ದುಶ್ಚಟಗಳಿಂದ ದೂರವಿರಲು ಯುವಕರಿಗೆ ಸಲಹೆ
Team Udayavani, Mar 2, 2021, 8:00 PM IST
ಹೂವಿನಹಿಪ್ಪರಗಿ: ಇಂದಿನ ಯುವ ಪೀಳಿಗೆ ಹಿರಿಯರ ಮಾತಿಗೆ ಮನ್ನಣೆ ನೀಡುವ ಜೊತೆಗೆ ದುಶ್ಚಟಗಳಿಂದ ದೂರವಿಬೇಕು ಎಂದು ರಾಷ್ಟ್ರೀಯ ಕಿಶೋರ ಸಂಸ್ಥೆಯ ತಾಲೂಕಿನ ಆಪ್ತ ಸಮಾಲೋಚಕ ಪರಶುರಾಮ ಸೌದಿ ಸಲಹೆ ನೀಡಿದರು.
ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ಸೋಮವಾರ ರಾಷ್ಟ್ರೀಯ ಕಿಶೋರ ಸಂಸ್ಥೆ ಹಮ್ಮಿಕೊಂಡಿದ್ದ ಹದಿಹರೆಯದ ಯುವಕರ ಸಮಸ್ಯೆಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಮನೆಯಲ್ಲಿ ತಂದೆ ತಾಯಿಯ ಮಾತಿಗೆ ಬೆಲೆ ನೀಡಬೇಕು. ಸಂಸ್ಕಾರಯುತ ಜೀವನ ಸಾಗಿಸುವ ಮಾರ್ಗದಲ್ಲಿ ನಡೆದರೆ ಭವಿಷ್ಯದಲ್ಲಿ ಜಾವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ಲೈಂಗಿಕ ಶಿಕ್ಷಣದ ಆಪ್ತ ಸಮಾಲೋಚಕ ಆರ್.ಎಸ್. ಲಿಂಗದಳ್ಳಿ ಮಾತನಾಡಿ, ಇಂದಿನ ಹದಿ ಹರಿಯದವರು ತಮ್ಮ ಮನಸ್ಸಿಗೆ ಬಂದಂತೆ ವಿಚಾರಿಸದೆ ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕ್ಕೊಳ್ಳಬೇಕು. ಶಿಕ್ಷಣ ಜೊತೆಗೆ ಉತ್ತಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಸಮುದಾಯ ಆರೋಗ್ಯ ಅ ಧಿಕಾರಿ ಡಾ| ಶರಣಬಸು ಗುದ್ದಿ ಮಾತನಾಡಿ, ಹದಿ ಹರಿಯದವರಲ್ಲಿ ದೈಹಿಕ, ಮಾನಸಿಕ, ಬದಲಾವಣೆಗಳು ಮತ್ತು ಲೈಂಗಿಕ ಗುಪ್ತ ಕಾಯಿಲೆ ಮತ್ತು ಸಾಂಕ್ರಾಮಿಕ ರೋಗಗಳು ಪೌಷ್ಟಿಕ ಆಹಾರ ಮತ್ತು ಚರ್ಮ ತೊಂದರೆಗಳ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಲಿಂಗ ನೆಗಿನಾಳ, ಶಿಕ್ಷಕರಾದ ಎಂ.ಬಿ. ಜೋಗಿ, ಎಂ.ಎಂ. ಪಠಾಣ, ಎಸ್.ಎಸ್. ತೋಟದ, ಆಂಗನವಾಡಿ ಕಾರ್ಯಕರ್ತೆ ಎಸ್.ಪಿ. ಕೋಲಕಾರ, ಆಶಾ ಕಾರ್ಯಾಕರ್ತೆ ಎಸ್.ಎಸ್.ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.