ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಪರಿಹಾರ ನೀಡಿ
Team Udayavani, Mar 20, 2020, 6:06 PM IST
ಆಲಮಟ್ಟಿ: ಮುಳವಾಡ ಏತನೀರಾವರಿ ಯೋಜನೆ ವ್ಯಾಪ್ತಿಯ ಬಿಜಾಪುರ ಮುಖ್ಯ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮುಳವಾಡ ಏತನೀರಾವರಿ ಯೋಜನೆ ಕಾಲುವೆಯು ನೂರಾರು ಎಕರೆ ಜಮೀನಿನಲ್ಲಿ ಹಾದುಹೋಗಿ ಮೂರು ವರ್ಷಗಳಾದರೂ ಇನ್ನೂವರೆಗೆ ನಮ್ಮ ಜಮೀನಿಗೆ ಪರಿಹಾರವೂ ಇಲ್ಲ ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ನೋಟಿಸನ್ನೂ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸಮಾಧಾನವಾಗಿ ಉತ್ತರಿಸಿದ ವಿಶೇಷ ಭೂಸ್ವಾಧೀನಾಧಿಕಾರಿ ರಘು ಎ.ಈ. ಅವರು, ಆಲಮಟ್ಟಿಯಲ್ಲಿ ವಿಶೇಷ ಭೂಸ್ವಾಧೀನಾ ಕಾರಿಯಾಗಿದ್ದರೂ ಕೂಡ ಇಲ್ಲಿನ ಪುನರ್ವಸತಿ ಅಧಿಕಾರಿ ಹಾಗೂ ಬಾಗಲಕೋಟೆಯಲ್ಲಿ ಎರಡು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಜನರಿಗೆ ಸರಿಯಾದ ವೇಳೆಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಕಾಲುವೆ ನಿರ್ಮಾಣವಾಗಿರುವ ಜಮೀನುಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಚ್.ಎಸ್. ಅಡಗಿಮನಿ, ಬಸವರಾಜ ಸಿಂಗನಳ್ಳಿ, ಜಟ್ಟೆಪ್ಪ ಹರಿಜನ, ಸೋಮಪ್ಪ ಹೊಲೇರ, ಬೌರಮ್ಮ ಗುಡಗುಂಟಿ, ಮಹಾದೇವಿ ಗುಡಗುಂಟಿ, ಸಂಗಮ್ಮ ಸಾಸನೂರ, ಶಾಂತಮ್ಮ ಸೂಡಗಿ, ಶಾಮಾಬಾಗಿ ಗುಡಗುಂಟಿ, ಶ್ರೀಶೈಲ, ಸಂಗಯ್ಯ ಮಠ, ಶವರಡ್ಡಿ ಭಂಟನೂರ, ಪರಮಾನಂದ ಬನ್ನಿಗಿಡದ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.