ವಿದೇಶಿ ವಸ್ತು ಧಿಕ್ಕರಿಸಲು ಸಲಹೆ
Team Udayavani, Aug 3, 2017, 10:02 AM IST
ತಾಳಿಕೋಟೆ: ಸ್ನೇಹತ್ವದ ಮೂಲಕ ವ್ಯಾಪಾರ ನಡೆಸಿ ಆರ್ಥಿಕವಾಗಿ ಬಲಗೊಂಡ ಮೇಲೆ ಸ್ನೇಹದ ಹಾಸಿಗೆ ಮೇಲೆ ಕೂಡಿಸಿದ ಭಾರತದೊಂದಿಗೆ ಚೀನಾ ಯುದ್ದಕ್ಕೆ ತಯಾರಿ ನಡೆಸಿದೆ. ಚೀನಾ ವಸ್ತುಗಳನ್ನು ತಿರಸ್ಕರಿಸಿ ಚೀನಾದ ಆರ್ಥಿಕತೆಯನ್ನು ಧೂಳಿಪಟ ಮಾಡಬೇಕೆಂದು ರಾಷ್ಟ್ರೀಯ ಸ್ವದೇಶಿ ಜಾಗರಣಾ ಮಂಚ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ ಹೇಳಿದರು.
ರಾಷ್ಟ್ರೀಯ ಸ್ವದೇಶಿ ಜಾಗರಣಾ ಮಂಚ್ ಜಿಲ್ಲಾ ಘಟಕ ಪಟ್ಟಣದ ವಿಠಲ ಮಂದಿರದಲ್ಲಿ ಆಯೋಜಿಸಿದ್ದ ಸ್ವದೇಶಿ ಬಳಸಿ-ವಿದೇಶಿ ಅಳಿಸಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದೇಶ ವಸ್ತುಗಳ ತಾತ್ಕಾಲಿಕ ವ್ಯಾಮೋಹದಿಂದ ದೇಶದ ಮೇಲಾಗುತ್ತಿರುವ ಆರ್ಥಿಕ ದಾಳಿ ತಗ್ಗಿಸಲು ನಾವು ಒಂದಾಗಬೇಕು. ನಮ್ಮ ದೇಶದ ಗಡಿಯನ್ನು ಅಕ್ರಮಿಸಿಕೊಂಡು ನಮ್ಮ ದೇಶಕ್ಕೆ ಚೀನಾ ರಾಷ್ಟ್ರ ಸವಾಲೆಸೆಯುತ್ತಿದೆ. ಭಯೋತ್ಪಾದನೆಗೆ ಹೆಸರಾದಂತಹ ರಾಷ್ಟ್ರಗಳಿಗೆ ಭಾರತದೊಳಗೆ ನುಗ್ಗಲು ಸೇತುವೆಯಂತೆ ಆರ್ಥಿಕ ಸಹಾಯ ಮಾಡುತ್ತಿದೆ. ರಾಷ್ಟ್ರೀಯ ಜಾಗರಣ ಮಂಚ್ ಹಮ್ಮಿಕೊಂಡ ಜಾಗೃತಿ ಅಭಿಯಾನದಿಂದ ಶೇ. 20ರಷ್ಟು ಚೀನಾ ವಸ್ತುಗಳ ಮಾರಾಟ ಸ್ಥಗಿತಗೊಂಡಿದೆ. ನಾವೇಲ್ಲ ನಿಜವಾದ ಭಾರತೀಯರು ಎಂಬ ಸಂಕಲ್ಪ ಮಾಡಿ ತಾತ್ಕಾಲಿಕ ಸುಖ ನೀಡುವ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳ ಬಳಕೆಗೆ ಮುಂದಾಗಿ ದೇಶ ರಕ್ಷಣೆ ಮಾಡಬೇಕು ಎಂದರು.
ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಹಾವರಗಿ ಮಾತನಾಡಿ, ವಿದೇಶಿ ವಸ್ತುಗಳ ಬಳಕೆಯಿಂದ ಭಾರತ ದೇಶಕ್ಕೆ ಆರ್ಥಿಕವಾಗಿ ಆಗುತ್ತಿರುವ ನಷ್ಟ ತಪ್ಪಿಸಲು ಎಲ್ಲರೂ ಒಂದಾಗಬೇಕಾಗಿದೆ. ಉಗ್ರಗಾಮಿಗಳಿಗೆ ಸಹಾಯ ಮಾಡುತ್ತ ದೇಶಕ್ಕೆ ಗಂಡಾಂತರ
ಒಡ್ಡಿರುವ ಚೀನಾ ದೇಶವನ್ನು ಬಗ್ಗು ಬಡಿಯಲು ಚೀನಾ ವಸ್ತುಗಳ ಖರೀದಿ ನಿಲ್ಲಿಸಬೇಕಾಗಿದೆ ಎಂದರು. ವಿಠಲಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನದ ಜಿಲ್ಲಾಧ್ಯಕ್ಷ ಎಸ್.ಎಚ್. ನಾಡಗೌಡ, ಗಿರೀಶ ನೀಲಗುಂದ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಹಿಪ್ಪರಗಿ, ಶ್ರೀಕಾಂತ ಪತ್ತಾರ, ರಾಘವೇಂದ್ರ ವಿಜಾಪುರ, ಮುನ್ನಾ ಠಾಕೂರ, ಬಸನಗೌಡ ಮಾಲಿಪಾಟೀಲ, ಅಶೋಕ ಹಂಚಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.