ಕೆರೆ ತುಂಬಿಸಲು ಬೆಳ್ಳುಬ್ಬಿ ಮನವಿ
Team Udayavani, Apr 25, 2020, 4:35 PM IST
ಆಲಮಟ್ಟಿ: ಮು.ಏ. ನೀರಾವರಿ ಯೋಜನೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಮುಖ್ಯ ಅಭಿಯಂತರಗೆ ಮನವಿ ಸಲ್ಲಿಸಿದರು.
ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಯಿಂದ ಉಕುಮನಾಳ ಬಳಿ ಡೋಣಿ ನದಿಗೆ ನೀರು ಹರಿಸಬೇಕು ಹಾಗೂ ಮು.ಏ.ನೀ. ಯೋ.ಹಂತ-1 ಹಾಗೂ 2ರಲ್ಲಿ ಬರುವ ಕಾಲುವೆಗಳಿಂದ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮುಖ್ಯ ಅಭಿಯಂತರಗೆ ಎರಡು ಪ್ರತ್ಯೇಕ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಯುಕೆಪಿ ಅನುಷ್ಠಾನಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನರು ಅಪಾರ ತ್ಯಾಗ ಮಾಡಿದ್ದಾರೆ. ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ಏ. 27ರೊಳಗಾಗಿ ಮು.ಏ.ನೀ.ಯೋ. ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳದಿದ್ದರೆ ಕೃಭಾಜನಿನಿ ಮುಖ್ಯ ಅಭಿಯಂತರರ ಕಚೇರಿ ಎದುರಿನಲ್ಲಿ ಜಿಪಂ ಮತ್ತು ತಾಪಂ ಸದಸ್ಯರನ್ನೊಳಗೊಂಡಂತೆ ರೈತರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡೋಣಿ ನದಿಗೆ ನೀರು ಹರಿಸಿ:ಮುಳವಾಡ ಏತ ನೀರಾವರಿ ಯೋಜನೆಯ ವಿಜಯಪುರ ಮುಖ್ಯ ಕಾಲುವೆಯು ಉಕುಮನಾಳ ಗ್ರಾಮದ ಹತ್ತಿರ ಡೋಣ ನದಿಯನ್ನು ಸಂದಿಸುತ್ತದೆ. ಆ ಸ್ಥಳದಿಂದ ಡೋಣಿ ನದಿಗೆ ನೀರು ಹರಿಸುವುದರಿಂದ ಉಕುಮನಾಳ, ಯಂಭತ್ನಾಳ, ಡೋಣೂರ, ಉಕ್ಕಲಿ, ಉತ್ನಾಳ, ನಾಗರಾಳ, ಬೊಮ್ಮನಳ್ಳಿ, ನಂದ್ಯಾಳ, ಮುಳ್ಳಾಳ, ನೆಗಿನಾಳ,ಮಾರ್ಕಬ್ಬಿನಹಳ್ಳಿ, ಸಾತಿಹಾಳ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಬೆಳ್ಳುಬ್ಬಿ ಹೇಳಿದರು.
ಜಿಪಂ ಸದಸ್ಯ ಸಂತೋಷ ನಾಯಕ, ಪ್ರವೀಣ ಪವಾರ, ಗುರುಸಂಗಪ್ಪ ಯರಂತೇಲಿ, ಬಸು ಸಿದಗೊಂಡ, ಬಸವರಾಜ ಸಾತಿಹಾಳ, ಕರವೀರ ಮಡಿವಾಳರ, ಅಂದಾನಿ ತೋಳಮಟ್ಟಿ, ಅಮರ ಮಡಿವಾಳರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.