ಕೋವಿಡ್ ಲಸಿಕೆ ಪಡೆದು ಮುಂಜಾಗ್ರತೆ ವಹಿಸಲು ಸಲಹೆ
Team Udayavani, Jun 30, 2021, 7:36 PM IST
ತಾಳಿಕೋಟೆ: ಕೋವಿಡ್ ರೋಗದ ಭೀಕರತೆ ಈಗಾಗಲೇ ಎದುರಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಲಸಿಕೆ ಪಡೆಯು ವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ತಹಶೀಲ್ದಾರ್ ಅನಿಲಕುಮಾರ ಢವಳಗಿ ಹೇಳಿದರು. ಜಿಲ್ಲಾ ಧಿಕಾರಿಗಳ ಕಾರ್ಯಾಲಯ ನಿರ್ದೇಶನ ಮೇರೆಗೆ ತಹಶೀಲ್ದಾರ್ ಕಾರ್ಯಾಲಯ, ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಎರಡನೇ ಅಲೆ ಕಡಿಮೆಯಾಗಿದ್ದರೂ ನಾವು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಹೊರಗಡೆ ಬರಬೇಕು. ಲಸಿಕೆ ಬಗ್ಗೆ ಅನುಮಾನ ಬೇಡ, ಯಾವುದೇ ರೀತಿಯ ತೊಂದರೆಗಳಿಲ್ಲ. ಲಸಿಕೆ ಪಡೆದುಕೊಂಡವರಿಗೆ ಕೊರೊನಾ ತಗುಲಿದರೂ ಯಾವುದೇ ತೊಂದರೆಗಳಾಗಿಲ್ಲ. ಕಾಲೇಜುಗಳು ಆರಂಭ ಹಂತದಲ್ಲಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕೆಂದು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾ ಧಿಕಾರಿ ಡಾ| ಎಸ್.ಬಿ. ಪಾಟೀಲ ಮಾತನಾಡಿ, ಕೋವಿಡ್ ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಮತ್ತೂಬ್ಬರನ್ನು ಪ್ರೇರೇಪಿಸಿ ಲಸಿಕೆ ಪಡೆದುಕೊಳ್ಳಲು ತಿಳಿ ಹೇಳುವಂತಹ ಕಾರ್ಯವಾಗಲಿ ಎಂದರು.
ತಾಳಿಕೋಟೆ ತಾಲೂಕಿನ ಲಸಿಕಾ ಅಭಿಯಾನದ ನೋಡಲ್ ಅಧಿ ಕಾರಿ ಎಸ್.ಜಿ. ಕುಂಬಾರ ಮಾತನಾಡಿ, ಲಸಿಕೆ ಪಡೆಯುವುದರ ಮೂಲಕ ಕೊರೊನಾ ಹೊಡೆದೊಡಿಸೋಣ. ಲಸಿಕೆ ಪಡೆದ ಶೇ. 99 ಜನರಿಗೆ ತೊಂದರೆಗಳಾಗಿಲ್ಲ. ಲಸಿಕೆ ಪಡೆದ ವಿದ್ಯಾರ್ಥಿಗಳು ಮತ್ತೂಬ್ಬರನ್ನು ಪ್ರೇರೇಪಿಸಿ ಎಂದು ಹೇಳಿದರು. ಮಹಾ ವಿದ್ಯಾಲಯದ ಪ್ರಾಚಾರ್ಯ ಆರ್.ವಿ. ಜಾಲವಾದಿ ಅಧ್ಯಕ್ಷತೆ ವಹಿಸಿ ದ್ದರು. ಲಸಿಕಾ ಅಭಿಯಾನದಲ್ಲಿ ಸ್ಥಳೀಯ ಖಾಸYತೇಶ್ವರ ಶಿಕ್ಷಣ ಹಾಗೂ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಚ್.ಎಸ್. ಪಾಟೀಲ ಪದವಿ ಮಹಾವಿದ್ಯಾಲಯದ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ 200ಕ್ಕೂ ಅ ಧಿಕ ವಿದ್ಯಾರ್ಥಿಗಳು ಲಸಿಕೆ ಪಡೆದರು. ರಮೇಶ ಜಾಧವ ಸ್ವಾಗತಿಸಿದರು. ಡಾ| ದೀಪಾ ಮಾಳಗೆ ನಿರೂಪಿಸಿದರು. ಕೆ.ಬಿ. ದೇಸಾಯಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.