ಸೌಲಭ್ಯ ಸದುಪಯೋಗಕ್ಕೆ ಸಲಹೆ
Team Udayavani, Jan 2, 2021, 3:59 PM IST
ಮುದ್ದೇಬಿಹಾಳ: ಸಮಾಜದ ಎಲ್ಲ ವರ್ಗದ ಕಲಾವಿದರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆ ಹಮ್ಮಿಕೊಂಡು ಕಲಾವಿದರ ಬಾಳಿಗೆಬೆಳಕಾಗುವ ಮಹತ್ಕಾರ್ಯ ಹಮ್ಮಿಕೊಂಡಿದೆಎಂದು ವಿಜಯಪುರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಐ.ಸಿ. ಆಶಾಪುರ ಹೇಳಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಉಪ ಯೋಜನೆಯಡಿ ನಡೆದ ಗಿರಿಜನ ಉತ್ಸವ 2020-21 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಕಲಾವಿದರ ಸಂರಕ್ಷಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರಮಿಸುತ್ತಿದೆ.ಹಲವಾಗು ವಿಭಿನ್ನ ಕಾರ್ಯಕ್ರಮಆಯೋಜಿಸಿ ಕಲೆ, ಕಲಾವಿದರಿಗೆ ಪ್ರೋತ್ಸಾಹನೀಡುವ ಕಾರ್ಯ ಮಾಡುತ್ತಿದೆ. ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಯರಝರಿ ವಲಯ ಘಟಕದ ಅಧ್ಯಕ್ಷ ಮಹಾಂತೇಶ ಪಟ್ಟಣದ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವಕಲೆಗಳು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಅಳಿಯತೊಡಗಿವೆ. ಇದಕ್ಕೆ ಯಾರೂ ಅವಕಾಶ ನೀಡಬಾರದು. ಸರ್ಕಾರದ ಕಾರ್ಯಕ್ರಮಗಳನ್ನು ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಕಲಾವಿದರ ಬದುಕು ಬೆಳಗಿಸುವುದರ ಜೊತೆಗೆ ಮೂಲ ಸಂಸ್ಕೃತಿಯನ್ನು ಜನರಮನಗಳಲ್ಲಿ ಬಿತ್ತುವ ಕೆಲಸ ಮಾಡಬೇಕುಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಯಲ್ಲಾಲಿಂಗೇಶ್ವರಮಠದ ಮಲ್ಲಾಲಿಂಗ ಪ್ರಭುಗಳುಆಶೀರ್ವಚನ ನೀಡಿ, ಗ್ರಾಮೀಣ ಕಲೆಗಳಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ಗಿರಿಜನಉತ್ಸವ ವಿಶೇಷವಾಗಿದೆ. ಗಿರಿಜನರ ಮೂಲ ಪರಂಪರೆಯು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಇಲಾಖೆಯ ಮುದ್ದೇಬಿಹಾಳ ತಾಲೂಕು ವಿಸ್ತೀರ್ಣಾಧಿಕಾರಿ ಲಿಂಗು ಜಾಧವ, ನಿವೃತ್ತಶಿಕ್ಷಕ ಎಸ್.ಸಿ. ಹುಲ್ಲೂರ, ಕಲಾವಿದ ವೀರಭದ್ರಪ್ಪ ದಳವಾಯಿ, ತುಮಕೂರಿನಕಲಾವಿದ ಲೋಕೇಶ, ಗ್ರಾಮದಹಿರಿಯರಾದ ಓಬಳೆಪ್ಪ ಪಟ್ಟಣದ, ಎಸ್.ಬಿ.ಕನ್ನೂರ, ಬಾಬು ದೇಶಮುಖ, ಎನ್.ಎಸ್.ಹುಲ್ಲೂರ, ಬಯಲಾಟ ಅಕಾಡೆಮಿ ಸದಸ್ಯಸಿದ್ದು ಬಿರಾದಾರ, ನೀನಾಸಂ ಕಲಾವಿದಗಣೇಶ ಹೆಗ್ಗೊàಡು, ಶಿವಕುಮಾರ ಮತ್ತಿತರುವೇದಿಕೆಯಲ್ಲಿದ್ದರು.
ಕಲಾ ಪ್ರದರ್ಶನ: ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾ ತಂಡಗಳಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡವು.ದಕ್ಷಿಣ ಕನ್ನಡ ಜಿಲ್ಲೆ ಶಿರಸಿಯ ರಾಷ್ಟ್ರೀಯಭಾವೈಕ್ಯತಾ ಕಲಾ ಬಳಗದ ಶಿವಲೀಲಾಮೃತಪೌರಾಣಿಕ ನೃತ್ಯ ರೂಪಕ, ಅದರಲ್ಲಿನ ಶಿವ,ಪಾರ್ವತಿ, ಗಣೇಶ ವೇಷಧಾರಿಗಳ ನೃತ್ಯ,ಉತ್ತರಕನ್ನಡದ ಹೊಂಗಿರಣ ಕಲಾ ತಂಡದಸೂತ್ರದ ಗೊಂಬೆಗಳ ಏಕಲವ್ಯ ಪ್ರಹಸನ ಪ್ರದರ್ಶನ, ಹೆಜ್ಜೆ ಕುಣಿತ, ಹೆಣ್ಣು ಮಕ್ಕಳ ಡೊಳ್ಳಿನ ನೃತ್ಯ ಪ್ರದರ್ಶನ, ವೀರಗಾಸೆ, ಏಕ್ತಾರಿ ಪದಗಳು, ಸಂಪ್ರದಾಯ ಪದಗಳು, ಜಾನಪದ ಗೀತ ಗಾಯನ, ಡೊಳ್ಳಿನಪದಗಳು, ಯಕ್ಷಗಾನ ಮುಂತಾದವುಗಳು ಹೆಚ್ಚು ಗಮನ ಸೆಳೆದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.