ಬಹುಹಳ್ಳಿ ಕುಡಿವ ನೀರು ಕಾಮಗಾರಿ

Team Udayavani, May 1, 2020, 4:13 PM IST

1-May–25

ಆಲಮಟ್ಟಿ: ಶಾಸಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ಸಭೆ ನಡೆಯಿತು.

ಆಲಮಟ್ಟಿ: ಶಾಸಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ಆಲಮಟ್ಟಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಸೂಚನೆ ಹಾಗೂ
ಪರಿಹಾರ ಕ್ರಮ ಪರಿಶೀಲನೆ ಸಭೆ ಮಂಜಪ್ಪ ಹರ್ಡೇಕರ್‌ ಸ್ಮಾರಕ ಭವನದಲ್ಲಿ ಗುರುವಾರ ನಡೆಯಿತು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಕೇಳಿದರು. ಮಾತೃಪೂರ್ಣ ಯೋಜನೆಯಡಿ ಫಲಾನುಭವಿಗಳಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯದಿರುವುದು ಬೆಳಕಿಗೆ ಬಂದಿತು. ಗ್ರಾಮಸ್ಥರಿಗೆ ಕುಡಿಯುವ ನೀರು ಹಾಗೂ ಶೌಚಾಲಯಗಳ ಬಗ್ಗೆ ಶಾಸಕರು ಪಿಡಿಒಗಳಿಂದ ಮತ್ತು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಯೋಜನೆಯಲ್ಲಾಗಿರುವ ಲೋಪಗಳ ಬಗ್ಗೆ ಕೆಲ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಆಲಮಟ್ಟಿ ಬಹುಹಳ್ಳಿ ಕುಡಿಯುವ ನೀರು ಯೋಜನೆ ವ್ಯಾಪ್ತಿಯ ಆಲಮಟ್ಟಿ, ಅರಳದಿನ್ನಿ, ಬೇನಾಳ, ಕಿರಿಶ್ಯಾಳ, ಅಬ್ಬಿಹಾಳ, ಹೆಬ್ಟಾಳ ಸೇರಿ ಏಳು ಗ್ರಾಮಗಳಿಗೆ ನೀರು ಪೂರೈಸಲು
ಎರಡು ವರ್ಷದ ಹಿಂದೆ ಕಾಮಗಾರಿ ಆರಂಭಿಸಿದರೂ ಈವರೆಗೆ ಪೂರ್ಣಗೊಳ್ಳದ್ದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಯುಕೆಪಿ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಅರಳದಿನ್ನಿಯಲ್ಲಿ ನಿರುಪಯುಕ್ತವಾದ ಶುದ್ದ ಕುಡಿವ ನೀರಿನ ಘಟಕವನ್ನು ಸ್ಥಳಾಂತರಿಸಬೇಕು. ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಆಲಮಟ್ಟಿಯಲ್ಲಿ ಕುಡಿವ ನೀರು ಸರಬರಾಜಿಗೆ ಆಂತರಿಕ ಪೈಪ್‌ಲೈನ್‌ಗೆ ಅಂದಾಜು ಪಟ್ಟಿ ತಯಾರಿಸಲು ಅಭಿಯಂತರರಿಗೆ ಸೂಚಿಸಿದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ, ಉಪಾಧ್ಯಕ್ಷ ಬಿ.ಜೆ.ನದಾಫ, ತಹಶೀಲ್ದಾರ್‌ ಶಿವಲಿಂಗ ಪ್ರಭು ವಾಲಿ, ಇಒಗಳಾದ ಭಾರತಿ ಚೆಲುವಯ್ಯ, ಬಿ.ಜೆ. ಇಂಡಿ, ತಾಲೂಕು ಆರೋಗ್ಯಾಧಿಕಾರಿ ಎಸ್‌.ಎಸ್‌.ಓತಗೇರಿ, ವೈದ್ಯಾಧಿಕಾರಿ ಪ್ರಕಾಶ ಗೋಟಖೀಂಡ್ಕಿ , ಕೃಷಿ ಅಧಿಕಾರಿ ಬಿ.ಎಸ್‌. ಕೋನರಡ್ಡಿ ಇತರರಿದ್ದರು.

ಟಾಪ್ ನ್ಯೂಸ್

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Kundapura: ಪಾದಚಾರಿ ಸಾವು ಹಿಟ್‌ ಆ್ಯಂಡ್‌ ರನ್‌

Kundapura: ಪಾದಚಾರಿ ಸಾವು ಹಿಟ್‌ ಆ್ಯಂಡ್‌ ರನ್‌

Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವ ಉದ್ಘಾಟನೆ

Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವದಲ್ಲಿ ಭಾಗಿ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijayapura

Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ

Vijayapura: Mother jumps into canal with four children; Woman saved, 2 children passed away

Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು

Yathanaa

Congress Government: ಡಿ.ಕೆ.ಶಿವಕುಮಾರ್‌ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್‌

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್‌ ಕದ್ದೊಯ್ದ ಮಾಲಕರು

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್‌ ತಿರಸ್ಕರಿಸಿದ ನ್ಯಾಯಾಲಯ

Kundapura: ಪಾದಚಾರಿ ಸಾವು ಹಿಟ್‌ ಆ್ಯಂಡ್‌ ರನ್‌

Kundapura: ಪಾದಚಾರಿ ಸಾವು ಹಿಟ್‌ ಆ್ಯಂಡ್‌ ರನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.