ಭಕ್ತರಿಗೆ ಸಂಗೀತ ರಸದೌತಣ
ಯಲಗೂರ ಕಾರ್ತಿಕೋತ್ಸವ ಸಂಭ್ರಮ ಅದ್ಧೂರಿಯಾಗಿ ಜರುಗಿದ ರಥೋತ್ಸವ
Team Udayavani, Feb 17, 2020, 12:20 PM IST
ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ ನಡೆದ ದಾಸವಾಣಿ ಹಾಗೂ ಗಾಯನ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ರವಿವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಕಾಕಡಾರತಿ, ಕಾರ್ತಿಕ ಇಳಿಸುವುದು ಸೇರಿದಂತೆ ವಿವಿಧ ರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಹರಶಾವಿಗೆ (ದಾಸೋಹ), ಅನ್ನದಾಸೋಹ ಜರುಗಿತು. ವಿಶ್ವೇಶತೀರ್ಥ ಶ್ರೀಪಾದಂಗಳವರ ಸಭಾಮಂಟಪದಲ್ಲಿ ಹರಿದಾಸ ಸಾಹಿತ್ಯಸಂಗೀತ ವೇದಿಕೆಯಲ್ಲಿ ತೆಂಗಿನ ತೋಟದ ಮೈದಾನದಲ್ಲಿ ನಿರಂತರ ದಾಸವಾಣಿ, ತಬಲಾ ಸೋಲೋ, ಜುಗಲಬಂಧಿ ಸೇರಿದಂತೆ ವಿವಿಧ ಸಂಗೀತ ರಸದೌತಣವನ್ನು ವೀಣಾ ಬಡಿಗೇರ ಮತ್ತು ವಾಣಿಶ್ರೀ ಧನ್ವಂತರಿಯವರ ಜುಗಲ್ ಬಂಧಿ, ವೀಣಾ ಥಿಟೆ, ಮೈಸೂರು ರಾಮಚಂದ್ರಾರಾವ್ ದಾಸವಾಣಿ, ಅರುಣಕುಮಾರ ಅವರ ತಾನಸೇನ್ ವಾದನ,
ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಹಾಡಿದ ಸೂಳ್ಳು ನಮ್ಮಲ್ಲಿ ಇಲ್ಲವಯ್ನಾ ಸುಳ್ಳೇ ನಮ್ಮನೆ ದೇವರು, ಬನ್ನಿಸಲವಳಲ್ಲ ನಿಮ್ಮ ಪ್ರಸನ್ನಮೂರ್ತಿ ಯಲಗೂರವಾಸ ಎನ್ನುವ ಗಾಯನಕ್ಕೆ ನೆರೆದಜನ ತಲೆದೂಗುವಂತಾಗಿತ್ತು. ನಾಡಿನ ಖ್ಯಾತ ಗಾಯಕರು ಹಾಡಿದ ಹಿಂದೂಸ್ಥಾನಿ ಸಂಗೀತ, ದಾಸ ವಾಣಿ, ಭಕ್ತಿ ಗೀತೆಗಳ ಮೂಲಕ ನೆರೆದ ಜನತೆಯ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಅನಂತ ಓಂಕಾರ, ನಾರಾಯಣ ಒಡೆಯರ, ಗೋಪಾಲ ಗದ್ದನಕೇರಿ, ಮುರಳಿ ಚಿಮ್ಮಲಗಿ, ಪ್ರಸನ್ನ ಕಟ್ಟಿ, ಸಂತೋಷ ಪೂಜಾರ, ಪ್ರಮೋದ ಕುಲಕರ್ಣಿ, ಆಲೂರ ಮೊದಲಾದವರಿದ್ದರು.
ಸ್ವಚ್ಛತೆಗೆ ಆದ್ಯತೆ: ಗ್ರಾಪಂ ಯಲಗೂರ, ದೇವಸ್ಥಾನ ಸಮಿತಿಯವರ ವಿಶೇಷ ಕಾಳಜಿಯಿಂದ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ದೂರದಿಂದ ಆಗಮಿಸಿರುವ ಭಕ್ತರು ತಾವು ಇಳಿದುಕೊಂಡಿರುವ ಸ್ಥಳದಲ್ಲಿ ನೈವೇದ್ಯ ತಯಾರಿಸಿಕೊಂಡು ಬಂದು ಗೋವಿಂದಾ. . . ಗೋವಿಂದಾ. . . ಎನ್ನುತ್ತ ದೇವಸ್ಥಾನಕ್ಕೆ ತೆರಳಿ ತಮ್ಮ ಭಕ್ತಿಯ ಸೇವೆಯನ್ನು ಸಮರ್ಪಿಸಿದರು.
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಭಕ್ತರಿಗೆ ತೊಂದರೆಯಾಗದಂತೆ ಗ್ರಾಪಂ, ದೇವಸ್ಥಾನ ಸಮಿತಿಯವರು ಕುಡಿಯುವ ನೀರು, ವಾಹನಗಳ ನಿಲುಗಡೆಗಾಗಿ ಎರಡು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರು ಜನದಟ್ಟಣೆ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು.
ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಹರಕೆಗಳು ಈಡೇರಿದ್ದರಿಂದ ಶನಿವಾರದಿಂದ ರವಿವಾರ ಸಂಜೆಯವರೆಗೂ ಕೃಷ್ಣಾನದಿಯಲ್ಲಿ ಮಿಂದು ದೇವಸ್ಥಾನದವರೆಗೂ ದೀಡ ನಮಸ್ಕಾರಗಳನ್ನು ಹಾಕುತ್ತಿರುವವರು ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗಿತ್ತು.
ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.