ಆಲಮಟ್ಟಿ ಉದ್ಯಾನಗಳಿಗೆ ತಟ್ಟದ ಕೊರೊನಾ ವೈರಸ್ ಭೀತಿ
ಇಳಿಮುಖವಾಗಿಲ್ಲ ಪ್ರವಾಸಿಗರ ಸಂಖ್ಯೆ
Team Udayavani, Mar 14, 2020, 12:02 PM IST
ಆಲಮಟ್ಟಿ: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿದ್ದರೂ ಕೂಡ ಪ್ರವಾಸಿತಾಣ ಆಲಮಟ್ಟಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.
ಆಲಮಟ್ಟಿಯು ಬೃಹತ್ ಜಲಾಶಯ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನ, ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋ ಸೇರಿದಂತೆ ವಿವಿಧ ತಾಣಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ರೈಲ್ವೆ ನಿಲ್ದಾಣವನ್ನು ಹೊಂದಿ ಪ್ರವಾಸಿಗರ ಆಗಮನಕ್ಕೆ ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಹೊಂದಿರುವದರಿಂದ ಕಳೆದ ಕೆಲ ವರ್ಷಗಳಿಂದ ಪ್ರವಾಸಿಗರು ಏರುಗತಿಯಲ್ಲಿ ಆಗಮಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯಿಂದ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ವ್ಯಾಪಕ ಇಳಿಮುಖವಾಗಿದ್ದರೂ ಕೂಡ ಆಲಮಟ್ಟಿಯ ರಾಕ್ ಉದ್ಯಾನ ಸೇರಿದಂತೆ ಎಲ್ಲ ಉದ್ಯಾನಗಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಜನರು ಆಗಮಿಸುತ್ತಿರುವುದು ವಿಶೇಷ.
ಡೈನಿಂಗ್ ಸ್ಪಾಟ್: ವಿಜಯಪುರ ಜಿಲ್ಲೆಯೆಂದರೆ ಬಿರು ಬಿಸಿಲನಾಡು ಎನ್ನುವ ಖ್ಯಾತಿ ಹೊಂದಿದ್ದರೂ ಜಿಲ್ಲೆಯ ಗಡಿಭಾಗದಲ್ಲಿರುವ ಆಲಮಟ್ಟಿ ಮಾತ್ರ ನಿತ್ಯ ಹಸಿರುಡುಗೆ ತೊಟ್ಟಂತೆ ಕಾಣುತ್ತದೆ. ಎಲ್ಲಿ ನೋಡಿದರೂ ಹಸಿರೇ ಹಸಿರು, ಇದು ಇಲ್ಲಿಯ ಅರಣ್ಯ ಇಲಾಖೆಯ ಪ್ರಯತ್ನದ ಫಲವಾಗಿ ಬಿಸಿಲಿನಿಂದ ಕಂಗೆಟ್ಟವರಿಗೆ ಹಾಗೂ ದೂರದ ಊರುಗಳಿಂದ ಆಗಮಿಸಿದ ಪ್ರವಾಸಿಗರಿಗೆ ನಿತ್ಯದ ಉಸಿರಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದೆಡೆಗೆ ಹೊರಟರೆ ಸಾಕು ಎಷ್ಟೊಂದು ತಂಪು-ತಂಪು. ಇನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪ್ರತಿಮೆ ಬಳಿಯಿರುವ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಲು ಸಾಕಷ್ಟು ಜಾಗೆಯಿರುವುದರಿಂದ ಹಾಗೂ ಸುತ್ತಲೂ ದೊಡ್ಡ ಮರಗಳಿರುವುದರಿಂದ ಅವುಗಳ ನೆರಳಿನಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ.
ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯಿದ್ದರೆ ಪ್ರವಾಸಿಗರು ಕುಳಿತುಕೊಳ್ಳಲು ಗಿಡ ಮರಗಳ ಮಧ್ಯದಲ್ಲಿ ವಿವಿಧ ಮಾದರಿಯ ತೆರೆದ ಕಟ್ಟಡಗಳಿವೆ. ಇವುಗಳಲ್ಲಿ ಹಾಗೂ ಗಿಡಗಳ ಕೆಳಗೆ ಕುಳಿತು ಪ್ರವಾಸಿಗರು ಭೋಜನ ಸವಿಯುತ್ತಾರೆ.
ಶುಚಿತ್ವಕ್ಕೆ ಆದ್ಯತೆ: ಆಲಮಟ್ಟಿ ಪಟ್ಟಣವು ನಿತ್ಯ ಹಸಿರುಡುಗೆಯನ್ನು ತೊಟ್ಟು ಪರಿಸರ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗಿಡಮರ ಹಾಗೂ ಜನದಟ್ಟಣೆ ಪ್ರದೇಶವಾಗಿರುವದರಿಂದ ಸಹಜವಾಗಿ ಕಸಕಡ್ಡಿಗಳು, ತ್ಯಾಜ್ಯಗಳು ಬೀಳುವದು ಸಹಜ. ಆದರೆ ಕೃಷ್ಣಾಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ಕಾಳಜಿಯಿಂದ ಎಲ್ಲ ಉದ್ಯಾನಗಳು, ಕಚೇರಿಗಳು ಹಾಗೂ ಎಲ್ಲ ರಸ್ತೆಗಳು ಸ್ವಚ್ಛವಾಗಿರುವದರಿಂದ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ತಾಪಂ ಸದಸ್ಯ ಮಲ್ಲು ರಾಠೊಡ.
ಪ್ರತಿ ವರ್ಷವೂ ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದರಿಂದ ಸಹಜವಾಗಿ ಜನ ಬರುವದು ಕಡಿಮೆಯಿರುತ್ತದೆ. ಇನ್ನು ಕೊರೊನಾ ವೈರಸ್ ಪರಿಣಾಮ ಪ್ರವಾಸಿಗರ ಸಂಖ್ಯೆ ಮೇಲೆ ಪರಿಣಾಮ ಬೀರಿಲ್ಲ.
ಮಹೇಶ ಪಾಟೀಲ
ವಲಯ ಅರಣ್ಯಾಧಿಕಾರಿ,
ಆಲಮಟ್ಟಿ
ಪರೀಕ್ಷಾ ಸಮಯವಾದ್ದರಿಂದ ಪ್ರವಾಸಕ್ಕೆ ಬರುವವರ ಸಂಖ್ಯೆ ಇಳಿಕೆಯಾಗಿದೆ. ಆದರೆ ಯಾವುದೇ ವೈರಸ್ ನಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ.
ಚಂದ್ರಶೇಖರ ಬಳ್ಳಾರಿ ಹಾಗೂ
ದೇವೇಂದ್ರ ಹಿರೇಮನಿ, ಸಣ್ಣ ವ್ಯಾಪಾರಸ್ಥರು
ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.