ಸಮಾಜದ ಏಳ್ಗೆ-ಬಡವರ ಕಲ್ಯಾಣದಲ್ಲಿ ನೆಮ್ಮದಿ ಕಾಣಲು ಸಲಹೆ
Team Udayavani, Sep 11, 2017, 2:54 PM IST
ಹೂವಿನಹಿಪ್ಪರಗಿ: ಸಮಾಜದ ಏಳ್ಗೆಗಾಗಿ ಹಾಗೂ ಬಡವರ ಕಲ್ಯಾಣವೇ ನಿಜವಾದ ಸಂಪತ್ತು. ತ್ಯಾಗದಲ್ಲಿ ನಿಜವಾದ ಸುಖವಿದೆ ಎಂದು ಕುದರಿಸಾಲವಾಡಗಿ ಮಲೈಮಹದೇಶ್ವರ ಮಠದ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ರವಿವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾಜ ಸೇವಕ ಆನಂದ ದೊಡ್ಡಮನಿ ಫೌಂಡೇಶನ್ ವತಿಯಿಂದ ಸ್ಥಾಪಿಸಲಾದ ಉಚಿತ ಇ-ಸೇವಾ ಕೇಂದ್ರದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜಸೇವೆಯಿಂದ ಮಾತ್ರವೇ ಉಳ್ಳವರ ನಿಜವಾದ ಸಂಪತ್ತು ಸದುಪಯೋಗವಾಗುತ್ತದೆ. ಇಂದಿನ ರಾಜಕಾರಣಿಗಳು ಒಮ್ಮೆ ಮತ ಕೇಳಿ ನಂತರ ಮುಂದಿನ ಚುನಾವಣೆ ಸಂದರ್ಭದಲ್ಲಿಯೇ ಭೇಟಿಯಾಗುವ ಪರರಪಾಟ ಹೊಂದಿದ್ದಾರೆ. ಈ ದಿನಗಳಲ್ಲಿ ಜಾತ್ಯತೀತವಾಗಿ, ಪರಾತೀತವಾಗಿ ಸರ್ಕಾರದ ಯೋಜನೆಗಳನ್ನು ಬಡವರ ಮನೆ
ಬಾಗಿಲಿಗೆ ತಲುಪಿಸುತ್ತಿರುವ ಫೌಂಡೇಶನ್ ಮೊದಲು ಕೆಲಸ ಮಾಡಿ ನಂತರ ಜನರ ಹತ್ತಿರ ತೆರಳುವ ಇದರ
ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಿರಿ ಎಂದರು.
ಫೌಂಡೇಶನ್ ರೂವಾರಿ ಆನಂದಗೌಡ ದೊಡ್ಡಮನಿ ಮಾತನಾಡಿ, ಭಾರತ ದೇಶ ಹಳ್ಳಿಗಳಿಂದ ಕೂಡಿದ ದೇಶದಲ್ಲಿ ಗ್ರಾಮೀಣ ಭಾಗದ ಜನರಿಗೆ ಗಣಕೀಕೃತ ವ್ಯವಸ್ಥೆಯನ್ನು ನಿಜವಾದ ಬಡವರಿಗೆ ತಲುಪಿಸುವುದೇ ನಮ್ಮ ಫೌಂಡೇಶನ್
ಉದ್ದೇಶವಾಗಿದೆ. ಭಗವಂತ ನೀಡಿದ ಅಪಾರ ಸಂಪತ್ತನ್ನು ಜನಸೇವೆ ಮೂಲಕ ಕೆಲಸ ಮಾಡಲು ನನಗೊಂದು ಅವಕಾಶ ಕೊಡಿರಿ.
ಮುಂದಿನ ದಿನಗಳಲ್ಲಿ ಸರ್ಕಾರಿ ಸೇವೆಗಳಾದ ವಿಧವಾ ವೇತನ, ಸ್ಕಾಲರಶಿಫ್ ಸೇರಿದಂತೆ ಅನೇಕ ಯೋಜನೆಗಳ ಕುರಿತಾಗಿ ನಮ್ಮ ಸಿಬ್ಬಂದಿಯವರು ನಿಮ್ಮ ಮನೆಗಳಿಗೆ ಬಂದು ಸಹಾಯ ನೀಡುತ್ತಾರೆ.
ಈ ಭಾಗದ ಪ್ರತಿ ಗ್ರಾಮದಲ್ಲೂ ಘಟಕಗಳನ್ನು ತೆರೆದು ಸದಸ್ಯತ್ವ ಪಡೆದುಕೊಳ್ಳಲಾಗುವುದು. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ನಮ್ಮ ಹಳ್ಳಿಗರದ್ದಾಗಬೇಕು ಎನ್ನುವ ಉದ್ದೇಶದಿಂದ ಸಮಾಜ ಸೇವೆಗೆ ಇಳಿದಿರುವೆ ಎಂದರು.
ಶ್ರೀಶೈಲ ಸಜ್ಜನ ಮಾತನಾಡಿ, ಮುಂದಿನ ತಿಂಗಳಿನಿಂದ ಇ-ಸೇವೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕ್ಷೇತ್ರದ
32 ಗ್ರಾಪಂಗಳಲ್ಲಿ ಸ್ಥಾಪಿಸಿ, ಪ್ರತಿ ಕುಟುಂಬಕ್ಕೆ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಲು ಫೈಲ್
ನೀಡಲಾಗುವುದು ಎಂದರು. ಸಾಹೇಬಗೌಡ ಬಿರಾದಾರ ಫೌಂಡೇಶನ್ ಕಾರ್ಯಗಳ ಕುರಿತಾಗಿ ತಿಳಿಸಿದರು.
ಸಂಗನಗೌಡ ಬಿರಾದಾರ, ತಾಪಂ ಮಾಜಿ ಸದಸ್ಯ ರಂಜಾನ್ ಮುಜಾವರ, ಗ್ರಾಪಂ ಸದಸ್ಯರಾದ ಹನುಮಂತ್ರಾಯ ಗುಣಕಿ, ಮಲ್ಲಣ್ಣ ಲಚ್ಯಾಣ, ರಾಮಣ್ಣ ಹೊರಗಿನಮನಿ, ಮಲ್ಲನಗೌಡ ಪಾಟೀಲ, ಮಂಜುನಾಥ ಶಿವಾನಂದ ಗೊಳಸಂಗಿ, ರಾಮನಗೌಡ ಬಾಗೇವಾಡಿ, ಸಂಗಮೇಶ ಕೋಲಕಾರ, ಮಂಜು ತುಂಬಗಿ, ಶಂಕ್ರು ಶಂಕ್ರಪ್ಪಗೋಳ ಸೇರಿದಂತೆ
ಅನೇಕರಿದ್ದರು. ಮಹಾಂತೇಶ ನಾಡಗೌಡ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಪಾದಯಾತ್ರೆ: ತಾಳೀಕೋಟೆ ಕ್ರಾಸ್‌ನಿಂದ ಆನಂದ ಫೌಂಡೇಶನ್‌ನ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಪರಮಾನಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸಿಂಡಿಕೇಟ್ ಬ್ಯಾಂಕ್ ಹತ್ತಿರ ತೆರೆದ ಇ-ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೆ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.