ಪುನರ್ವಸತಿಗೆ ಆಗ್ರಹಿಸಿ ಸಂತ್ರಸ್ತರ ಅನಿರ್ದಿಷ್ಟ ಧರಣಿ
Team Udayavani, Aug 31, 2018, 2:59 PM IST
ವಿಜಯಪುರ: ಸಿಂದಗಿ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ನೆರೆ ಸಂತ್ರಸ್ತರಾದ ಜನರು ಪುನರ್ವಸತಿ ಹಕ್ಕುಪತ್ರ ವಿತರಣೆಯಲ್ಲಿ ಅಕ್ರಮ ಸರಿಪಡಿಸಲು ಆಗ್ರಹಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
2009 ರಲ್ಲಿ ಅತಿವೃಷ್ಟಿಯಿಂದಾಗಿ ಸಿಂದಗಿ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಮುಳುಗಡೆ ಆಗಿತ್ತು. ಪರಿಣಾಮ ಇಡೀ
ಗ್ರಾಮವನ್ನೇ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಪುನರ್ವಸತಿ ಕೇಂದ್ರಲ್ಲಿ ನೈಜ ಅರ್ಹ ಸಂತ್ರಸ್ತ
ಫಲಾನುಭವಿಗಳಿಗೆ ನೀಡುವ ಹಕ್ಕುಪತ್ರಗಳನ್ನು ಅಕ್ರಮವಾಗಿ ಅನ್ಯರಿಗೆ ನೀಡಲಾಗಿದೆ. ಈ ಬಗ್ಗೆ ಹಲವು ಬಾರಿ ಅಗತ್ಯ
ದಾಖಲೆ ಸಮೇತ ದೂರು ನೀಡಿದರೂ ಆಡಳಿತಗಾರರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಳೆದೊಂದು ದಶಕದಿಂದ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿ ಎಲ್ಲರಿಗೂ ಮನವಿ ಮಾಡಿಕೊಂಡು ಬಂದು ತನಿಖೆ ನಡೆಸಿ, ಅಕ್ರಮ ಎಸಗಿದವ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಸಂತ್ರಸ್ತರಿಗೆ ಪರಿಹಾರ ಸೌಲಭ್ಯಗಳನ್ನೂ ನೀಡಿಲ್ಲ. ಕೂಡಲೇ ಇಡೀ ಅಕ್ರಮ ಪ್ರಕರಣದಲ್ಲಿ ಬಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ಹಂಚಿರುವ ಹಕ್ಕುಪತ್ರ ರದ್ದುಪಡಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು.
ಅಕ್ರಮವಾಗಿ ಪುನರ್ವಸತಿ ಕೇಂದ್ರದಲ್ಲಿ ವಾಸವಿರುವ ಜನರನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಪುನರ್ವಸತಿ ಕೇಂದ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಎಲ್ಲ ಅಕ್ರಮ ಕಟ್ಟಡಗಳನ್ನು
ತೆರವುಗೊಳಿಸಬೇಕು. ಸಂತ್ರಸ್ತರಿಗೆ ಹಕ್ಕುಪತ್ರ, ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಡಬೇಕು. ಅಂಗನವಾಡಿ, ಪ್ರಾಥಮಿಕ ಶಾಲೆ, ಗ್ರಂಥಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಸಲೀಂ ಅಲ್ದಿ, ರೋಹನ ಐನಾಪುರ, ಶಬ್ಬೀರ ಪಟೇಲ ಬಿರಾದಾರ, ನಜೀರಅಹ್ಮದ ಪಡೇಕನೂರ, ಅಲ್ತಾಫ್ ಮರ್ತೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.
ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಚನ್ನಮ್ಮ ಮಲ್ಲಪ್ಪ ನಾವಿ, ಕಮಾಲಮಾ ರಜಾಕಸಾಬ ಮುಲ್ಲಾ, ಕಬೀರ ಮುರ್ತುಜಸಾಬ ಮುಜಾವರ, ಚಾಂದಸಾಬ ಮದಾರಸಾಬ ಅಲ್ದಿ, ಅಶೋಕ ಮಹಾದೇವಪ್ಪ ವಾಲೀಕಾರ, ಮೌಲಾಸಾಹೇಬ ಸಾಹೇಬಲಾಲ ಆಗಲೂರ, ರಹಿಮಾನಸಾಬ ನಬಿಸಾಬ ಮುಲ್ಲಾ, ಜೈನಾಬಿ ಹುಸೇನಸಾಬ ಮುಲ್ಲಾ, ಹುಸೇನಬಿ ಲಾಲಸಾಬ ಅವಟಿ, ಜಮಾಲಮಾ ಸುಲ್ತಾನಮಾ ನದಾಫ್, ರಂಜಾನಬಿ ಸಾಹೇಬಲಾಲ ಆಲಗೂರ, ಜುಬೇದಾ ದಾವಲಸಾಬ ಅವಟಿ, ದವಲತಖಾನ ಗಿರಗಾಂವ, ಕುತುಬುದ್ದೀನ್ ಸೈಫನಸಾಬ ಮುಲ್ಲಾ, ದೌಲ ಸಾಬ ಜೈನಾಬಿ ಮುಲ್ಲಾ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.