1.46 ಲಕ್ಷ ಲಂಚದ ಹಣ ಸಮೇತ ಎಸಿಬಿ ಬಲೆಗೆ ಬಿದ್ದ ಕೈಗಾರಿಕಾ ಜೆಡಿ ಸಿದ್ದಣ್ಣ
Team Udayavani, Jan 12, 2021, 10:12 PM IST
ವಿಜಯಪುರ: ತಮ್ಮ ಇಲಾಖೆಯ ಯೋಜನೆ ಸಬ್ಸೀಡಿ ಹಣ ನೀಡಲು ಫಲಾನುಭವಿಯಿಂದ ಲಕ್ಷಾಂತರ ರೂ. ಲಂಚ ಪಡೆದ ವಿಜಯಪುರ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಹಣದ ಸಮೇತ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ಕೈಗಾರಿಕಾ ಕೇಂದ್ರದ ಕೆಐಎಡಿಬಿ ವ್ಯಾಪ್ತಿಯಲ್ಲಿ ಭಾಗ್ಯಶ್ರೀ ವಿಜಯಕುಮಾರ ಮನ್ನೂರು ಎಂಬವರು ಶುದ್ಧ ನೀರಿನ ಘಟಕ ಇರುವ ಮೇ.ನಂದಿ ಅಗ್ರೋ ಫುಡ್ ಇಂಡಸ್ಟ್ರೀಸ್ ಹೆಸರಿನ ಘಟಕವನ್ನು ಸಂಗನಗೌಡ ಪಾಟೀಲ ಎಂಬರಿಂದ ಖರೀದಿಸಿದ್ದರು.
ಸದರಿ ಘಟಕ ಖರೀದಿಗಾಗಿ ಫಲಾನುಭವಿ ಭಾಗ್ಯಶ್ರೀ ಅವರಿಗೆ ಸರ್ಕಾರ 20.87 ಲಕ್ಷ ರೂ. ಸಬ್ಸೀಡಿ ಮಂಜೂರಾಗಿತ್ತು. ಆದರೆ ಈ ಸಬ್ಸಿಡಿ ಹಣ ಬಿಡುಗಡೆಗೆ ಸಿದ್ದಣ್ಣ ಲಂಚಕ್ಕೆ ಬೇಡಿಕೆ ಇಟ್ಟರೂ ಫಲಾನುಭವಿ ಲಂಚ ನೀಡಲು ನಿರಾಕರಿಸಿದ್ದರು.
ಲಂಚದ ನೀಡದ ಕಾರಣಕ್ಕೆ ಭಾಗ್ಯಶ್ರೀ ಅವರಿಗೆ ಸಬ್ಸೀಡಿ ಹಣ ಬಿಡುಗಡೆ ಮಾಡದಂತೆ ಜಂಟಿ ನಿರ್ದೇಶಕ ಸಿದ್ದಣ್ಣ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಅಲ್ಲದೇ ಸಬ್ಸೀಡಿ ಹಣ ಬಿಡುಗಡೆಗೆ 1.46 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಫಲಾನುಭವಿ ಭಾಗ್ಯಶ್ರೀ ಅವರ ಪತಿ ವಿಜಯಕುಮಾರ ಎಸಿಬಿ ಮೊರೆ ಹೋಗಿದ್ದರು.
ಮಂಗಳವಾರ ಸಂಜೆ 7.40 ರ ಸುಮಾರಿಗೆ ಫಲಾನುಭವಿ ಭಾಗ್ಯಶ್ರೀ ಅವರಿಂದ 1.46 ಲಕ್ಷ ರೂ. ಲಂಚ ಸ್ವೀಕರಿಸಿದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣದ ಸಮೇತ ಆರೋಪಿ ಅಧಿಕಾರಿ ಸಿದ್ದಣ್ಣ ಅವರನ್ನು ಬಂಧಿಸಿದ್ದಾರೆ.
ಎಸಿಬಿ ವಿಜಯಪುರ ಡಿಎಸ್ಪಿ ಬಿ.ಎಸ್.ಗಂಗಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಹರಿಶ್ಚಂದ್ರ, ಪರಮೇಶ್ವರ ಕವಟಗಿ ಅವರ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.
ಇದನ್ನೂ ಓದಿ : ಸಿ.ಎಂ. ನನಗೆ ಕರೆ ಮಾಡಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ-ಯತ್ನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.