ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆಗ್ರಹಿಸಿ ಮನವಿ
Team Udayavani, Sep 27, 2020, 4:48 PM IST
ವಿಜಯಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಮೃದ್ಧತೆ ಇದ್ದರೂ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೊರತೆಯಿಂದ ಹಿಂದುಳಿದಿದೆ. ಜಿಲ್ಲೆ ಅಭಿವೃದ್ಧಿಗೆ ತೊಡಕಾಗಿರುವ ಭಾರತೀಯ ಪುರಾತತ್ವ ಇಲಾಖೆ ಜಿಲ್ಲಾಡಳಿತಕ್ಕೆ ಪರವಾನಿಗೆ ನೀಡುವಂತೆ ದಿ ಬಿಜಾಪುರ ಹೇರಿಟೇಜ್ ಫೌಂಡೇಶನ್‌ನಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಬಿಜಾಪುರ ಹೇರಿಟೇಜ್ ಫೌಂಡೇಶನ್‌ನ ಅನೀಸ ಮನಿಯಾರ, ಜಗತ್ ಪ್ರಸಿದ್ಧ ಗೋಲಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕು. ವಿಜಯಪುರ ಜಿಲ್ಲೆಯ ಪುರಾತತ್ವ ಇಲಾಖೆ ಅಧೀನದ ಎಲ್ಲ ಪುರಾತನ ಸ್ಮಾರಕಗಳ ಎದುರು ಸಮಗ್ರ ಮಾಹಿತಿ ಫಲಕ ಅಳವಡಿಸಬೇಕು. ನಗರದ ಹೃದಯ ಭಾಗದಲ್ಲಿರುವ ಗಗನಮಹಲ್ ಕಂದಕ ಸ್ವತ್ಛಗೊಳಿಸಿ ಬೋಟಿಂಗ್ ಆರಂಭಿಸಬೇಕು. ಸಂಗೀತ ಕಾರಂಜಿ ಅಳವಡಿಸಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಹಮ್ಜಾ ಮೆಹಬೂಬ್ ಮಾತನಾಡಿ, ನಗರದ ಸುರಂಗ ಬಾವಡಿಯಲ್ಲಿ ಆದಿಲ್‌ಶಾಹಿ ಕಾಲದ ಬಾವಡಿಯಲ್ಲಿ ನೀರಾವರಿ ವ್ಯವಸ್ಥೆಯ ಪುನಶ್ಚೇತನಗೊಳಿಸಿ ಲೈಟಿಂಗ್ ವ್ಯವಸ್ಥೆ ಮಾಡಬೇಕು. ಪುರಾತತ್ವ ಸ್ಥಳಗಳ ಸುತ್ತಮುತ್ತ ಸುಮಾರು 100 ಮೀ. ಅಂತರ ಕಾಯ್ದುಕೊಂಡು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬೇಕು. ಪ್ರವಾಸಿಗರು ಪುರಾತ್ವ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡಲು ಸೂಕ್ತ ರಸ್ತೆ, ಕುಡಿಯುವ ನೀರು ಹಾಗೂ ಶೌಚಾಲಯಗಳಂಥ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಪ್ರಮುಖರಾದ ಅಮೀತ ಹುದ್ದಾರ, ಹಮ್ಜಾ ಮೆಹಬೂಬ್, ಆಸೀಫ್ ಹೆರಿಕಲ್, ಶೌಖತ್ ಕೋತ್ವಾಲ್, ಕಾವ್ಯಾ ಹಣಮಸಾಗರ, ಯುವರಾಜ ಚೋಳಕೆ, ಹಿರೇಮಠ, ಸತೀಶ, ಶಕೀಲ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.