ಪ್ರತಿಫಲವಿಲ್ಲದೆ ಸಮಾಜ ಸೇವೆ ಮಾಡಲು ಸಲಹೆ
Team Udayavani, Jan 3, 2022, 2:35 PM IST
ಮುದ್ದೇಬಿಹಾಳ: ಸಮಾಜದಲ್ಲಿ ಸಮಸ್ಥಿತಿ ನಿರ್ಮಿಸಲು ತೋರುವ ಬದ್ಧತೆ ಹಾಗೂ ಕಾಳಜಿಗಳೇ ನಿಜವಾದ ಸಾಮಾಜಿಕ ಮೌಲ್ಯಗಳು. ಇದನ್ನರಿತು ಕೈಗೊಳ್ಳುವ ಕಾರ್ಯಗಳು ಪರಮ ಶ್ರೇಷ್ಠ ಎನಿಸುತ್ತವೆ. ಪರರಿಗೆ ಉಪಕಾರ ಬಯಸುವ ಗುಣಗಳು ನಮ್ಮೆಲ್ಲರಲ್ಲಿ ಮೈದಳಿಯುವುದು ಇಂದಿನ ಅವಶ್ಯಕತೆಯಾಗಿದೆ. ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲ ಬಯಸದೇ ಮಾಡುವ ಕಾರ್ಯಗಳೇ ನಿಜವಾದ ಸಮಾಜ ಸೇವೆ ಎನಿಸಿಕೊಳ್ಳುತ್ತವೆ ಎಂದು ಬಸರಕೋಡ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಸಂಗಮೇಶ ಕಮತರ ಹೇಳಿದರು.
ಬಸರಕೋಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ ಹಾಗೂ ದಾಸೋಹಿ ಸಮಗ್ರ ಕೃಷಿಕರ ಆತ್ಮ ಗುಂಪು ಬಸರಕೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಚಿಂತಕ ಅರವಿಂದ ಕೊಪ್ಪರವರ 45ನೇ ಜನ್ಮ ದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಾಲಾ ಮಕ್ಕಳಿಗೆ ಅನ್ನ ಸಂತರ್ಪಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ ಶುದ್ಧ ಕಾಯಕ ಮತ್ತು ದಾಸೋಹಗಳನ್ನು ಸಾಮಾಜಿಕ ಮೌಲ್ಯಗಳೆಂದು ಪ್ರತಿಪಾದಿಸಿದ ಬಸವಾದಿ ಶರಣರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಕಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅರವಿಂದ ಕೊಪ್ಪರವರ ಸೇವಾ ಕಾರ್ಯಗಳು ಮುಂದಿನ ಜನಾಂಗಕ್ಕೆ ದಾರಿ ದೀಪವಾಗಿವೆ ಎಂದರು.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ಶಿವುಕುಮಾರ ಜಂಗಮಶೆಟ್ಟಿ ಮಾತನಾಡಿ, ರಕ್ತದಾನದ ಬಗ್ಗೆ ಅನೇಕರಲ್ಲಿರುವ ತಪ್ಪು ಕಲ್ಪನೆಯಿಂದ ರಕ್ತದಾನದ ಮಹತ್ವ ಅರಿಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ರಕ್ತದಾನದಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಮಾಣ ವೃದ್ಧಿಯಾಗುವುದಲ್ಲದೇ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಶರೀರದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡಲೂ ಸಹ ಇದು ಸಹಕರಿಸುವುದರ ಜೊತೆಗೆ ನಾಲ್ಕು ಜೀವಗಳನ್ನು ಉಳಿಸಿದ ಧನ್ಯತಾಭಾವ ಒದಗಿಸಿ ಕೊಡುವ ಶ್ರೇಷ್ಠ ಕಾರ್ಯವಾಗಿರುವುದರಿಂದ ಅರ್ಹತೆ ಇರುವ ಪ್ರತಿಯೊಬ್ಬರು ಸಮಯ ಮತ್ತು ಅಗತ್ಯಕ್ಕೆ ತಕ್ಕಂತೆ ರಕ್ತದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಸರಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಡಿ.ಎಸ್. ಚಳಗೇರಿ, ಸಮೂಹ ಸಂಪನ್ಮೂಲ ವ್ಯಕ್ತಿ ಈರಬಸಪ್ಪ ಕಾರಕೂನ, ಕಾರ್ಯಕ್ರಮ ಕೇಂದ್ರ ಬಿಂದು ಅರವಿಂದ ಕೊಪ್ಪ ಮಾತನಾಡಿದರು.
ಮಡಿವಾಳಪ್ಪ (ಮುತ್ತು) ತೋಟದ, ಸೋಮಲಿಂಗಪ್ಪ ಗಸ್ತಿಗಾರ, ಚಾಂದಬಾಷಾ ಮಾಳನೂರ, ಪ್ರಕಾಶ ಸೂಳಿಭಾವಿ, ಶಿಕ್ಷಕಿಯರಾದ ರೇಣುಕಾ ಚಿತ್ತವಾಡಗಿ, ಎಸ್.ಎಸ್. ಹೊಳಿ ವೇದಿಕೆಯಲ್ಲಿದ್ದರು. ಸೋಮಶೇಖರ ಹೊಸಮನಿ ಸ್ವಾಗತಿಸಿದರು. ರಶ್ಮಿ ಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಕುಮಾರಸ್ವಾಮಿ ನಿರೂಪಿಸಿದರು. ಶಶಿಕಮಾರ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.