ಅಂಕಿ-ಅಂಶಗಳ ವಾರ್ಷಿಕ ಕೈಪಿಡಿ ಬಿಡುಗಡೆ
Team Udayavani, Jun 6, 2020, 6:19 AM IST
ವಿಜಯಪುರ: ವಿಜಯಪುರ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳ 2018-19ನೇ ಸಾಲಿನ ಅಂಕಿ ಅಂಶಗಳ ವಾರ್ಷಿಕ ಕೈಪಿಡಿಯನ್ನು ಜಿಲ್ಲಾಧಿ ಕಾರಿ ವೈ.ಎಸ್. ಪಾಟೀಲ ಬಿಡುಗಡೆ ಮಾಡಿದರು.
ಈ ಅಂಕಿ-ಆಂಶಗಳ ವಾರ್ಷಿಕ ಕೈಪಿಡಿಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಕಚೇರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜನಸಂಖ್ಯೆಗೆ ಸಂಬಂಧಿಸಿದ ಅಂಕಿ-ಅಂಶಗಳು 2011ರ ಜನಗಣತಿ, ಮಳೆಗೆ ಸಂಬಂಧಿಸಿದ ಅಂಕಿ ಅಂಶಗಳು 2018ಕ್ಕೆ ಸಂಬಂಧಿಸಿದ್ದು ಹಾಗೂ 2012ರ ಜಾನುವಾರು ಗಣತಿ, 2015-16ನೇ ಸಾಲಿನ ಕೃಷಿಗಳ ಅಂಕಿ ಅಂಶ ಒಳಗೊಂಡಿದೆ. ಶಿಕ್ಷಣ, ಸಂಶೋಧನೆ, ಯೋಜನೆ ಹೀಗೆ ವಿವಿಧ ಉದ್ದೇಶಗಳಿಗೆ ಈ ಅಂಕಿ ಆಂಶಗಳು ಆಧಾರವಾಗಲಿದ್ದು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಕೈಪಿಡಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯಲ್ಲಿ ಜಿಲ್ಲೆಯ ತಾಲೂಕಾ ನಕ್ಷೆ, ಭೂಬಳಕೆ ಮತ್ತು ಭೂಕವಚ ನಕ್ಷೆ, ಮಣ್ಣಿನ ನಕ್ಷೆ ಹಾಗೂ ಒಳಚರಂಡಿ ಮತ್ತು ಜಲಮೂಲಗಳ ನಕ್ಷೆ ಮಾಹಿತಿ, ತಾಲೂಕು, ಹೋಬಳಿ, ಗ್ರಾಪಂ, ಗ್ರಾಮಲೆಕ್ಕಿಗರ ವೃತ್ತಗಳು, ಜನವಸತಿ ಇರುವ, ಇಲ್ಲದ ಮತ್ತು ಒಟ್ಟು ಗ್ರಾಮಗಳ 2011ರ ಜನಗಣತಿ, ನಗರ ಸ್ಥಳೀಯ ಸಂಸ್ಥೆಗಳ ವಿವರ, ಅಗ್ನಿಶಾಮಕ ಠಾಣೆಗಳ ವಿವರ ಹಾಗೂ ಪಡಿತರ ಅಂಗಡಿಗಳು ಮತ್ತು ಆದ್ಯತಾ ಪಡಿತರ ಚೀಟಿದಾರರು ವಿವರ ನೀಡಲಾಗಿದೆ.
ಜಿಲ್ಲೆಯ ವಿಸ್ತೀರ್ಣ, ಜನಸಂಖ್ಯೆ, ಲಿಂಗಾನುಪಾತ, ಮಕ್ಕಳ ಶೇಕಡಾವಾರು, ಮಕ್ಕಳ ಲಿಂಗಾನುಪಾತ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಶೇಕಡಾವಾರು ಜನಸಂಖ್ಯೆ, ಕೃಷಿ ಸಾಗುವಳಿದಾರರು, ಕೃಷಿ ಕಾರ್ಮಿಕರು, ಗೃಹ ಕೈಗಾರಿಕೆ ಕೆಲಸಗಾರರು, ಕೃಷಿಯೇತರ ಕೆಲಸಗಾರರು ಹೀಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಅಂಕಿ-ಅಂಶಗಳನ್ನು ನೀಡಲಾಗಿದೆ ಅಧಿಕಾರಿಗಳು ವಿವರಿಸಿದರು.
ಈ ವಾರ್ಷಿಕ ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಂ. ಕುಲಕರ್ಣಿ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್ ನದಾಫ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.