ಅಂಜುಮನ್ ಸಂಸ್ಥೆಗೆ 25 ಸದಸ್ಯರ ಆಯ್ಕೆ
Team Udayavani, Jul 10, 2018, 12:59 PM IST
ಮುದ್ದೇಬಿಹಾಳ: ಇಲ್ಲಿನ ಅಂಜುಮನ್ ಎ ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿಯ 25 ಸದಸ್ಯ ಸ್ಥಾನಗಳಿಗೆ ರವಿವಾರ ನಡೆದಿದ್ದ ಮತದಾನ ಪ್ರಕ್ರಿಯೆ ಸಂಜೆ ಅಂತ್ಯಗೊಂಡು ಮತ ಎಣಿಕೆ ಕಾರ್ಯ ಇಲ್ಲಿನ ಅಂಜುಮನ್ ಪ್ರೌಢಶಾಲೆಯಲ್ಲಿ ಮಧ್ಯರಾತ್ರಿವರೆಗೂ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ನಡೆಯಿತು.
ಅಂತಿಮ ಫಲಿತಾಂಶವನ್ನು ಚುನಾವಣಾಧಿಕಾರಿಯೂ ಆಗಿರುವ ವಿಜಯಪುರದ ವಕ್ಫ್ ಅಧಿಕಾರಿ ಮಹ್ಮದ್‌ಅಬ್ದುಲ್ ಮನ್ನಾನ್ ಘೋಷಣೆ ಮಾಡಿದ್ದಾರೆ. ಸಂಸ್ಥೆಗೆ 2473 ನೋಂದಾಯಿತ ಮತದಾರರು ಇದ್ದರು. ಈ ಪೈಕಿ 1705 ಮತದಾರರು ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣ ಶೇ. 68.94 ಆಗಿತ್ತು. ಈ ಪೈಕಿ ನೋಟಾಕ್ಕೆ 17 ಮತಗಳು ಬಿದ್ದಿದ್ದು 107 ಮತಗಳು ತಿರಸ್ಕೃತಗೊಂಡಿವೆ.
ಅಭ್ಯರ್ಥಿಗಳು ಪಡೆದ ಹೆಚ್ಚಿನ ಮತಗಳ ಆಧಾರದ ಮೇಲೆ 25 ಸದಸ್ಯರನ್ನು ಆಯ್ಕೆ ಮಾಡಿದ್ದು ವಿವರ ಇಂತಿದೆ. ಹಾಜಿಸಾಬ ತೆಗ್ಗಿ (882), ಬುಡಾನ್‌ಸಾಬ್ ಸುತಾರ (813), ಅಬ್ದುಲ್‌ಜಬ್ಟಾರ್ ಗೋಲಂದಾಜ (655), ಅಯ್ಯೂಬ್ ಮನಿಯಾರ್ (594), ಅಲ್ಲಾಭಕ್ಷ ದೇಸಾಯಿ (576), ಕಲೀಮುದ್ದೀನ್ ಖಾಜಿ (568), ಇಸ್ಮಾಯಿಲ್ ಗೋಲಂದಾಜ್ (555), ಅಲ್ಲಾಭಕ್ಷ ನಾಯ್ಕೋಡಿ (551), ಶಬ್ಬೀರಅಹ್ಮದ್
ಪಟ್ನೂರ (549), ಬಶೀರಅಹ್ಮದ್ ಅತ್ತಾರ (537), ನೂರ್ ಏ ಆಲಮ್ ಖಾನ್ (521), ಉಮರ್‌ಫಾರೂಖ್ ಚೌಧರಿ (499), ಜಾವೀದಅಮ್ಮದ್ ಢವಳಗಿ (495), ಅರ್ಷದ್ ಹುಸೇನ್ ಮೋಮೀನ್ (494), ಸುಲೇಮಾನ್ ಮಮದಾಪುರ (492), ಲಾಳೇಮಶ್ಯಾಕ ನಾಯ್ಕೋಡಿ (466), ಅತಾಉಲ್ಲಾ ಭಂಡಾರಿ (458), ಅಬ್ದುಲ್‌ರಹೆಮಾನ್ ಹಳ್ಳೂರ (457), ಅಬ್ದುಲ್‌ಅಜೀಜ್ ನಾಯ್ಕೋಡಿ (450), ದಾವಲಸಾಬ ಸಂಕನಾಳ (437), ಮೊಹಮ್ಮದರಫೀಕ್ ಮಕಾನದಾರ (431), ಅಬ್ದುಲ್‌ವುಜೀದ್ ಮಕಾನದಾರ (435), ಮಹಿಬೂಬ ನಾಗರಾಳ (408), ಮಹಿಬೂಬ ಅತ್ತಾರ (405), ನೂರ್‌ಎಹುಸೇನ್ ನದಾಫ್ (396).
ವಿಜಯಪುರ ಜಿಲ್ಲಾ ವರ್ಕ್ ಉಪಾಧ್ಯಕ್ಷ ಯದ್‌ಶಕೀಲ್‌ಅಹ್ಮದ್ ಖಾಜಿ, ಅಂಜುಮನ್ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಎ. ಬಾಗವಾನ, ವಿಜಯಪುರ ಮತ್ತು ಬಾಗಲಕೋಟೆ ವಕ್ಫ್ ಸಿಬ್ಬಂದಿ, ಸಿಪಿಐ ರವಿಕುಮಾರ ಕಪ್ಪತ್ತನ್ನವರ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.