ರಾಜ್ಯ ಹೆದ್ದಾರಿ ತಡೆದು ಎಬಿವಿಪಿ ಪ್ರತಿಭಟನೆ
Team Udayavani, Dec 1, 2019, 1:02 PM IST
ಬಸವನಬಾಗೇವಾಡಿ: ತೆಂಗಾಣದಲ್ಲಿ ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಸಿ ಕೆಲ ಹೊತ್ತು ಮನಗೂಳಿ-ಬಿಜ್ಜಳ,ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ನೂರಾರು ವಿದ್ಯಾರ್ಥಿನಿಯರು ಘೋಷಣೆ ಕೂಗುತ್ತ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಬಿವಿಪಿ ವಿಭಾಗೀಯ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ, ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ ಕೊಲೆ ಮಾಡಿದ ಘಟನೆ ಅಖೀಲಭಾರತೀಯ ವಿದ್ಯಾರ್ಥಿ ಪರಿಷತ್ ಕಟುವಾಗಿ ಖಂಡಿಸುತ್ತದೆ. ಕ್ರೂರ ಘಟನೆಗೆ ಕಾರಣರಾದವರಿಗೆ ತಕ್ಷಣಮರಣ ದಂಡನೆ ವಿಧಿ ಸಬೇಕೆಂದು ಆಗ್ರಹಿಸುತ್ತದೆ ಎಂದರು.
ತೆಲಂಗಾಣದ ಗೃಹ ಮಂತ್ರಿ ನೀಡಿದಹೇಳಿಕೆ ಅವರ ಕೀಳು ಮಾನಸಿಕತೆಯನ್ನುಬಿಂಬಿಸುತ್ತಿದೆ. ಅಪರಾ ಧಿಗಳಿಗೆಕಠಿಣ ಶಿಕ್ಷೆ ವಿಧಿಸುವ ಬದಲು ಹತ್ಯೆಗೀಡಾದ ವೈದ್ಯರ ಮೇಲೆಯೇ ಪ್ರಶ್ನೆ ಚಿಹ್ನೆ ಕೂರಿಸುವುದು ಚಿಂತಾಜನಕ ಸಂಗತಿಯಾಗಿದೆ ಎಂದರು. ನಗರ ಕಾರ್ಯದರ್ಶಿ ಸಂತೋಷ ಪಟೆದ ಮಾತನಾಡಿ, ಯಾವುದೇ ಒಬ್ಬಮಹಿಳೆ ಸಹಾಯವನ್ನು ಅಪೇಕ್ಷಿಸಿದಾಗ ಪ್ರತಿಯಾಗಿ ಸಹಾಯ ಮಾಡುವ ಬದಲಾಗಿ ಆ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಜೀವಂತವಿರುವಾಗಲೇ ಸುಟ್ಟು ಕೊಲೆ ಮಾಡುವ ಮಾನಸಿಕತೆವುಳ್ಳವರು ಭೂಮಿ ಮೇಲೆ ಬದುಕಿರುವುದುಯೋಗ್ಯವಲ್ಲ ಎಂದರು.
ತಾಲೂಕು ಸಂಚಾಲಕ ಶಿವಾನಂದಬೆಲ್ಲದ, ಬಂಗಾರೆಪ್ಪಗೌಡ ಪಾಟೀಲ,ಮುತ್ತುರಾಜ ಹಾಳಿಹಾಲ, ಹನುಮಂತ ಹಾದಿಮನಿ, ಸಿದ್ದು ಪೂಜಾರಿ, ಸಂಜುತಳವಾರ, ಬಸವರಾಜ ಬೇಲಿ, ಜ್ಯೋತಿಸಂಗಮ, ಜಯಶ್ರೀ ಮಳ್ಳಿ, ಅನಿತಾ ಲಮಾಣೆ, ಗೀತಾ ಜಾಧವ, ದೀಪಾ ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.