೈತರು, ಯುವಜನರು, ಶಿಕ್ಷಣ ಹೀಗೆ ವೈವಿಧ್ಯಮಯ
ಗೋಷ್ಠಿಗಳನ್ನು ನಡೆಸುವ ಮೂಲಕ “ಶತಮಾನದ ಸಂತ’ನನ್ನು ವಿಶೇಷವಾಗಿ ಸ್ಮರಿಸುವ ಕೆಲಸವನ್ನೂ ಮಾಡಲಾಗಿದೆ.
ಕಳೆದೊಂದು ವಾರದಿಂದ ನಿತ್ಯವೂ ಜ್ಞಾನಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮಗಳಿಗೆ ಪಕ್ಷಾತೀತವಾಗಿ ಗಣ್ಯರನ್ನು,
ಸಾಧಕ-ಸಾಧಕಿಯರನ್ನು ಆಹ್ವಾನಿಸಿ, ವಿಶೇಷ ಗೋಷ್ಠಿಗಳನ್ನು ಯಶಸ್ವಿಗೊಳಿಸಿದ್ದಾರೆ.
ಆಯೋಜಿಸಿದ್ದ ಕಾರ್ಯಕ್ರಮಗಳು ಕೂಡ ಶ್ರೀಗಳ ಆಶಯದಂತೆ ಸರಳತೆ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆ ಹೀಗೆ ನಡೆದಾಡುವ ದೇವರ ಆದರ್ಶ ಸಂದೇಶಗಳ ವಿಷಯಗಳಿಗೆ ಅದ್ಯತೆ ನೀಡಿಲಾಗಿತ್ತು. ಸದರಿ ಕಾರ್ಯಕ್ರಮಕ್ಕೆ ಮಾದಾರ ಚನ್ನಯ್ಯ ಗುರುಪೀಠದ ಶ್ರೀಗಳು, ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಶ್ರೀಗಳು, ಕೂಡಲಸಂಗಮದ ಬಸವಧರ್ಮಪೀಠ ಜಗದ್ಗುರು ಗಂಗಾ ಮಾತಾಜಿ, ಗದಗ ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು, ಹಂಚಿನಾಳ ಭಕ್ತಿಯೋಗಾಶ್ರಮದ ಪೂಜ್ಯ ಶ್ರೀ ಮಹೇಶಾನಂದ ಶ್ರೀಗಳು, ಸಿಂದಗಿ ಪ್ರಭುಸಾರಂಗ ಶ್ರಿಗಳು ಸೇರಿದಂತೆ ನಾಡಿನ ವಿವಿಧ ಸಂತರನ್ನು ಕರೆಸಿ ಆಧ್ಯಾತ್ಮಿಕ ಜ್ಞಾನ ಪ್ರಸಾರ ಮಾಡಲಾಗಿದೆ.
ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವರಾದ ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಸ್.ಕೆ.ಬೆಳ್ಳುಬ್ಬಿ, ಶಾಸಕರಾದ ಸಿದ್ದು ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ, ವಾಗ್ಮಿಗಳಾದ ವೀಣಾ ಬನ್ನಂಜೆ, ಚಕ್ರವರ್ತಿ ಸೂಲಿಬೆಲೆ ಇವರಂಥ ಗಣ್ಯರು, ಸಾಧಕರನ್ನು ಕರೆಯಿಸಿ ನಿತ್ಯವೂ ಒಂದೊಂದು ಗೋಷ್ಠಿ ಮೂಲಕ ಉತ್ತಮ ಸಮಾಜಕ್ಕೆ ಮೌಲಿಕ ಸಂದೇಶಗಳನ್ನು ಬಿತ್ತಲಾಗಿದೆ.
ಗುರುನಮನದ ಅಂತಿಮ ದಿನವಾದ ಡಿ.2ರಂದು ಮಂಗಳವಾರ ಜ್ಞಾನಯೋಗಾಶ್ರಮದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಮೂಲಕ ನಾಡಿನ ಜನತೆಗೆ ನಡೆದಾಡುವ ದೇವರನ್ನು ಸ್ಮರಿಸುವುದಕ್ಕೆ ವೇದಿಕೆ ಸಿದ್ಧಗೊಂಡಿದೆ.
*ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.