ಅಕ್ಷರ ಕಲಿಯದ ಪ್ರತಿಭೆಗೆ ಪ್ರಶಸ್ತಿಯ ಗರಿ
Team Udayavani, Mar 11, 2022, 4:57 PM IST
ವಿಜಯಪುರ: ಶಾಲೆಗೆ ಹೋಗುವ ಮಾತಿರಲಿ ಅಕ್ಷರ ದರ್ಶನವೂ ಆಗಿರದ ಆಕೆಯದ್ದು ಹಳ್ಳಿ ನಾಟಕಗಳಲ್ಲಿ ದೊಡ್ಡ ದನಿ. ಇಂಥ ಅಪರೂಪದ ವಿಜಯಪುರ ಜಿಲ್ಲೆಯ ರಂಗ ಪ್ರತಿಭೆಗೆ ಈ ಬಾರಿ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಇಂಡಿ ತಾಲೂಕಿನ ಚವಡಿಹಾಳ ಮೂಲದ ಲಲಿತಾಬಾಯಿ ಲಾಲಪ್ಪ ದಶವಂತ ಎಂಬ ಗ್ರಾಮೀಣ ರಂಗಕರ್ಮಿಯೇ ಈ ಬಾರಿ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರು. ಅನಕ್ಷರಸ್ಥೆಯಾಗಿರುವ ಲಲಿತಾಬಾಯಿ ಒಮ್ಮೆ ಕೇಳಿದ ರಂಗಭೂಮಿಯ ಮಾತುಗಳನ್ನು ಎಂದಿಗೂ ಮರೆಯದ ವಿಶೇಷ ಜ್ಞಾನದ ಖಣಿ ಎನಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ವಿಜಯಪುರ ಗ್ರಾಮೀಣ ನಾಟಕ ಪರಿಸರದಲ್ಲಿ ಸಾತ್ವಿಕ ಪಾತ್ರಗಳ ಮನೋಜ್ಞ ಅಭಿನಯ ಕಂಡು ಪ್ರೇಕ್ಷಕ ಬೆರಗಾಗುತ್ತಿದ್ದ. ನಾಟಕಗಳಲ್ಲಿ ತಾವು ಅಭಿನಯಿಸಿದ ಸಾತ್ವಿಕ ಪಾತ್ರಗಳಿಗೆ ಜೀವ ತುಂಬುವ ಜೊತೆಗೆ ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಲ್ಲಿ ಚಿತ್ರಗೀತೆಗಳು, ಜಾನಪದ ಗೀತೆಗಳಿಗೆ ಧ್ವನಿ ಅಗಿದ್ದರಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದವರು.
ತಬಲಾ ಕಲಾವಿದರಾಗಿದ್ದ ತಂದೆ ಲಾಲಪ್ಪ ಬಾಲ್ಯದಲ್ಲೇ ಮಗಳಲ್ಲಿದ್ದ ಗಾನ ಹಾಗೂ ನಟನಾ ಕೌಶಲ್ಯ ಪ್ರತಿಭೆ ಗುರುತಿಸಿದ್ದರು. ಹೀಗಾಗಿ 9ನೇ ವಯದಲ್ಲಿದ್ದ ಲಲಿತಾಬಾಯಿ ಅವರನ್ನು ಸೋದರ ಮಾವ ದೇವಪ್ಪ ಅವರ ಪಾರಿಜಾತ ನಾಟಕ ಕಂಪನಿಯ ಸಣ್ಣಾಟದಲ್ಲಿ ನಾರದ, ರುಕ್ಮಿಣಿ, ದರ್ಶನಿ ಪಾತ್ರ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೊತೆಗೆ ಕನ್ನಡ ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಲಲಿತಾಬಾಯಿ ಆ ಕಾಲದಲ್ಲೇ ಕನ್ನಡ ರಂಗಭೂಮಿಯ ಲತಾ ಮಂಗೇಶ್ಕರ್ ಅಂತೆಲ್ಲ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದರು.
ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಗಡಿನಾಡು ಕನ್ನಡ ಗ್ರಾಮಗಳಲ್ಲಿ ಇವರು ಹವ್ಯಾಸಿ ನಾಟಕಗಳಲ್ಲಿನ ಅಭಿನಯ, ಹಿನ್ನೆಲೆ ಗಾಯನ ರಂಗಭೂಮಿ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂಥ ಅಪರೂಪದ ಅನಕ್ಷರಸ್ಥ ರಂಗಕರ್ಮಿ ಲಲಿತಾಬಾಯಿ ಅವರನ್ನು ಅರಸಿಕೊಂಡು ಬಂದಿರುವ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂಬುದು ಹೆಚ್ಚು ಸೂಕಕಲಾವಿದರಾಗಿದ್ದ ನಮ್ಮ ತಂದೆ ನನ್ನಲ್ಲಿದ್ದ ಕಲಾ ಪ್ರತಿಭೆ ಗುರುತಿಸಿದ್ದು, ಅವರೇ ನನ್ನ ಮೊದಲ ಗುರು.
ಪಾರಿಜಾತ ಕಲಾ ತಂಡ ಹೊಂದಿದ್ದ ಸೋದರ ಮಾವ ದೇವಪ್ಪ ಅವರ ಬಳಿ ಪಡೆದ ಜ್ಞಾನ ಇಂದು ನನ್ನನ್ನು ಪ್ರಶಸ್ತಿ ಮಟ್ಟಕ್ಕೆ ತಂದು ನಿಲ್ಲಿಸಿದೆ. ನನ್ನನ್ನು ಬೆಳೆಸಿದ ಎಲ್ಲ ಪ್ರೇಕ್ಷಕ, ಕಲಾಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ. -ಲಲಿತಾಬಾಯಿ ದಶವಂತ, ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ, ರಂಗಕರ್ಮಿ
ಇಂಡಿ ಭಾಗದ ಹಳ್ಳಿಗಳಲ್ಲಿ ಪ್ರದರ್ಶನ ಕಾಣುವ ನಾಟಕಗಳಲ್ಲಿ ಲಲಿತಾಬಾಯಿ ಅಭಿನಯ, ಹಾಡುವ ಧ್ವನಿ ಹೆಚ್ಚು ಚಿರಪರಿಚಿತ. ಶಾಲೆಯ ಮುಖವನ್ನೇ ನೋಡದ ಆಕೆಯ ಪ್ರತಿಭೆಗೆ ಪ್ರಶಸ್ತಿ ಧಕ್ಕಿರುವುದು ಹೆಚ್ಚು ಸೂಕ್ತ. -ಎಲ್.ಬಿ. ಶೇಖ್ ಮಾಸ್ತರ, ಮಾಜಿ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.