ಕಪ್ಪುಚುಕ್ಕೆ ರಹಿತ ರಾಜಕೀಯ ನಾಯಕ ಅನಂತಕುಮಾರ
Team Udayavani, Nov 27, 2018, 12:49 PM IST
ವಿಜಯಪುರ: ದೇಶದ ರಾಜಕೀಯ ಇತಿಹಾಸದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ ವ್ಯಕ್ತಿಗಳಲ್ಲಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಕೂಡ ಒಬ್ಬರು ಎಂದು ಕೇಂದ್ರದ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ನಗರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ದಿ| ಅನಂತಕುಮಾರ ಅವರಿಗೆ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಪೂರ್ಣ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಸಂಸತ್‌ನಲ್ಲಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಕರ್ನಾಟಕ ರಾಜ್ಯದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವಲ್ಲಿ ಮುಂಚೂಣಿ ನಾಯಕರಾಗಿದ್ದರು. ಜನತಾದಳದಲ್ಲಿ ನನ್ನನ್ನು ರಮೇಶ ಅಣ್ಣಾ ನೀವು ರಾಜಕೀಯದ ಹಿರಿಯ ನಾಯಕರು ಕರ್ನಾಟಕ ರಾಜ್ಯದಲ್ಲಿ ದಲಿತ ನಾಯಕರಲ್ಲಿ ನೀವು ಹಿರಿಯರು, ನಿಮ್ಮಂತಹ ನಾಯಕರು ನಮ್ಮ ಬಿಜೆಪಿಯಲ್ಲಿದ್ದರೆ ಒಳಿತು. ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆ ತಂದವರೇ ಅಔರು ಎಂದು ಸ್ಮರಣೆ ಮಾಡಿಕೊಂಡರು.
ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಅವರು ಜೀವಂತ ಇರುವವರೆಗೆ ಬಿಟ್ಟು ನಾನು ಬರಲಾರೆ ಎಂದಿದ್ದೆ. ಆದರೆ ಒಂದು ವೇಳೆ ಯಾವುದೇ ಪಕ್ಷಕ್ಕೆ ಸೇರಿಕೊಳ್ಳುವ ಅನಿವಾರ್ಯತೆ ಬಂದರೆ ನಿಮ್ಮ ಪಕ್ಷಕ್ಕೆ ಸೇರುತ್ತೇನೆ ಎಂದು ಹೇಳಿದಂತೆ, ಬಿಜೆಪಿ ಸೇರಿದ್ದೆ ಎಂದು ತಮ್ಮ ಹಾಗೂ ಅನಂತಕುಮಾರ ಮಧ್ಯದ ಒಡನಾಟ ಬಿಚ್ಚಿಟ್ಟರು.
ನನ್ನ ರಾಜಕೀಯ ಇತಿಹಾಸದಲ್ಲಿ ಅನಂತಕುಮಾರ ಒಬ್ಬರು ಪ್ರಶ್ನಾತೀತ ನಾಯಕರಾಗಿದ್ದರು. ವಿಜಯಪುರ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲೂ ಅವರ ಕೊಡುಗೆ ಅನನ್ಯ ಹಾಗೂ ಅನುಪಮ. ರೈಲ್ವೆ ಡಬಲ್ ಟ್ರ್ಯಾಕ್, ಕೂಡಗಿ ಎನ್‌ಟಿಪಿಸಿ, ನೀರಿನ ಸಮಸ್ಯೆಗಳ ಕುರಿತಾದ ಯೋಜನೆ ಸೇರದಂತೆ ಅನೇಕ ಯೋಜನೆಗಳು ನಮ್ಮೆಲ್ಲರ ಹಿಂದೆ ನಿಂತು ಕೇಂದ್ರ ಸರ್ಕಾರದಲ್ಲಿ ತಮ್ಮ ಒಂದು ಪ್ರಭಾವದಿಂದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ಮೇಲ್ಮನೆ ಸದಸ್ಯ ಅರುಣ ಶಹಾಪುರ ಮಾತನಾಡಿ, ಅನಂತಕುಮಾರ ಅವರು ಬಾಲ್ಯದಿಂದಲೇ ಸ್ವಯಂ ಸೇವಕರಾಗಿ, ಎಬಿವಿಪಿ ಹಾಗೂ ಸಂಘ ಪರಿವಾರದ ಅನೇಕ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಕರ್ನಾಟಕ ರಾಜ್ಯಾದ್ಯಂತ ತಿರುಗಾಡಿದ ವ್ಯಕ್ತಿ ಎಂದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಉಪ ಮೇಯರ್ ಗೋಪಾಲ ಘಟಕಾಂಬಳೆ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಗೂಳಪ್ಪ ಶಟಗಾರ, ಚಂದ್ರಶೇಖರ ಕವಟಗಿ, ಶಾಂತಪ್ಪ ಜತ್ತಿ, ಶಿವಾನಂದ ಮಾನಕರ, ಡಾ| ಸರಸ್ವತಿ ಚಿಮ್ಮಲಗಿ, ಮಲ್ಲಮ್ಮ ಜೋಗೂರ, ಸಂಗರಾಜ ದೇಸಾಯಿ, ಆರ್.ಎಸ್. ಪಾಟೀಲ ಕೂಚಬಾಳ, ವಿವೇಕ್ ಡಬ್ಬಿ, ಪ್ರಕಾಶ ಅಕ್ಕಲಕೋಟ, ಗೀತಾ ಕೂಗನುರ, ಭಾರತಿ ಭುಯ್ನಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.